* ನಿರೀಕ್ಷೆಯಂತೆಯೇ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.* ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.* ಆರ್ ಸಿಬಿ ನೀಡಿದ 191 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನಷ್ಟೇ ಗಳಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ 24 ರನ್ ಗಳಿಸಿದರೆ, ಪ್ರಭ್ ಸಿಮ್ರನ್ ಸಿಂಗ್ 26 ರನ್ ಗಳಿಸಿ ಔಟಾದರು.* ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಯಶ್ ದಯಾಳ್, ಜಾಶ್ ಹೇಜಲ್ ವುಡ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 1 ವಿಕೆಟ್ ಪಡೆದರು.* IPL 2025 : ಸೀಸನ್: 18.ವಿಜೇತ: ರಾಯಲ್ ಚಾಲೆಂಜರ್ಸ್ ಬೆಂಗಳೂರು. RCB 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.ರನ್ನರ್ ಅಪ್: ಪಂಜಾಬ್ ಕಿಂಗ್ಸ್.ಬಹುಮಾನ: 🏆 ವಿಜೇತರಿಗೆ ₹20 ಕೋಟಿ ಮೊತ್ತ ನೀಡಲಾಯಿತು.ರನ್ನರ್ ಅಪ್ ಬಹುಮಾನ: ₹13 ಕೋಟಿ ಮೊತ್ತ ನೀಡಲಾಯಿತು.2025 ಆರೆಂಜ್ ಕ್ಯಾಪ್ 🧢 ವಿಜೇತ: ಸಾಯಿ ಸುದರ್ಶನ್.2025 ಪರ್ಪಲ್ ಕ್ಯಾಪ್ 🧢 ವಿಜೇತ: ಪ್ರಸಿದ್ಧ್ ಕೃಷ್ಣ.IPL 2025 ಪಂದ್ಯದ ಅಂತಿಮ ಆಟಗಾರ: ಕೃನಾಲ್ ಪಾಂಡ್ಯ.IPL 2025 ಪಂದ್ಯದ ಅಂತಿಮ ಸ್ಟ್ರೈಕರ್: ಜಿತೇಶ್ ಶರ್ಮಾ.IPL 2025 ಋತುವಿನ ಅಂತಿಮ ಡಾಟ್ ಬಾಲ್ಗಳು: ಮೊಹಮ್ಮದ್ ಸಿರಾಜ್.IPL 2025 ಋತುವಿನ ಸೂಪರ್ ಸ್ಟ್ರೈಕರ್ (ಹೆಚ್ಚು ಸಿಕ್ಸ್ಗಳು): ನಿಕೋಲಸ್ ಪೂರನ್.IPL 2025 ಋತುವಿನ ಉದಯೋನ್ಮುಖ ಆಟಗಾರ: ಸಾಯಿ ಸುದರ್ಶನ್.IPL 2025 ರ ಅತ್ಯಂತ ಮೌಲ್ಯಯುತ ಆಟಗಾರ: ಸೂರ್ಯಕುಮಾರ್ ಯಾದವ್. IPL 2025 ರ ಋತುವಿನ ಪರಿಪೂರ್ಣ ಕ್ಯಾಚ್: ಕಾಮಿಂಡು ಮೆಂಡಿಸ್. IPL 2025 ರ ಫೇರ್ಪ್ಲೇ ಪ್ರಶಸ್ತಿ: ಚೆನ್ನೈ ಸೂಪರ್ ಕಿಂಗ್ಸ್. IPL 2025 ರ ಅತ್ಯುತ್ತಮ ಪಿಚ್ ಮತ್ತು ಮೈದಾನ: ದೆಹಲಿ (ಡಿಡಿಸಿಎ).