Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
'Inspiring Innovators': ಭಾರತದ ನಾವೀನ್ಯತೆ ಉತ್ತೇಜಿಸಲು ನೆಟ್ಫ್ಲಿಕ್ಸ್ ಜೊತೆ ಕೇಂದ್ರ ಸರ್ಕಾರ ಕೈಜೋಡಿ
Authored by:
Akshata Halli
Date:
16 ಜನವರಿ 2026
➤ ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು (Innovation Ecosystem) ಬಲಪಡಿಸಲು ಮತ್ತು 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರವು ನೆಟ್ಫ್ಲಿಕ್ಸ್ ಇಂಡಿಯಾದೊಂದಿಗೆ ಕೈಜೋಡಿಸಿದೆ. ಈ ಸಹಯೋಗದ ಅಡಿಯಲ್ಲಿ
'ಇನ್ಸ್ಪೈರಿಂಗ್ ಇನ್ನೋವೇಟರ್ಸ್: ನಯೇ ಭಾರತ್ ಕಿ ನಯಿ ಪೆಹಚಾನ್' (Inspiring Innovators: Naye Bharat Ki Nayi Pehchaaan)
ಎಂಬ ನೂತನ ಉಪಕ್ರಮವನ್ನು ಜಾರಿಗೆ ತರಲಾಗಿದೆ.
➤ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ (PSA) ಕಚೇರಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್ಫ್ಲಿಕ್ಸ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು,
'ನೆಟ್ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ'
ಬೆಂಬಲದೊಂದಿಗೆ '
ಗ್ರಾಫಿಟಿ ಸ್ಟುಡಿಯೋಸ್'
ಈ ಯೋಜನೆಯನ್ನು ಜಾರಿಗೆ ತರುತ್ತಿದೆ; ಇದು ಯುವಜನತೆಯಲ್ಲಿ ಕೌಶಲ ವೃದ್ಧಿಸುವ ಜೊತೆಗೆ ಸೃಜನಶೀಲ ಕಥೆ ಹೇಳುವಿಕೆಯ (Storytelling) ಮೂಲಕ ಭಾರತೀಯ ಸ್ಟಾರ್ಟ್ಅಪ್ಗಳ ನಾವೀನ್ಯತೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ.
➤ ಪ್ರಮುಖ ವೈಶಿಷ್ಟ್ಯಗಳು:-
=>
ಎಂಟು ಸ್ಟಾರ್ಟ್ಅಪ್ಗಳ ಗುರುತಿಸುವಿಕೆ:
ಸಾಮಾಜಿಕ ಬದಲಾವಣೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಎಂಟು ಪ್ರಮುಖ ಭಾರತೀಯ ಸ್ಟಾರ್ಟ್ಅಪ್ಗಳನ್ನು ಈ ಉಪಕ್ರಮದ ಅಡಿ ಆಯ್ಕೆ ಮಾಡಲಾಗಿದೆ.
=>
ಕಿರು ಅನಿಮೇಟೆಡ್ ಚಿತ್ರಗಳು:
ಈ ಎಂಟು ಸ್ಟಾರ್ಟ್ಅಪ್ಗಳ ಸಾಧನೆಯನ್ನು ಆಧರಿಸಿ ಎಂಟು ಕಿರು ಅನಿಮೇಟೆಡ್ ಚಿತ್ರಗಳನ್ನು ನಿರ್ಮಿಸಲಾಗಿದೆ.
=>
ವಿದ್ಯಾರ್ಥಿಗಳ ಸಹಭಾಗಿತ್ವ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (NID), ಚಿತ್ರಾ ಯೂನಿವರ್ಸಿಟಿ ಸೇರಿದಂತೆ ದೇಶದ ವಿವಿಧ ಎಂಟು ವಿಶ್ವವಿದ್ಯಾಲಯಗಳ 26 ವಿದ್ಯಾರ್ಥಿಗಳು ಈ ಚಿತ್ರಗಳನ್ನು ತಯಾರಿಸಿದ್ದಾರೆ.
=>
ಸಮಾನ ಅವಕಾಶ:
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಶೇ. 50 ರಷ್ಟು ಮಹಿಳೆಯರಿದ್ದಾರೆ ಮತ್ತು ಅನೇಕರು ಎರಡನೇ ಹಂತದ (Tier-2) ನಗರಗಳಿಂದ ಬಂದವರಾಗಿದ್ದಾರೆ.
=>
ವಾಯ್ಸ್ಬಾಕ್ಸ್ (Voicebox) ಯೋಜನೆ:
ಈ ಚಿತ್ರಗಳಿಗೆ ಧ್ವನಿ ನೀಡಲು ನೆಟ್ಫ್ಲಿಕ್ಸ್ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಜಂಟಿಯಾಗಿ ಹಮ್ಮಿಕೊಂಡಿರುವ 'ವಾಯ್ಸ್ಬಾಕ್ಸ್' ಕೌಶಲ ಯೋಜನೆಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ.
➤ ಈ ಉಪಕ್ರಮದ ಬಗ್ಗೆ ಮಾತನಾಡಿದ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ
ಅಜಯ್ ಕುಮಾರ್ ಸೂದ್
ಅವರು, 'ಈ ಯೋಜನೆಯು ಸ್ಟಾರ್ಟ್ಅಪ್ಗಳು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಮೂಲಕ ಭಾರತದ ನಾವೀನ್ಯತೆ ಪರಿಸರವನ್ನು ಬಲಪಡಿಸುತ್ತದೆ' ಎಂದು ತಿಳಿಸಿದರೆ, ಮಾಹಿತಿ ಮತ್ತು ಪ್ರಸಾರ ಖಾತೆ
ರಾಜ್ಯ ಸಚಿವರಾದ ಎಲ್. ಮುರುಗನ್
ಅವರು, 'ಸೃಜನಶೀಲತೆಯು ಸಮಾಜದ ಸೇವೆಗೆ ಹೇಗೆ ಪರಿಣಾಮಕಾರಿಯಾಗಿ ಬಳಕೆಯಾಗಬಹುದು ಎಂಬುದಕ್ಕೆ ಈ ಯೋಜನೆಯೇ ಅತ್ಯುತ್ತಮ ಸಾಕ್ಷಿ' ಎಂದು ಶ್ಲಾಘಿಸಿದರು.
Take Quiz
Loading...