Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಇಂಡಿಯಾ ಸ್ಕಿಲ್ಸ್ ರಾಷ್ಟ್ರೀಯ ಸ್ಪರ್ಧೆ 2025-26: ಯುವಶಕ್ತಿಯ ಕೌಶಲ ಅನಾವರಣ!
Authored by:
Akshata Halli
Date:
1 ಎಪ್ರಿಲ್ 2026
➤
ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (MSDE) ಹಾಗೂ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (NSDC) ಸಹಯೋಗದಲ್ಲಿ ಆಯೋಜಿಸಲಾಗಿರುವ
'ಇಂಡಿಯಾ ಸ್ಕಿಲ್ಸ್' (IndiaSkills) ರಾಷ್ಟ್ರೀಯ ಸ್ಪರ್ಧೆ 2025-26
ಯುವಜನತೆಯಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 3.65 ಲಕ್ಷಕ್ಕೂ ಹೆಚ್ಚು ಯುವಕರು ಈ ಬಾರಿ ನೋಂದಾಯಿಸಿಕೊಂಡಿದ್ದು, ಪ್ರಾದೇಶಿಕ ಹಂತಗಳಲ್ಲಿ ವಿಜೇತರಾದ 650ಕ್ಕೂ ಹೆಚ್ಚು ಅಂತಿಮ ಸ್ಪರ್ಧಿಗಳು 63 ವಿವಿಧ ಕೌಶಲ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಸೈಬರ್ ಭದ್ರತೆ ಮತ್ತು ರೋಬೋಟಿಕ್ಸ್ನಂತಹ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಈ ಸ್ಪರ್ಧೆಯು, ಭಾರತದ ಯುವಜನತೆಯನ್ನು ಶಾಂಫೈನಲ್ಲಿ ನಡೆಯಲಿರುವ ವಿಶ್ವ ಕೌಶಲ ಸ್ಪರ್ಧೆಗೆ (WorldSkills) ಸಜ್ಜುಗೊಳಿಸುವ ಮೂಲಕ ಅವರನ್ನು ಜಾಗತಿಕ ಮಟ್ಟದ ವೃತ್ತಿಪರರನ್ನಾಗಿ ರೂಪಿಸುವ ಪ್ರಮುಖ ವೇದಿಕೆಯಾಗಿದೆ.
➤
ಆಧುನಿಕ ತಂತ್ರಜ್ಞಾನ ಮತ್ತು ಇಂಡಸ್ಟ್ರಿ 4.0:
ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಈ ಬಾರಿ ಸಾಂಪ್ರದಾಯಿಕ ಕೌಶಲಗಳ ಜೊತೆಗೆ ಭವಿಷ್ಯದ ತಂತ್ರಜ್ಞಾನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ:
- ಸೈಬರ್ ಭದ್ರತೆ (Cyber Security)
- ಸ್ವಯಂಚಾಲಿತ ರೋಬೋಟಿಕ್ಸ್ (Autonomous Robotics)
- ಇಂಡಸ್ಟ್ರಿ 4.0 (Industry 4.0)
- ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ
➤
ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜೇತರಾಗುವ ಪ್ರತಿಭೆಗಳು ಚೀನಾದ
ಶಾಂಫೈನಲ್ಲಿ ನಡೆಯಲಿರುವ 'ವಿಶ್ವ ಕೌಶಲ ಸ್ಪರ್ಧೆ'ಯಲ್ಲಿ (WorldSkills International)
ಭಾರತವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ಪಡೆಯಲಿದ್ದಾರೆ.
➤
"ಇಂತಹ ಸ್ಪರ್ಧೆಗಳು ಯುವಕರಿಗೆ ಕೌಶಲಾಧರಿತ ಉದ್ಯೋಗಗಳತ್ತ ಆಸಕ್ತಿ ಮೂಡಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸಲು ಸಹಕಾರಿಯಾಗುತ್ತವೆ." -
ದೇವಶ್ರೀ ಮುಖರ್ಜಿ
, ಕಾರ್ಯದರ್ಶಿಗಳು.
➤
ಹಿರಿಯ ಆರ್ಥಿಕ ಸಲಹೆಗಾರರಾದ ಮನೀಷಾ ಸೆನ್ಸರ್ಮಾ ಅವರ ಪ್ರಕಾರ, ಈ ಯೋಜನೆಯು ಉದ್ಯಮಗಳಿಗೆ ಬೇಕಾದ ನೈಪುಣ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಸ್ಪರ್ಧೆಯಲ್ಲಿ ವಿವಿಧ ಕ್ಷೇತ್ರಗಳ
200ಕ್ಕೂ ಹೆಚ್ಚು ಉದ್ಯಮ ಪಾಲುದಾರರು
ಭಾಗವಹಿಸಿರುವುದು ವಿಶೇಷ. ಇದು ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
Take Quiz
Loading...