* ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (IMC) “ಡಿಜಿಟಲ್ ಹೌಸ್ ಅಡ್ರೆಸ್” ಯೋಜನೆಯನ್ನು ಪ್ರಾರಂಭಿಸಿದ್ದು, ದೇಶದ ಮೊದಲ ಎಕ್ಸ್ಪೆರಿಮೆಂಟಲ್ ಡಿಜಿಟಲ್ ವಿಳಾಸ ವ್ಯವಸ್ಥೆಯಾಗಿದೆ.* ಇದು QR ಕೋಡ್ ಮತ್ತು GPS ತಂತ್ರಜ್ಞಾನವನ್ನು ಬಳಸಿ, ಸಾಂಪ್ರದಾಯಿಕ ವಿಳಾಸ ವ್ಯವಸ್ಥೆಗೆ ಪರ್ಯಾಯ ನೀಡುತ್ತದೆ.* ಈ ಯೋಜನೆ ಇತ್ತೀಚೆಗೆ ಸುದಾಮಾ ನಗರ ವಾರ್ಡ್ 82ರಲ್ಲಿ ಪೈಲಟ್ ಪ್ರಾಜೆಕ್ಟ್ ರೂಪದಲ್ಲಿ ಯಶಸ್ವಿಯಾಗಿ ಚಾಲನೆಯಾಯಿತು. ಇದು ದೇಶದ ಮೊದಲ ಅಧಿಕೃತ QR ಆಧಾರಿತ ವಿಳಾಸ ನಿಯೋಜನೆ ಆಗಿದ್ದು, ಡಿಜಿಪಿನ್ ವ್ಯವಸ್ಥೆಯೊಂದಿಗೆ ಏಕೀಕೃತವಾಗಿದೆ.ಮುಖ್ಯ ವೈಶಿಷ್ಟ್ಯಗಳು:• QR ಕೋಡ್ ಪ್ಲೇಟ್ಗಳು: ಪ್ರತಿ ಮನೆಗೆ ವಿಶಿಷ್ಟ ಲೋಹದ ಫಲಕ.• GPS ನಿಖರತೆ: ಕ್ಯೂಆರ್ ಕೋಡ್ಗಳು ನಿಖರವಾದ ಸ್ಥಳದ ಜೊತೆ ಲಿಂಕ್.• ಡಿಜಿಪಿನ್ ಏಕೀಕರಣ: ವಿಳಾಸಗಳು ಕೇಂದ್ರ ಡಿಜಿಪಿನ್ ವ್ಯವಸ್ಥೆಯೊಂದಿಗೆ ಸಿಂಕ್ರೊನೈಸ್.• ನಾಗರಿಕ ಸಂಪರ್ಕ: ತೆರಿಗೆ ಪಾವತಿ, ಕುಂದುಕೊರತೆ ಸಲ್ಲಿಕೆ ಮೊಬೈಲ್ನಿಂದ ಸಾಧ್ಯ.• ಸ್ಮಾರ್ಟ್ ಸಿಟಿ ಹೊಂದಾಣಿಕೆ: ಡಿಜಿಟಲ್ ಇಂಡಿಯಾ ಗುರಿಗೆ ಬೆಂಬಲ.* ಮನೆಗೆ ಡಿಜಿಟಲ್ ವಿಳಾಸ ಫಲಕ ಅಳವಡಿಸಿ, ಮೊಬೈಲ್ ಬಳಸಿ ಸ್ಕ್ಯಾನ್ ಮಾಡಿದರೆ GPS ಆಧಾರಿತ ವಿಳಾಸ ಮತ್ತು ಸೇವಾ ಮಾಹಿತಿ ಲಭ್ಯವಾಗುತ್ತದೆ.* ವಿಳಾಸ ಗುರುತಿಸುವಿಕೆಯನ್ನು ಸರಳಗೊಳಿಸಿ, ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸಿ, ತುರ್ತು ಪ್ರತಿಕ್ರಿಯೆ ಸುಲಭಗೊಳಿಸಿ, ಡಿಜಿಟಲ್ ಆಡಳಿತಕ್ಕೆ ಪ್ರೋತ್ಸಾಹ ನೀಡಿ.
ಪ್ರಯೋಜನಗಳು:• ಸೇವಾ ದಕ್ಷತೆ: ಪುರಸಭಾ ಸೇವೆ ತ್ವರಿತ ವಿತರಣೆ.• ತುರ್ತು ಸಹಾಯ: ಆಂಬ್ಯುಲೆನ್ಸ್, ಪೋಲಿಸ್ ಸೇವೆ ತಕ್ಷಣದ ಪತ್ತೆ.• ಡಿಜಿಟಲ್ ಆಡಳಿತ: ನಿಖರ ಆಸ್ತಿ ನಕ್ಷೆ ಮತ್ತು ದೂರು ಪರಿಹಾರ.• ನಗರ ಯೋಜನೆ: ದತ್ತಾಂಶ ಆಧಾರಿತ ಯೋಜನೆ.• ಇ-ಕಾಮರ್ಸ್ ಬೆಂಬಲ: ವಿಳಾಸ ಸ್ಪಷ್ಟತೆಗಳಿಂದ ಸರಿಯಾದ ವಿತರಣೆ.* ಈ ಯೋಜನೆಯು ಇತರ ನಗರಗಳಿಗೆ ಮಾದರಿಯಾಗಲಿದ್ದು, ಡಿಜಿಟಲ್ ಇಂಡಿಯಾದ ಭವಿಷ್ಯಕ್ಕೆ ಬಲ ನೀಡಲಿದೆ.