* ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಡೇವಿಡ್ ಲಾರೆನ್ಸ್ (61) ಭಾನುವಾರ(ಜೂನ್ 22) ಮೋಟರ್ ನ್ಯೂರಾನ್ ಕಾಯಿಲೆಯಿಂದಾಗಿ ನಿಧನರಾದರು. ಈ ಕಾಯಿಲೆಯು ದೇಹದ ಸ್ನಾಯುಗಳು, ಮಿದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.* ಲಾರೆನ್ಸ್ ಅವರು ಇಂಗ್ಲೆಂಡ್ ತಂಡದಲ್ಲಿ ಆಡಿದ ಮೊದಲ ಕಪ್ಪು ಆಟಗಾರ ಎಂಬ ಗೌರವ ಪಡೆದಿದ್ದರು. 1988ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪ್ರವೇಶ ಪಡೆದ ಅವರು, 1991ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್ ಪಡೆದು ಗಮನ ಸೆಳೆದರು.* ಅವರು 5 ಟೆಸ್ಟ್ ಪಂದ್ಯಗಳಲ್ಲಿ 18 ವಿಕೆಟ್, ಹಾಗೂ 1 ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದುಕೊಂಡರು. ಒಟ್ಟು 185 ಪ್ರಥಮ ದರ್ಜೆ ಪಂದ್ಯಗಳಿಂದ 515 ವಿಕೆಟ್ ಗಳಿಸಿದರು.* 2022ರಲ್ಲಿ ಲಾರೆನ್ಸ್ ಗ್ಲಾಸ್ಟರ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ನ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಕಪ್ಪು ನಾಯಕರಾಗಿದ್ದರು.* ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಟಗಾರರು ಕಪ್ಪು ಪಟ್ಟಿಯನ್ನು ತೋಳಿಗೆ ಕಟ್ಟಿಕೊಂಡು ಗೌರವ ಸಲ್ಲಿಸಿದರು. ದಿನದಾಟಕ್ಕೆ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.