* ಇಂಗ್ಲೆಂಡ್ ತಂಡ 1970–71ರ ಆ್ಯಷಸ್ ಸರಣಿ ಗೆಲ್ಲಲು ಮಹತ್ವದ ಕೊಡುಗೆ ನೀಡಿದ್ದ ವೇಗದ ಬೌಲರ್ ಪೀಟರ್ ಲಿವರ್ (84) ಗುರುವಾರ(ಮಾರ್ಚ್ 27) ನಿಧನರಾದರು. * 17 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್ ಪಡೆದ ಅವರು, 1971ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಸೇರಿ 10 ಏಕದಿನ ಪಂದ್ಯಗಳನ್ನು ಆಡಿದ್ದರು. 1970–71ರಲ್ಲಿ ರೇ ಇಲಿಂಗ್ವರ್ತ್ ಅವರ ನೇತೃತ್ವದ ತಂಡದಲ್ಲಿ ಆ್ಯಷಸ್ ಪ್ರವಾಸ ಮಾಡಿದ್ದರು.* 1975ರ ಮೆಲ್ಬರ್ನ್ ಟೆಸ್ಟ್ನಲ್ಲಿ 38 ರನ್ ಗೆ 6 ವಿಕೆಟ್ ಪಡೆದದ್ದು ಅವರ ಪ್ರಖ್ಯಾತ ಸಾಧನೆಯಾಗಿದೆ.* 1975ರ ಆಕ್ಲೆಂಡ್ ಟೆಸ್ಟ್ನಲ್ಲಿ ಲಿವರ್ ಬೌಲಿಂಗ್ ಮಾಡಿದ ಬೌನ್ಸರ್ ನ್ಯೂಜಿಲೆಂಡ್ನ ಇವಾನ್ ಚಾಟ್ಫೀಲ್ಡ್ ತಲೆಗೆ ತಾಗಿ, ಹೃದಯ ಕ್ಷಣಮಾತ್ರ ನಿಂತಿತ್ತು. ತುರ್ತು ಚಿಕಿತ್ಸೆಯಿಂದ ಅವರು ಬದುಕುಳಿದರು. ಈ ಘಟನೆ ಲಿವರ್ಗೆ ತೀವ್ರ ಆಘಾತ ಉಂಟುಮಾಡಿ, ನಿವೃತ್ತಿಯ ಕುರಿತು ಯೋಚನೆಗೆ ಕಾರಣವಾಯಿತು. ಈ ಘಟನೆಗೆ ಅವರು ಹೊಣೆಗಾರರಲ್ಲ ಎಂದು ನಂತರ ಚಾಟ್ಫೀಲ್ಡ್ ಅವರೇ ಲಿವರ್ಗೆ ಮನವರಿಕೆ ಮಾಡಿದರು. * 301 ಪ್ರಥಮ ದರ್ಜೆ ಪಂದ್ಯಗಳಲ್ಲಿ 796 ವಿಕೆಟ್ ಕಬಳಿಸಿದ್ದ ಲಿವರ್ ಅವರನ್ನು ಕಳೆದ ವರ್ಷ ಹಾಲ್ ಆಫ್ ಫೇಮ್ಗೆ ಸೇರಿಸಲಾಗಿತ್ತು.