* ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.* ತಂಡವನ್ನು ಎರಡು ಬಾರಿ ಪ್ಲೇಆಫ್ಗೆ ಮುನ್ನಡೆಸಿದ್ದರೂ ಕಪ್ ಗೆಲ್ಲಲು ವಿಫಲವಾದ ಕಾರಣಕ್ಕೆ ಕೆಎಲ್ ರಾಹುಲ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ಕೈಬಿಟ್ಟಿತ್ತು. * ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಬರೋಬ್ಬರಿ 27 ಕೋಟಿ ರೂ. ನೀಡಿ ಪಂತ್ ಅವರನ್ನು ಖರೀದಿಸಿತು ಮತ್ತು ಲೀಗ್ ಇತಿಹಾಸದಲ್ಲಿಯೇ ಅವರು ಅತ್ಯಂತ ದುಬಾರಿ ಆಟಗಾರರಾದರು. * 26.75 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗುವ ಮೂಲಕ ಶ್ರೇಯಸ್ ಅಯ್ಯರ್ ಲೀಗ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು.* ಈ ಮೂಲಕ ಉಭಯ ಆಟಗಾರರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. ಮಿಚೆಲ್ ಅವರು 24.75 ಕೋಟಿ ರೂ.ಗೆ ಹರಾಜಾಗಿದ್ದರು.* ಪಂತ್ 2016 ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆಡಿರುವ 110 ಪಂದ್ಯಗಳಲ್ಲಿ 3,284 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 18 ಅರ್ಧಶತಕಗಳನ್ನು ಗಳಿಸಿದ್ದಾರೆ. 2021 ರಲ್ಲಿ ಪಂತ್ ತಂಡದ ನಾಯಕನ ಸ್ಥಾನಕ್ಕೇರಿದರು ಅದೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ಗೆ ಪ್ರವೇಶಿಸಿತ್ತು.- ಲಕ್ನೋ ಸೂಪರ್ ಜೈಂಟ್ಸ್ ತಂಡ- ಬ್ಯಾಟರ್ಸ್: ಮಾರ್ಕ್ರಮ್, ಡೇವಿಡ್ ಮಿಲ್ಲರ್, ಹಿಮ್ಮತ್ ಸಿಂಗ್, ಮ್ಯಾಥ್ಯೂ ಬ್ರೀಟ್ಜ್ಕೆ.- ವಿಕೆಟ್ ಕೀಪರ್ : ರಿಷಬ್ ಪಂತ್, ನಿಕೋಲಸ್ ಪೂರನ್ (ರಿಟೇನ್), ಆರ್ಯನ್ ಜ್ಯುವೆಲ್.- ಆಲ್ರೌಂಡರ್ಗಳು: ಅಬ್ದುಲ್ ಸಮದ್ (ಸ್ಪಿನ್), ಆಯುಷ್ ಬದೋನಿ (ರಿಟೇನ್), ಮಿಚೆಲ್ ಮಾರ್ಷ್ (ಪೇಸ್), ಶಹಬಾಜ್ ಅಹ್ಮದ್ (ಸ್ಪಿನ್), ಯುವರಾಜ್ ಚೌಧರಿ (ಸ್ಪಿನ್), ರಾಜವರ್ಧನ್ ಹಂಗರ್ಗೇಕರ್ (ಪೇಸ್), ಅರ್ಶಿನ್ ಕುಲಕರ್ಣಿ (ಪೇಸ್).- ಸ್ಪಿನ್ನರ್ಗಳು: ರವಿ ಬಿಷ್ಣೋಯ್ (ರಿಟೇನ್), ಎಂ ಸಿದ್ಧಾರ್ಥ್, ದಿಗ್ವೇಶ್ ಸಿಂಗ್