* ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಇಂದು (ಜುಲೈ 10) ಭೂಮಿಗೆ ಮರಳುವ ಸಾಧ್ಯತೆ ಇದೆ. ಆದರೆ ಈ ದಾವಣೆ ಭೂಮಿಯ ಹವಾಮಾನ ಪರಿಸ್ಥಿತಿಯ ಮೇಲೂ ಅವಲಂಬಿತವಾಗಿದೆ.* ಇವರು ಫಾಲ್ಕನ್-9 ರಾಕೆಟ್ನ ಡ್ರ್ಯಾಗನ್ ಕ್ಯಾಪ್ಸ್ಯೂಲ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ್ದರು. ಇದೀಗ ಇದೇ ಕ್ಯಾಪ್ಸ್ಯೂಲ್ನ ಮೂಲಕ ಭೂಮಿಗೆ ಮರಳಲಿದ್ದಾರೆ.* ಈ ನಾಲ್ವರಲ್ಲೂ ಮೂರು ಮಂದಿ ಮೊದಲ ಬಾರಿಗೆ ಬಾಹ್ಯಾಕಾಶ ಪ್ರವೇಶಿಸಿದ್ದು, 14 ದಿನಗಳ ಕಾಲ ಇವರು ಅಲ್ಲಿಯೇ ಇರುವಂತೆ ಅನೇಕ ವಿಜ್ಞಾನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.* ಆಕ್ಸಿಯಂ-4 ಮಿಷನ್ನ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿರುವ ಶುಕ್ಲಾ ಇತ್ತೀಚೆಗಷ್ಟೆ ವಿದ್ಯಾರ್ಥಿಗಳ ಜೊತೆ ಹ್ಯಾಮ್ ರೇಡಿಯೋ ಮೂಲಕ ಸಂವಾದ ನಡೆಸಿದರು. ಅವರು ವಿದ್ಯಾರ್ಥಿಗಳಿಗೆ ಗಗನಯಾನವನ್ನು ಗುರಿಯಾಗಿಸಿಕೊಳ್ಳುವಂತೆ ಪ್ರೇರಣೆಯ ಸಂದೇಶ ನೀಡಿದರು.