ಅಂತಾರಾಷ್ಟ್ರೀಯ ಕ್ರಿಮಿನಲ್ ಪೋಲೀಸ್ ಸಂಸ್ಥೆ (ಇಂಟರ್ಪೋಲ್) ದುಬೈ ಮೂಲದ ಭಾರತೀಯ ಮಾದಕವಸ್ತು ಕಳ್ಳಸಾಗಣೆದಾರ ಪವನ್ ಠಾಕೂರ್ ವಿರುದ್ಧ ಮೊದಲ ಸಿಲ್ವರ್ ನೋಟಿಸ್ ಹೊರಡಿಸಿದೆ. ಇದರಿಂದ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಆಸ್ತಿ-ಪಾಸ್ತಿ ಜಪ್ತಿ ಮಾಡಲು ಅವಕಾಶ ಸಿಗಲಿದೆ.* ಸಿಲ್ವರ್ ನೋಟಿಸ್ ಉದ್ದೇಶ : ಈ ನೋಟಿಸ್ ದೇಶಾಂತರಗಳಲ್ಲಿ ಪರಾರಿಯಾದವರ ಆರ್ಥಿಕ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ಆಸ್ತಿ ಪತ್ತೆ, ಗುರುತು ಮತ್ತು ಜಪ್ತಿ ಮಾಡಲು ನೆರವಾಗುತ್ತದೆ. ಇದು 2025ರ ಜನವರಿಯಿಂದ ಜಾರಿಗೆ ಬಂದಿದ್ದು, ಪ್ರಸ್ತುತ 52 ದೇಶಗಳಲ್ಲಿ ಪ್ರಯೋಗಾತ್ಮಕವಾಗಿ ಜಾರಿಗೆ ಬಂದಿದೆ.* ಪ್ರಾಯೋಗಿಕ ಅವಧಿ : 2025ರ ನವೆಂಬರ್ ವರೆಗೆ ಇದು ಪ್ರಾಯೋಗಿಕ ಅವಧಿಯಲ್ಲಿ ಇರುತ್ತದೆ. ಪ್ರತಿ ದೇಶವು ಗರಿಷ್ಠ 9 ಸಿಲ್ವರ್ ನೋಟಿಸ್ಗಳನ್ನು ಹೊರಡಿಸಲು ಅವಕಾಶವಿದೆ.* ಇದುವರೆಗೆ ಇಂಟರ್ಪೋಲ್ ಕೇವಲ ವ್ಯಕ್ತಿಗಳ ಬಂಧನಕ್ಕೆ ಮಾತ್ರ ನೋಟಿಸ್ ಹೊರಡಿಸುತ್ತಿತ್ತು. ಈಗ ಅವರ ಆಸ್ತಿಯ ಮೇಲೂ ಕ್ರಮ ಕೈಗೊಳ್ಳಬಹುದಾಗಿದೆ. ಇದರಿಂದ ವಂಚಕರ ಹಣಕಾಸಿನ ಜಾಲವನ್ನು ನಿಗ್ರಹಿಸಲು ಸುಲಭವಾಗಲಿದೆ.* ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಮೊದಲಾದವರು ಒಂದು ದೇಶದಲ್ಲಿ ವಂಚನೆ ಮಾಡಿ, ಬೇರೆ ದೇಶಗಳಲ್ಲಿ ಆಸ್ತಿಗಳನ್ನು ಹೊಂದಿದ್ದರು. * ಹಿಂದಿನ ಕಾನೂನಿನಲ್ಲಿ ಅವರನ್ನು ಬಂಧಿಸಬಹುದಿತ್ತು, ಆದರೆ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿರಲಿಲ್ಲ. ಈಗ ಸ್ಥಳೀಯ ಸಂಸ್ಥೆಗಳು ನೇರವಾಗಿ ಆಸ್ತಿಯನ್ನು ಜಪ್ತು ಮಾಡಬಹುದು.ಇಂಟರ್ಪೋಲ್ನ ಇತರೆ ನೋಟಿಸ್ಗಳು :- ಕೆಂಪು – ಅಪರಾಧಿಯನ್ನು ಬಂಧಿಸಲು- ಹಳದಿ – ಕಾಣೆಯಾದವರ ಪತ್ತೆಗೆ- ನೀಲಿ – ತನಿಖೆಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು- ಕಪ್ಪು – ಗುರುತಿಸಲಾಗದ ಮೃತದೇಹಗಳ ಪತ್ತೆಗೆ- ಆರೆಂಜ್ – ಸಾರ್ವಜನಿಕ ಸುರಕ್ಷತೆಗೆ ಅಪಾಯವಿದ್ದಾಗ- ನೇರಳೆ – ಅಪರಾಧ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು- ಹಸಿರು – ಅಪರಾಧಿಗಳ ಬಗ್ಗೆ ಎಚ್ಚರಿಕೆ ನೀಡಲು