Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಂತರರಾಷ್ಟ್ರೀಯ ಮಲೇರಿಯಾ ಸಮ್ಮೇಳನ (IMC) 2026: ನವದೆಹಲಿಯಲ್ಲಿ ಯಶಸ್ವಿ ಮುಕ್ತಾಯ
Authored by:
Akshata Halli
Date:
10 ಮಾರ್ಚ್ 2026
➤
ಭಾರತವು 2030ರ ವೇಳೆಗೆ ಮಲೇರಿಯಾ ಮುಕ್ತವಾಗುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ನವದೆಹಲಿಯಲ್ಲಿ ಮಾರ್ಚ್ 7 ರಿಂದ 9, 2026ರವರೆಗೆ ನಡೆದ ಮೂರು ದಿನಗಳ
ಅಂತರರಾಷ್ಟ್ರೀಯ ಮಲೇರಿಯಾ ಸಮ್ಮೇಳನ (IMC) 2026
ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಡಿಯ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ (NIMR) ಆಯೋಜಿಸಿದೆ. ಜಾಗತಿಕ ತಜ್ಞರನ್ನು ಒಂದೆಡೆ ಸೇರಿಸಿ ಮಲೇರಿಯಾ ನಿರ್ಮೂಲನೆಗೆ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನಗಳ ಬಳಕೆಯ ಕುರಿತು ಚರ್ಚಿಸಿತು.
ಧ್ಯೇಯವಾಕ್ಯ (Theme):
"Discovery, Development and Delivery: Driving Malaria Elimination and Beyond" (ಶೋಧನೆ, ಅಭಿವೃದ್ಧಿ ಮತ್ತು ವಿತರಣೆ: ಮಲೇರಿಯಾ ನಿರ್ಮೂಲನೆ ಮತ್ತು ಆಚೆಗೆ).
➤
ಸಮ್ಮೇಳನದ ಪ್ರಮುಖ ಚರ್ಚಾ ವಿಷಯಗಳು:
ಈ ಸಮ್ಮೇಳನವು ಪ್ರಮುಖವಾಗಿ ಮೂರು ಹಂತಗಳ ಮೇಲೆ ಕೇಂದ್ರೀಕೃತವಾಗಿತ್ತು:
- ಶೋಧನೆ (Discovery):
ಮಲೇರಿಯಾ ಪರಾವಲಂಬಿ ಜೀವಿಗಳ ಜೀವಶಾಸ್ತ್ರ, ಪ್ರಸರಣದ ಡೈನಾಮಿಕ್ಸ್ ಮತ್ತು ಔಷಧ ನಿರೋಧಕ ಶಕ್ತಿಯನ್ನು (Drug Resistance) ಎದುರಿಸುವ ಕುರಿತು ಚರ್ಚಿಸಲಾಯಿತು.
- ಅಭಿವೃದ್ಧಿ (Development):
ಮಲೇರಿಯಾ ಪತ್ತೆಹಚ್ಚುವ ಹೊಸ ರೋಗನಿರ್ಣಯ ವಿಧಾನಗಳು (Diagnostics), ನಿಗಾ ತಂತ್ರಜ್ಞಾನಗಳು (Surveillance Tools) ಮತ್ತು ಲಸಿಕೆ ಸಂಶೋಧನೆಯಲ್ಲಿನ ಪ್ರಗತಿಯನ್ನು ಪ್ರದರ್ಶಿಸಲಾಯಿತು.
- ವಿತರಣೆ (Delivery):
ವೈಜ್ಞಾನಿಕ ಸಂಶೋಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳ ಮೂಲಕ ಮಲೇರಿಯಾ ನಿಯಂತ್ರಣವನ್ನು ಬಲಪಡಿಸುವ ಬಗ್ಗೆ ಒತ್ತು ನೀಡಲಾಯಿತು.
➤
ಮಲೇರಿಯಾ ರೋಗವು
ಪ್ಲಾಸ್ಮೋಡಿಯಂ (Plasmodium)
ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ ಮತ್ತು ಇದು ಸೋಂಕಿತ
ಹೆಣ್ಣು ಅನಾಫಿಲಿಸ್ (Anopheles)
ಸೊಳ್ಳೆಯ ಕಡಿತದ ಮೂಲಕ ಮಾನವರಿಗೆ ಹರಡುತ್ತದೆ.
Take Quiz
Loading...