Job Description: ➤ ಭಾರತದ ಹವಾಮಾನ ಇಲಾಖೆ (IMD) ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿದ್ದು, ಜಮ್ಮುವಿನಲ್ಲಿ ದೇಶದ 7ನೇ ಪ್ರಾದೇಶಿಕ ಹವಾಮಾನ ಕೇಂದ್ರವನ್ನು (Regional Meteorological Centre - RMC) ಅಧಿಕೃತವಾಗಿ ಆರಂಭಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಈ ನೂತನ ಕೇಂದ್ರವನ್ನು ಉದ್ಘಾಟಿಸಿದ್ದಾರೆ.➤ ಜಮ್ಮುವಿನಲ್ಲಿ ಉದ್ಘಾಟನೆಗೊಂಡಿರುವ ಭಾರತದ 7ನೇ ಪ್ರಾದೇಶಿಕ ಹವಾಮಾನ ಕೇಂದ್ರವು ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಲಕ್ನೋದಲ್ಲಿ 8ನೇ ಕೇಂದ್ರವನ್ನು ಸ್ಥಾಪಿಸುವ ಯೋಜನೆಯೊಂದಿಗೆ ಹಿಮಾಲಯ ಪ್ರದೇಶದ ಮೇಘಸ್ಫೋಟ, ಭೂಕುಸಿತ ಹಾಗೂ ಪ್ರವಾಹದಂತಹ ಪ್ರಕೃತಿ ವಿಕೋಪಗಳ ಬಗ್ಗೆ ನಿಖರ ಮುನ್ಸೂಚನೆ ನೀಡುವ ಮುಖ್ಯ ಉದ್ದೇಶವನ್ನು ಹೊಂದಿದೆ.➤ ಈ ಕೇಂದ್ರದ ಪ್ರಮುಖ ಪ್ರಯೋಜನಗಳು: ಯಾತ್ರಿಕರಿಗೆ ನೆರವು: ಅಮರನಾಥ ಮತ್ತು ಮಾತಾ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತಾದಿಗಳಿಗೆ ಹವಾಮಾನದ ಮುನ್ಸೂಚನೆ ನೀಡಲು ವೈಷ್ಣೋದೇವಿ ಭವನದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರವನ್ನು (AWS) ಅಳವಡಿಸಲಾಗಿದೆ. ಜಿಲ್ಲಾವಾರು ಮತ್ತು ಪ್ರವಾಸಿ ಮುನ್ಸೂಚನೆ: ಪ್ರವಾಸಿಗರಿಗೆ ನೆರವಾಗಲು ಪ್ರತ್ಯೇಕ ಪರ್ವತ ಹವಾಮಾನ ಮುನ್ಸೂಚನೆ (Mountain weather forecasts) ಮತ್ತು ಜಿಲ್ಲಾವಾರು ನಿಖರ ಮಾಹಿತಿ ಲಭ್ಯವಾಗಲಿದೆ. ರಕ್ಷಣಾ ಪಡೆಗಳು ಮತ್ತು ರೈತರು: ಗಡಿಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಪಡೆಗಳಿಗೆ ಹಾಗೂ ಸ್ಥಳೀಯ ರೈತರಿಗೆ ಇದು ರಕ್ಷಣಾ ಕವಚವಾಗಿ ಕೆಲಸ ಮಾಡಲಿದೆ. ➤ ಮಿಷನ್ ಮೌಸಮ್ (Mission Mausam) ಮತ್ತು ತಾಂತ್ರಿಕ ಪ್ರಗತಿ: - ಡಾಪ್ಲರ್ ಹವಾಮಾನ ರಾಡಾರ್ (Doppler Weather Radar): 2014ರಲ್ಲಿ ಈ ಭಾಗದಲ್ಲಿ ಒಂದೂ ರಾಡಾರ್ ಇರಲಿಲ್ಲ. ಪ್ರಸ್ತುತ ಜಮ್ಮು, ಶ್ರೀನಗರ, ಲೇಹ್ ಮತ್ತು ಬನಿಹಾಲ್ ಟಾಪ್‌ನಲ್ಲಿ 4 ರಾಡಾರ್‌ಗಳು ಕಾರ್ಯನಿರ್ವಹಿಸುತ್ತಿವೆ.- ಮುಂದಿನ ಯೋಜನೆ: ಮಿಷನ್ ಮೌಸಮ್' ಅಡಿಯಲ್ಲಿ ಅನಂತನಾಗ್, ರಾಜೌರಿ, ಬಾರಾಮುಲ್ಲಾ, ಕಿಸ್ತ್ ವಾರ್ ಮತ್ತು ದೋಡಾಗಳಲ್ಲಿ ಇನ್ನೂ 5 ಡಾಪ್ಲರ್ ರಾಡಾರ್‌ಗಳನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.- ಶತಮಾನದ ಗೌರವ: 100 ವರ್ಷಕ್ಕೂ ಹೆಚ್ಚು ಹಳೆಯದಾದ ಶ್ರೀನಗರ ಹವಾಮಾನ ವೀಕ್ಷಣಾಲಯಕ್ಕೆ ವಿಶ್ವ ಹವಾಮಾನ ಸಂಸ್ಥೆ (WMO) 'Centennial Observing Station' ಎಂಬ ಜಾಗತಿಕ ಮನ್ನಣೆ ನೀಡಿದೆ.➤ ಪ್ರಸ್ತುತ ಭಾರತದಲ್ಲಿರುವ 7 ಪ್ರಾದೇಶಿಕ ಕೇಂದ್ರಗಳು (RMC):1. ನವದೆಹಲಿ: ಉತ್ತರ ಭಾರತದ ಬಯಲು ಪ್ರದೇಶಗಳು2. ಮುಂಬೈ : ಪಶ್ಚಿಮ ಕರಾವಳಿ ಮತ್ತು ಮಹಾರಾಷ್ಟ್ರ ಭಾಗ3. ಕೊಲ್ಕತ್ತಾ: ಪೂರ್ವ ಮತ್ತು ಈಶಾನ್ಯ ಭಾರತದ ಭಾಗಗಳು4. ಚೆನ್ನೈ: ದಕ್ಷಿಣ ಪೆನಿನ್ಸುಲರ್ ಭಾರತ (ಕರ್ನಾಟಕ ಸೇರಿದಂತೆ)5. ನಾಗ್ಪುರ: ಮಧ್ಯ ಭಾರತದ ಹವಾಮಾನ ವ್ಯವಸ್ಥೆ6. ಗುವಾಹಟಿ: ಈಶಾನ್ಯ ರಾಜ್ಯಗಳ ವಿಶೇಷ ಮೇಲ್ವಿಚಾರಣೆ7. ಜಮ್ಮು (ಹೊಸತು): ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶ ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ