* ಇತ್ತೀಚೆಗೆ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಐಎನ್ಎಸ್ಎ) ತನ್ನ ವಾರ್ಷಿಕ ಫೆಲೋಗಳ ಪಟ್ಟಿಯಲ್ಲಿ ಬದಲಾವಣೆ ತಂದಿದ್ದು ಈ ವರ್ಷದ ಪಟ್ಟಿಯಲ್ಲಿ ವೃತ್ತಿಪರ ವಿಜ್ಞಾನಿಗಳಲ್ಲದವರಿಗೂ ಸ್ಥಾನವನ್ನು ನೀಡಿದೆ.* INSA ಫೆಲೋ ಗೌರವ ಪಟ್ಟಿಯಲ್ಲಿ ಸುಧಾಮೂರ್ತಿ, ಎನ್. ಆರ್.ನಾರಾಯಣಮೂರ್ತಿ, ನಂದನ್ ನಿಲೇಕಣಿ ಮತ್ತು ರಾಜೇಂದ್ರ ಸಿಂಗ್ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಒಟ್ಟು 61 ಸಾಧಕರಿಗೆ ಫೆಲೋಷಿಪ್ ನೀಡಲು ನಿರ್ಧರಿಸಲಾಗಿದೆ.* ಧನಸಹಾಯ ಮತ್ತು ಸಾಮಾಜಿಕ ಉಪಕ್ರಮಗಳ ಮೂಲಕ ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗಳು, ವೈಜ್ಞಾನಿಕ ಪ್ರಗತಿಯಲ್ಲಿ ಅವರ ಬಹುವಿಧ ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ನೂತನ ಫೆಲೋ ಪಟ್ಟಿಯು ಉಲ್ಲೇಖಿಸಿದೆ. * ಐಎನ್ಎಎ ಫೆಲೋಗಳನ್ನು ವೈಜ್ಞಾನಿಕ ಕೊಡುಗೆಗಳ ಆಧಾರದ ಮೇಲೆ ನಾಮನಿರ್ದೇಶನ ಮಾಡಲಾಗಿದೆ. ನಿಯಮ ದಲ್ಲಿನ ಈ ಬದಲಾವಣೆಯು ವಿಜ್ಞಾನವನ್ನು ಮುನ್ನಡೆಸುವಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಶೈಕ್ಷಣಿಕೇತರ ಕೊಡುಗೆದಾರರು ವಹಿಸಿದ ಪಾತ್ರಗಳನ್ನು ಸ್ಮರಿಸಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* ಭಾರತದಲ್ಲಿ ವಿಜ್ಞಾನವನ್ನು ಉತ್ತೇಜಿಸಲು ಮತ್ತು ಮಾನವೀಯತೆ ಮತ್ತು ರಾಷ್ಟ್ರೀಯ ಕಲ್ಯಾಣಕ್ಕಾಗಿ ಜನವರಿ 1935 ರಲ್ಲಿ INSA ಸ್ಥಾಪಿಸಲಾಯಿತು. ಇದನ್ನು ಆರಂಭದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಆಫ್ ಇಂಡಿಯಾ (NISI) ಎಂದು ಕರೆಯಲಾಗುತ್ತಿತ್ತು. ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ (ISCA) INSA ವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. INSA ತನ್ನ ಪ್ರಧಾನ ಕಛೇರಿಯನ್ನು ದೆಹಲಿಯಲ್ಲಿ ಹೊಂದಿದೆ.