* ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮಾರ್ಚ್ 22 ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.* ಐಪಿಎಲ್ 2025ರ ವೇಳಾಪಟ್ಟಿಗಾಗಿ ಈ ಬಾರಿ 10 ತಂಡಗಳು ಆಡಲಿದ್ದು ಬಿಸಿಸಿಐ ಎಲ್ಲಾ ಪಂದ್ಯಗಳ ಸ್ಥಳ, ತಂಡಗಳು ಮತ್ತು ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಅದರ ಪ್ರಕಾರ 18ನೇ ಋತುವಿನ ಮೊದಲ ಪಂದ್ಯ ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ* 17 ವರ್ಷಗಳ ನಂತರ ಎರಡೂ ತಂಡಗಳು ಐಪಿಎಲ್ನ ಉದ್ಘಾಟನಾ ಪಂದ್ಯವನ್ನು ಆಡಲಿವೆ. ಆರ್ಸಿಬಿ ಮತ್ತು ಕೆಕೆಆರ್ 2008ರಲ್ಲಿ ಉದ್ಘಾಟನಾ ಪಂದ್ಯವನ್ನು ಆಡಿದ್ದವು.* ಐಪಿಎಲ್ ಪಂದ್ಯಗಳು 65 ದಿನಗಳ ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಪ್ಲೇಆಫ್ಗಳು ಮತ್ತು ಫೈನಲ್ಗಳು ಸೇರಿದಂತೆ 74 ಪಂದ್ಯಗಳು 13 ಸ್ಥಳಗಳಲ್ಲಿ ನಡೆಯಲಿವೆ. ಇವುಗಳಲ್ಲಿ 70 ಪಂದ್ಯಗಳು ಗುಂಪು ಹಂತದದ್ದಾಗಿರುತ್ತವೆ.* ಉದ್ಘಾಟನಾ ಪಂದ್ಯದ ನಂತರ, ಎರಡನೇ ದಿನ (ಮಾರ್ಚ್ 23) ಭಾನುವಾರ, ಮಧ್ಯಾಹ್ನ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಹಣಾಹಣಿ ನಡೆಯಲಿದೆ. ಅದೇ ದಿನ ಸಂಜೆ 7.30 ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಲಿದೆ.* ಐಪಿಎಲ್ 2025ರಲ್ಲಿ 70 ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಇದರ ನಂತರ ಲೀಗ್ನ ಅಗ್ರ 4 ತಂಡಗಳು ಪ್ಲೇಆಫ್ಗಾಗಿ ಸ್ಪರ್ಧಿಸುತ್ತವೆ. ಈ ಬಾರಿ ಪ್ಲೇಆಫ್ನಲ್ಲಿ ಮೊದಲ ಪಂದ್ಯ ಅಂದರೆ ಕ್ವಾಲಿಫೈಯರ್-1 ಮೇ 20 ರಂದು ನಡೆಯಲಿದೆ.* ಎಲಿಮಿನೇಟರ್ ಪಂದ್ಯ ಮೇ 21 ರಂದು ನಡೆಯಲಿದ್ದು, ಕ್ವಾಲಿಫೈಯರ್-2 ರ ಪಂದ್ಯ ಮೇ 23 ರಂದು ನಡೆಯಲಿದೆ. ಅಂತಿಮವಾಗಿ ಮೇ 25 ರಂದು ನಡೆಯುವ ಫೈನಲ್ನಲ್ಲಿ ಎರಡು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.