Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜನವರಿ 31: ಅಂತರಾಷ್ಟ್ರೀಯ ಜೀಬ್ರಾ ದಿನ
Authored by:
Akshata Halli
Date:
31 ಜನವರಿ 2026
➤ ಪ್ರತಿ ವರ್ಷ
ಜನವರಿ 31
ರಂದು ವಿಶ್ವದಾದ್ಯಂತ 'ಅಂತರಾಷ್ಟ್ರೀಯ ಜೀಬ್ರಾ ದಿನ'ವನ್ನು ಆಚರಿಸಲಾಗುತ್ತದೆ. ಪ್ರಕೃತಿಯ ಅದ್ಭುತ ಸೃಷ್ಟಿಯಾದ ಜೀಬ್ರಾಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳ ಸಂರಕ್ಷಣೆಗೆ ಒತ್ತು ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.ಅಂತರಾಷ್ಟ್ರೀಯ ಜೀಬ್ರಾ ದಿನವನ್ನು ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ ಮತ್ತು ಕನ್ಸರ್ವೇಶನ್ ಬಯಾಲಜಿ ಇನ್ಸ್ಟಿಟ್ಯೂಟ್ನಂತಹ ಪ್ರಮುಖ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಪ್ರಾರಂಭಿಸಿದವು.
➤ ಕಳೆದ ಕೆಲವು ದಶಕಗಳಿಂದ ಆಫ್ರಿಕಾದಲ್ಲಿ ಜೀಬ್ರಾಗಳ ಆವಾಸಸ್ಥಾನಗಳ ನಾಶ ಮತ್ತು ಬೇಟೆಯಾಡುವಿಕೆಯಿಂದಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದಿನದ ಆಚರಣೆ ಜಾರಿಗೆ ಬಂದಿತು.
➤ ವಿಶ್ವದಲ್ಲಿ ಪ್ರಮುಖವಾಗಿ ಮೂರು ಜಾತಿಯ ಜೀಬ್ರಾಗಳು ಕಂಡುಬರುತ್ತವೆ:
1.
ಗ್ರೇವಿಸ್ ಜೀಬ್ರಾ (Grevy’s Zebra):
ಇದು ಜೀಬ್ರಾಗಳಲ್ಲೇ ಅತ್ಯಂತ ದೊಡ್ಡದಾದ ತಳಿಯಾಗಿದ್ದು, ಪ್ರಸ್ತುತ ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ
ಅಳಿವಿನಂಚಿನಲ್ಲಿರುವ (Endangered)
ಪ್ರಾಣಿ ಎಂದು ಗುರುತಿಸಲ್ಪಟ್ಟಿದೆ. ಇವು ಪ್ರಮುಖವಾಗಿ ಪೂರ್ವ ಆಫ್ರಿಕಾದ ಕೀನ್ಯಾ ಮತ್ತು ಇಥಿಯೋಪಿಯಾದ ಅರೆ-ಶುಷ್ಕ ಪ್ರದೇಶಗಳಲ್ಲಿ ಕಂಡುಬರುತ್ತವೆ.
2.
ಪರ್ವತ ಜೀಬ್ರಾ (Mountain Zebra):
ಹೆಸರೇ ಸೂಚಿಸುವಂತೆ ಇವು ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಇವುಗಳನ್ನು ಅಸುರಕ್ಷಿತ (Vulnerable) ವರ್ಗಕ್ಕೆ ಸೇರಿಸಲಾಗಿದ್ದು, ಇವುಗಳ ಸಂತತಿ ಹೆಚ್ಚಾಗಿ ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಅಂಗೋಲಾದಲ್ಲಿ ಕಂಡುಬರುತ್ತದೆ.
3.
ಬಯಲು ಜೀಬ್ರಾ (Plains Zebra):
ಇದು ಜೀಬ್ರಾಗಳಲ್ಲೇ ಅತ್ಯಂತ ಸಾಮಾನ್ಯ ಮತ್ತು ಹೆಚ್ಚು ಜನಪ್ರಿಯವಾದ ತಳಿಯಾಗಿದೆ. ಇವುಗಳನ್ನು ಅಳಿವಿನ ಸಮೀಪವಿರುವ (Near Threatened) ಎಂದು ವರ್ಗೀಕರಿಸಲಾಗಿದ್ದು, ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ವಿಶಾಲವಾದ ಹುಲ್ಲುಗಾವಲು ಪ್ರದೇಶಗಳಲ್ಲಿ ಇವುಗಳನ್ನು ದೊಡ್ಡ ಹಿಂಡುಗಳಲ್ಲಿ ಕಾಣಬಹುದು.
➤
ಪರಿಸರ ವ್ಯವಸ್ಥೆಯಲ್ಲಿ ಜೀಬ್ರಾಗಳ ಮಹತ್ವ:
-
ಹುಲ್ಲುಗಾವಲು ನಿರ್ವಹಣೆ:
ಜೀಬ್ರಾಗಳು ಒರಟಾದ ಮತ್ತು ಗಟ್ಟಿಯಾದ ಹುಲ್ಲನ್ನು ತಿನ್ನುತ್ತವೆ. ಇದರಿಂದ ಇತರ ಸಣ್ಣ ಸಸ್ಯಾಹಾರಿ ಪ್ರಾಣಿಗಳಿಗೆ ಮೃದುವಾದ ಹುಲ್ಲು ಲಭ್ಯವಾಗುವಂತೆ ಮಾಡುತ್ತದೆ.
-
ಜೀವವೈವಿಧ್ಯದ ಕೊಂಡಿ:
ಇವು ಸಿಂಹ, ಚಿರತೆ ಮತ್ತು ಹೈನಾ ಅಂತಹ ಮಾಂಸಾಹಾರಿ ಪ್ರಾಣಿಗಳಿಗೆ ಪ್ರಮುಖ ಆಹಾರದ ಮೂಲವಾಗಿವೆ.
-
ವಲಸೆ ಮತ್ತು ಬೀಜ ಪ್ರಸರಣ:
ಜೀಬ್ರಾಗಳ ಸುದೀರ್ಘ ವಲಸೆಯು ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಚಲನೆಗೆ ಮತ್ತು ಬೀಜಗಳ ಹರಡುವಿಕೆಗೆ ಸಹಾಯ ಮಾಡುತ್ತದೆ.
➤
ಜೀಬ್ರಾಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು:
- ಪ್ರತಿಯೊಂದು ಜೀಬ್ರಾದ ದೇಹದ ಮೇಲಿರುವ ಪಟ್ಟೆಗಳು ಮನುಷ್ಯರ 'ಫಿಂಗರ್ಪ್ರಿಂಟ್'ಗಳಂತೆ ವಿಶಿಷ್ಟವಾಗಿರುತ್ತವೆ. ಯಾವುದೇ ಎರಡು ಜೀಬ್ರಾಗಳ ಪಟ್ಟೆಗಳು ಒಂದೇ ತರ ಇರುವುದಿಲ್ಲ
- ಇವುಗಳ ಪಟ್ಟೆಗಳು ಸೂರ್ಯನ ಶಾಖವನ್ನು ನಿಯಂತ್ರಿಸಲು ಮತ್ತು ಕೀಟಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತವೆ.
- ಜೀಬ್ರಾಗಳು ಯಾವಾಗಲೂ ಹಿಂಡುಗಳಲ್ಲಿ ವಾಸಿಸುತ್ತವೆ. ಇವುಗಳ ಗುಂಪನ್ನು
'ಡ್ಯಾಝಲ್' (Dazzle)
ಎಂದು ಕರೆಯಲಾಗುತ್ತದೆ.
Take Quiz
Loading...