* ಇಂಗ್ಲಿಷ್ ಅನ್ನು ಅಮೆರಿಕದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ.* ಇಂಗ್ಲಿಷ್ ರಾಷ್ಟ್ರೀಯ ಭಾಷೆಯಾಗಿದ್ದು ಇದು ಏಕತೆಯನ್ನು ಉತ್ತೇಜಿಸುತ್ತದೆ. ಸರ್ಕಾರಿ ಕಾರ್ಯನಿರ್ವಹಣೆಯ ದಕ್ಷತೆಯನ್ನು ತರುತ್ತದೆ ಎಂದು ಶ್ವೇತಭವನ ತಿಳಿಸಿದೆ.* ಅಮೆರಿಕ ದೇಶ ಸ್ಥಾಪನೆಯಾಗಿ ಸುಮಾರು 250 ವರ್ಷಗಳಾದರೂ ಈವರೆಗೆ ರಾಷ್ಟ್ರಭಾಷೆ ಎಂದು ಅಧಿಕೃತವಾಗಿ ಇರಲಿಲ್ಲ. ಪ್ರಸ್ತುತ ಅಮೆರಿಕದ 30ಕ್ಕೂ ಹೆಚ್ಚು ರಾಜ್ಯಗಳು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಗುರುತಿಸಿದ್ದು, ಇಂಗ್ಲಿಷ್ ಭಾಷೆಯಲ್ಲಿಯೇ ಸಂವಹನ ನಡೆಸುತ್ತಿವೆ.* ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಸೆನೆಟರ್ಗಳು ಹಲವು ದಶಕಗಳಿಂದ ಒತ್ತಾಯಿಸುತ್ತಿದ್ದರು. ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಗಿದೆ.* ಅಮೆರಿಕದಲ್ಲಿ 340 ಮಿಲಿಯನ್ ಜನರಲ್ಲಿ 68 ಮಿಲಿಯನ್ ಜನರು ಇಂಗ್ಲಿಷ್ ಹೊರತುಪಡಿಸಿ 160 ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಜನಗಣತಿ ವರದಿ ತಿಳಿಸಿದೆ.* ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಶ್ವೇತಭವನದ ವೆಬ್ಸೈಟ್ನಲ್ಲಿ ಸ್ಪಾನಿಷ್ ಭಾಷೆಯ ಆವೃತ್ತಿಯನ್ನು ಡಿಲಿಟ್ ಮಾಡಲಾಗಿತ್ತು. ಟ್ರಂಪ್ ತಾವು ಮೊದಲ ಬಾರಿ ಅಧ್ಯಕ್ಷರಾಗಿದ್ದಾಗಲೂ ವೆಬ್ಸೈಟ್ ನಲ್ಲಿ ಸ್ಪಾನಿಷ್ ಆವೃತ್ತಿಯನ್ನು ಡಿಲಿಟ್ ಮಾಡಿಸಿದ್ದರು. ಆದರೆ ಜೋ ಬೈಡೆನ್ ಮತ್ತೆ ಸ್ಪಾನಿಷ್ ಭಾಷೆಯ ಆವೃತ್ತಿಯನ್ನು ವೆಬ್ಸೈಟ್ಗೆ ಸೇರ್ಪಡೆಗೊಳಿಸಿದ್ದರು.