* ಇನ್ವೆಸ್ಟ್ ಕರ್ನಾಟಕದಡಿ ₹6,23,970 ಕೋಟಿ ಹೂಡಿಕೆ ಒಡಂಬಡಿಕೆ ಕೈಗೊಳ್ಳಲಾಗಿದ್ದು, 1,101 ಕಂಪನಿಗಳಿಗೆ ₹4,03,533 ಕೋಟಿ ಹೂಡಿಕೆ ಅನುಮೋದನೆ ದೊರೆತಿದೆ. ಇದರಿಂದ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಯುವಜನರಿಗೆ ಕೌಶಲ ತರಬೇತಿ ಜತೆಗೆ ಉದ್ಯೋಗಾವಕಾಶ ಒದಗಿಸಲಾಗುತ್ತಿದೆ.* ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ರೂಪಿಸಲಾಗುತ್ತಿದ್ದು, 5ನೇ ತರಗತಿವರೆಗೂ ಕನ್ನಡ ಅಥವಾ ಮಾತೃಭಾಷೆ ಬೋಧನಾ ಮಾಧ್ಯಮವಾಗಿರಲಿದೆ. * ಈ ವರ್ಷ ₹2,500 ಕೋಟಿ ವೆಚ್ಚದಲ್ಲಿ 500 ಕೆಪಿಎಸ್ ಶಾಲೆಗಳು ಸ್ಥಾಪನೆಗೊಳ್ಳುತ್ತವೆ. 53 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ, ಮಧ್ಯಾಹ್ನದ ಊಟ, ಹಾಲು ಮತ್ತು ಮೊಟ್ಟೆ ಒದಗಿಸಲಾಗುತ್ತಿದೆ. ಅತಿಥಿ ಶಿಕ್ಷಕರ ಹಾಗೂ ಊಟ ಸಿಬ್ಬಂದಿಯ ಗೌರವಧನವೂ ಹೆಚ್ಚಿಸಲಾಗಿದೆ.* ಇನ್ವೆಸ್ಟ್ ಕರ್ನಾಟಕದಡಿ ₹6,23,970 ಕೋಟಿ ಹೂಡಿಕೆ ಒಡಂಬಡಿಕೆ ಕೈಗೊಳ್ಳಲಾಗಿದ್ದು, 1,101 ಕಂಪನಿಗಳಿಗೆ ₹4,03,533 ಕೋಟಿ ಹೂಡಿಕೆ ಅನುಮೋದನೆ ದೊರೆತಿದೆ.* ಇದರಿಂದ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಯುವಜನರಿಗೆ ಕೌಶಲ ತರಬೇತಿ ಜತೆಗೆ ಉದ್ಯೋಗಾವಕಾಶ ಒದಗಿಸಲಾಗುತ್ತಿದೆ.* ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ರೂಪಿಸಲಾಗುತ್ತಿದ್ದು, 5ನೇ ತರಗತಿವರೆಗೂ ಕನ್ನಡ ಅಥವಾ ಮಾತೃಭಾಷೆ ಬೋಧನಾ ಮಾಧ್ಯಮವಾಗಿರಲಿದೆ. ಈ ವರ್ಷ ₹2,500 ಕೋಟಿ ವೆಚ್ಚದಲ್ಲಿ 500 ಕೆಪಿಎಸ್ ಶಾಲೆಗಳು ಸ್ಥಾಪನೆಗೊಳ್ಳುತ್ತವೆ.* 53 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ, ಮಧ್ಯಾಹ್ನದ ಊಟ, ಹಾಲು ಮತ್ತು ಮೊಟ್ಟೆ ಒದಗಿಸಲಾಗುತ್ತಿದೆ. ಅತಿಥಿ ಶಿಕ್ಷಕರ ಹಾಗೂ ಊಟ ಸಿಬ್ಬಂದಿಯ ಗೌರವಧನವೂ ಹೆಚ್ಚಿಸಲಾಗಿದೆ.* “ನನ್ನ ವೃತ್ತಿ, ನನ್ನ ಆಯ್ಕೆ” ಯೋಜನೆಯಡಿಯಲ್ಲಿ 8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 150 ಸರ್ಕಾರಿ ಶಾಲೆಗಳಲ್ಲಿ ವೃತ್ತಿಪರ ಮಾರ್ಗದರ್ಶನ ನೀಡಲಾಗುತ್ತಿದೆ. ಇದುವರೆಗೆ 35,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.* ಶಿಕ್ಷಣ ಕ್ಷೇತ್ರಕ್ಕೆ ₹65,000 ಕೋಟಿ ವಿನಿಯೋಗವಾಗುತ್ತಿದ್ದು, ವಸತಿ ಶಾಲೆಗಳು ಮತ್ತು ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚು ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ.* ವಸತಿ ಶಾಲೆಗಳ ಉತ್ತೀರ್ಣ ಪ್ರಮಾಣ ಶೇ.98.99 ಆಗಿದೆ. ಅಗತ್ಯವಿರುವ ಕಡೆಗಳಲ್ಲಿ ಹೊಸ ವಸತಿ ಶಾಲೆಗಳು ಸ್ಥಾಪನೆಗೊಳ್ಳಲಿವೆ.