Job Description: ➤ ಜಗತ್ತಿನಾದ್ಯಂತ ಮಾನವ ಹಕ್ಕುಗಳ ರಕ್ಷಣೆ, ಮಾನವೀಯ ಮೌಲ್ಯಗಳ ಪುನರುತ್ಥಾನ ಮತ್ತು ಯಾವುದೇ ರೀತಿಯ ಅಮಾನವೀಯ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 26 ರಂದು ವಿಶ್ವಸಂಸ್ಥೆಯ ನೇತೃತ್ವದಲ್ಲಿ 'ಅಂತರರಾಷ್ಟ್ರೀಯ ಹಿಂಸೆಗೊಳಗಾದ ಬಲಿಪಶುಗಳ ಬೆಂಬಲ ದಿನ' (International Day in Support of Victims of Torture) ವನ್ನು ಆಚರಿಸಲಾಗುತ್ತದೆ.➤ ಯಾವುದೇ ಒಬ್ಬ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ತೀವ್ರವಾದ ದೈಹಿಕ ಅಥವಾ ಮಾನಸಿಕ ವೇದನೆಯನ್ನು ಉಂಟುಮಾಡುವುದನ್ನು 'ಹಿಂಸೆ' (Torture) ಎಂದು ಕರೆಯಲಾಗುತ್ತದೆ. ಇದು ಮಾನವನ ಮೂಲಭೂತ ಹಕ್ಕುಗಳು ಮತ್ತು ಘನತೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಹಿಂಸೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಜಗತ್ತಿನ ಹಲವು ಭಾಗಗಳಲ್ಲಿ ಇದು ಇಂದಿಗೂ ಮುಂದುವರಿದಿದೆ. ಹಿಂಸೆಗೆ ಒಳಗಾದವರ ಧ್ವನಿಯಾಗಲು ಮತ್ತು ಅವರ ಪುನರ್ವಸತಿಗೆ ಬೆಂಬಲ ನೀಡಲು ಈ ದಿನವನ್ನು ಮೀಸಲಿಡಲಾಗಿದೆ.➤ ಡೆನ್ಮಾರ್ಕ್ ದೇಶದ ಪ್ರಸ್ತಾಪದ ಮೇರೆಗೆ, 1948 ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (UDHR) ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 12, 1997 ರಂದು ಕೈಗೊಂಡ ನಿರ್ಣಯದ (Resolution 52/149) ಪ್ರಕಾರ, ಮೊದಲ ಬಾರಿಗೆ 1998 ಜೂನ್ 26 ರಂದು ‘ಅಂತರರಾಷ್ಟ್ರೀಯ ಹಿಂಸೆಗೊಳಗಾದ ಬಲಿಪಶುಗಳ ಬೆಂಬಲ ದಿನ’ವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯ ಚಾರ್ಟರ್‌ಗೆ ಸಹಿ ಹಾಕಿದ (1945) ಮತ್ತು ಹಿಂಸೆ ವಿರೋಧಿ ಒಪ್ಪಂದ (CAT) ಜಾರಿಗೆ ಬಂದ (1987) ಐತಿಹಾಸಿಕ ನೆನಪಿಗಾಗಿ ಜೂನ್ 26 ಅನ್ನು ಆಯ್ಕೆ ಮಾಡಲಾಗಿದೆ.➤ ವಿಶ್ವಸಂಸ್ಥೆಯ ಹಿಂಸೆ ವಿರೋಧಿ ಒಪ್ಪಂದ: ಈ ಒಪ್ಪಂದಕ್ಕೆ ಪ್ರಸ್ತುತ 174 ಕ್ಕೂ ಹೆಚ್ಚು ದೇಶಗಳು ಸಹಿ ಹಾಕಿವೆ.ಈ ಒಪ್ಪಂದದ ಆರ್ಟಿಕಲ್ 1 ರ ಪ್ರಕಾರ, ಯಾವುದೇ ಮಾಹಿತಿ ಅಥವಾ ಒಪ್ಪಿಗೆಯನ್ನು ಪಡೆಯಲು, ಶಿಕ್ಷಿಸಲು ಅಥವಾ ತಾರತಮ್ಯದ ಆಧಾರದ ಮೇಲೆ ಒಬ್ಬ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ನೀಡಲಾಗುವ ತೀವ್ರ ದೈಹಿಕ ಅಥವಾ ಮಾನಸಿಕ ಯಾತನೆಯನ್ನು ಹಿಂಸೆ ಎಂದು ಪರಿಗಣಿಸಲಾಗುತ್ತದೆ.➤ ಚೇತರಿಕೆ ಮತ್ತು ಪುನರ್ವಸತಿ: ಇವರ ಸಹಾಯಕ್ಕಾಗಿ ವಿಶ್ವಸಂಸ್ಥೆಯು 'ಹಿಂಸೆಗೊಳಗಾದ ಬಲಿಪಶುಗಳಿಗಾಗಿ ವಿಶ್ವಸಂಸ್ಥೆಯ ಸ್ವಯಂಪ್ರೇರಿತ ನಿಧಿ' (UN Voluntary Fund for Victims of Torture) ಯನ್ನು 1981 ರಲ್ಲಿ ಸ್ಥಾಪಿಸಿತು. ಈ ನಿಧಿಯ ಮೂಲಕ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 50,000 ಕ್ಕೂ ಹೆಚ್ಚು ಸಂತ್ರಸ್ತರಿಗೆ ವೈದ್ಯಕೀಯ, ಮಾನಸಿಕ, ಸಾಮಾಜಿಕ ಮತ್ತು ಕಾನೂನು ನೆರವನ್ನು ನೀಡಲಾಗುತ್ತಿದೆ.ಮೇ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ