Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಶತ್ರು ಸಂಹಾರಕ ‘ಅರಿದಮನ’: ಸಮುದ್ರ ರಕ್ಷಣೆಯಲ್ಲಿ ಭಾರತದ ಮಹತ್ವದ ಹೆಜ್ಜೆ
Authored by:
Akshata Halli
Date:
23 ಫೆಬ್ರುವರಿ 2026
➤
ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಶತ್ರು ರಾಷ್ಟ್ರಗಳ ನಿದ್ದೆಗೆಡಿಸುವ ಸಾಮರ್ಥ್ಯವಿರುವ ಭಾರತದ ಮೂರನೇ ಸ್ವದೇಶಿ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ
'ಐಎನ್ಎಸ್ ಅರಿದಮನ' (INS Aridhaman - S4)
ಮುಂದಿನ ಎರಡು ತಿಂಗಳಲ್ಲಿ (ಏಪ್ರಿಲ್ ಅಥವಾ ಮೇ 2026) ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.
➤
ಅರಿದಮನ:
ವಿಶಾಖಪಟ್ಟಣದ ಶಿಪ್ ಬಿಲ್ಡಿಂಗ್ ಸೆಂಟರ್ನಲ್ಲಿ (SBC)
'ಅಡ್ವಾನ್ಸ್ ಟೆಕ್ನಾಲಜಿ ವೆಸೆಲ್' (ATV)
ಯೋಜನೆಯಡಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ. ಇದು ಅರಿಹಂತ್ ಶ್ರೇಣಿಯ ಮೂರನೇ ನೌಕೆಯಾಗಿದ್ದು, ತನ್ನ ಪೂರ್ವಾಧಿಕಾರಿಗಳಾದ ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
➤
ಸಾಮಾನ್ಯ ಡೀಸೆಲ್-ಎಲೆಕ್ಟ್ರಿಕ್ ಸಬ್ಮರೀನ್ಗಳು ಬ್ಯಾಟರಿ ಚಾರ್ಜ್ ಮಾಡಲು ಪದೇಪದೆ ಸಮುದ್ರದ ಮೇಲ್ಮೈಗೆ ಬರಬೇಕಾಗುತ್ತದೆ. ಆದರೆ, ಅರಿದಮನ
83 ಮೆಗಾವಾಟ್ ಸಾಮರ್ಥ್ಯದ ಪರಮಾಣು ರಿಯಾಕ್ಟರ್
ಹೊಂದಿದೆ. ಇದು ವರ್ಷಗಟ್ಟಲೆ ಇಂಧನದ ಅವಶ್ಯಕತೆ ಇಲ್ಲದೆ ಸಮುದ್ರದ ಆಳದಲ್ಲೇ ಅಡಗಿರಬಲ್ಲದು.
➤
ಶತ್ರುಗಳಿಗೆ ಕಣ್ಣಿಗೆ ಕಾಣದ 'ಅದೃಶ್ಯ' ನೌಕೆ:
ಇದರ ಹೊರಮೈಗೆ ವಿಶೇಷವಾದ
'ಆ್ಯನೆಕಾಯಿಕ್ ಟೈಲ್ಸ್' (Anechoic Tiles)
ಅಳವಡಿಸಲಾಗಿದೆ. ಇವು ಶತ್ರುಗಳ ಸೋನಾರ್ ತರಂಗಗಳನ್ನು ಹೀರಿಕೊಳ್ಳುತ್ತವೆ, ಇದರಿಂದಾಗಿ ಶತ್ರು ಹಡಗುಗಳಿಗೆ ಅರಿದಮನ ಎಲ್ಲಿದೆ ಎಂದು ಪತ್ತೆಹಚ್ಚುವುದು ಅಸಾಧ್ಯ. ಇದರಲ್ಲಿ ಸ್ವದೇಶಿ ನಿರ್ಮಿತ
'ಉಷಸ್' (USHUS)
ಮತ್ತು
'ಪಂಚೇಂದ್ರಿಯ'
ಸೋನಾರ್ ವ್ಯವಸ್ಥೆಗಳಿವೆ.
➤
ಅರಿದಮನ ಹಳೆಯ ನೌಕೆಗಳಿಗಿಂತ ದುಪ್ಪಟ್ಟು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲದು:
- K-15 ಸಾಗರಿಕಾ ಕ್ಷಿಪಣಿ: 750 ಕಿ.ಮೀ ವ್ಯಾಪ್ತಿಯ 24 ಕ್ಷಿಪಣಿಗಳು.
- K-4 ಬ್ಯಾಲಿಸ್ಟಿಕ್ ಕ್ಷಿಪಣಿ: 3,500 ಕಿ.ಮೀ ವ್ಯಾಪ್ತಿಯ 8 ಕ್ಷಿಪಣಿಗಳು.
- ಹಿಂದೂ ಮಹಾಸಾಗರದ ಸುರಕ್ಷಿತ ವಲಯದಲ್ಲಿ ಕುಳಿತೇ ಏಷ್ಯಾದ ಯಾವುದೇ ಗುರಿಯನ್ನು ಇದು ಧ್ವಂಸ ಮಾಡಬಲ್ಲದು.
➤
ಭಾರತದ 'ಪರಮಾಣು ತ್ರಯ' (Nuclear Triad):
ಭೂಮಿ, ಆಕಾಶ್ ಮತ್ತು ಸಮುದ್ರ - ಈ ಮೂರೂ ಮಾರ್ಗಗಳಿಂದ ಪರಮಾಣು ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಈಗಾಗಲೇ ಹೊಂದಿದೆ. ಅರಿದಮನ ಸೇರ್ಪಡೆಯಿಂದ ಭಾರತವು
'Continuous At-Sea Deterrence'
ಸ್ಥಿತಿಯನ್ನು ತಲುಪಲಿದೆ. ಅಂದರೆ, ವರ್ಷದ 365 ದಿನವೂ ಭಾರತದ ಒಂದು ಪರಮಾಣು ಜಲಾಂತರ್ಗಾಮಿ ಸಮುದ್ರದಲ್ಲಿ ಗಸ್ತಿನಲ್ಲಿರುತ್ತದೆ.
➤
ಜಲಾಂತರ್ಗಾಮಿಗಳು:
ಅರಿಹಂತ್:
ಕಾರ್ಯಾಚರಣೆಯಲ್ಲಿದೆ (2016)- ಸಾಮರ್ಥ್ಯ:750 ಕಿ.ಮೀ ವ್ಯಾಪ್ತಿಐಎನ್ಎಸ್
ಅರಿಘಾತ್:
ಕಾರ್ಯಾಚರಣೆಯಲ್ಲಿದೆ (2024)- ಸುಧಾರಿತ ಆವೃತ್ತಿ ಐಎನ್ಎಸ್
ಅರಿದಮನ :
(2026ರಲ್ಲಿ ಸೇರ್ಪಡೆ)- 3,500 ಕಿ.ಮೀ ವ್ಯಾಪ್ತಿS-4
(ಹೆಸರಿಡದ 4ನೇ ನೌಕೆ)- ನಿರ್ಮಾಣ ಹಂತದಲ್ಲಿದೆ (2027ಕ್ಕೆ ಲಭ್ಯ)ಅತ್ಯಾಧುನಿಕ
➤
ಪಾಕಿಸ್ತಾನವು ಚೀನಾದಿಂದ 8 'ಹ್ಯಾಂಗೋರ್' ಶ್ರೇಣಿಯ ಸಬ್ಮರೀನ್ಗಳನ್ನು ಖರೀದಿಸುತ್ತಿರುವ ಬೆನ್ನಲ್ಲೇ ಭಾರತ ಈ ಸಾಧನೆ ಮಾಡಿದೆ. ಅಲ್ಲದೆ, ರಷ್ಯಾದಿಂದ
'ಚಕ್ರ-III' (Akula-class)
ಪರಮಾಣು ದಾಳಿ ಜಲಾಂತರ್ಗಾಮಿಯನ್ನು ಬಾಡಿಗೆಗೆ ಪಡೆಯುವ ಪ್ರಕ್ರಿಯೆಯೂ ನಡೆಯುತ್ತಿದೆ.
Take Quiz
Loading...