Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಹರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತೀಯ ಹಡಗು 'ಶಿವಾಲಿಕ್' ಸುರಕ್ಷಿತವಾಗಿ ಓಮನ್ ಕೊಲ್ಲಿಗೆ ಪ್ರವೇಶ
Authored by:
Akshata Halli
Date:
16 ಮಾರ್ಚ್ 2026
➤
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತದ ರಾಜತಾಂತ್ರಿಕ ಪ್ರಯತ್ನದಿಂದಾಗಿ
ಇರಾನ್ ನಿಯಂತ್ರಿತ ಹರ್ಮುಜ್ ಜಲಸಂಧಿಯಲ್ಲಿ ಭಾರತದ ಅನಿಲ ಸಾಗಣೆ ಹಡಗು 'ಶಿವಾಲಿಕ್'ಗೆ ಸುರಕ್ಷಿತ ಸಂಚಾರಕ್ಕೆ ಅನುಮತಿ ಸಿಕ್ಕಿದೆ.
ಭಾರತೀಯ ನೌಕಾಪಡೆಯ ಮೂರು ಯುದ್ಧನೌಕೆಗಳ ಭದ್ರತೆಯೊಂದಿಗೆ ಈ ಹಡಗು ಈಗಾಗಲೇ ಓಮನ್ ಕೊಲ್ಲಿಯನ್ನು ಪ್ರವೇಶಿಸಿದ್ದು, ಮಾರ್ಚ್ 21ರ ವೇಳೆಗೆ ಭಾರತದ ಬಂದರನ್ನು ತಲುಪುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಸಂಕಷ್ಟದ ಸಮಯದಲ್ಲಿ ಇರಾನ್ನೊಂದಿಗೆ ಭಾರತ ಹೊಂದಿರುವ ಬಲವಾದ ರಾಜತಾಂತ್ರಿಕ ಸಂಬಂಧವನ್ನು ಸಾಬೀತುಪಡಿಸಿದೆ.
➤
ಪರ್ಷಿಯನ್ ಕೊಲ್ಲಿಯಲ್ಲಿ ಭಾರತೀಯರ ಸುರಕ್ಷತೆ:
ಬಂದರು ಮತ್ತು ಹಡಗು ಸಚಿವಾಲಯದ ಮಾಹಿತಿ ಪ್ರಕಾರ, ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ 24 ಹಡಗುಗಳು ಮತ್ತು
668 ನಾವಿಕರು
ಇದ್ದಾರೆ. ಇವರ ಸುರಕ್ಷತೆಗಾಗಿ ಸರ್ಕಾರವು 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಇದುವರೆಗೆ 2,425 ಕರೆಗಳು ಮತ್ತು 4,441 ಇಮೇಲ್ಗಳಿಗೆ ಸ್ಪಂದಿಸಲಾಗಿದೆ.
ಸಂಕಷ್ಟದಲ್ಲಿದ್ದ 223 ನಾವಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
➤
ಇರಾನ್ ನೀಡಿದ ವಿಶೇಷ ವಿನಾಯಿತಿ:
ಜಾಗತಿಕವಾಗಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಇರಾನ್ ನಿರ್ಬಂಧ ವಿಧಿಸಿದೆ. ಆದರೆ ಭಾರತಕ್ಕೆ ವಿನಾಯಿತಿ ನೀಡಲು ಪ್ರಮುಖ ಕಾರಣಗಳೆಂದರೆ:
ರಾಜತಾಂತ್ರಿಕ ಸಂಬಂಧ:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ.
ನಾವಿಕರ ಬಿಡುಗಡೆ:
ಕೊಚ್ಚಿಯಲ್ಲಿ ತಡೆಹಿಡಿಯಲಾಗಿದ್ದ ಇರಾನ್ ನಾವಿಕರನ್ನು ಭಾರತವು ಮಾನವೀಯ ನೆಲೆಯ ಮೇಲೆ ಸ್ವದೇಶಕ್ಕೆ ಕಳುಹಿಸಿಕೊಟ್ಟಿರುವುದು ಇರಾನ್ನ ಈ ಮೃದು ಧೋರಣೆಗೆ ಕಾರಣ ಎನ್ನಲಾಗುತ್ತಿದೆ.
➤
ಹರ್ಮುಜ್ ಜಲಸಂಧಿ:
ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಈ ಮಾರ್ಗ ಅತ್ಯಂತ ನಿರ್ಣಾಯಕವಾಗಿದೆ. ಭಾರತದ ಒಟ್ಟು ಕಚ್ಚಾ ತೈಲ ಆಮದಿನ ಶೇ. 60-65 ರಷ್ಟು ಇದೇ ಮಾರ್ಗದ ಮೂಲಕ ಬರುತ್ತದೆ. ಅಡುಗೆ ಅನಿಲ (LPG) ಪೂರೈಕೆಗೆ ಸೌದಿ ಅರೇಬಿಯಾ, ಇರಾಕ್ ಮತ್ತು ಕತಾರ್ ದೇಶಗಳನ್ನು ಭಾರತ ಅವಲಂಬಿಸಿದೆ.
ನೌಕಾಪಡೆಯ ಹದ್ದಿನ ಕಣ್ಣು:
ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿದೆ.
- ಯುದ್ಧನೌಕೆಗಳ ಬೆಂಗಾವಲು:
ಎಲ್ಪಿಜಿ (LPG) ಹೊತ್ತೊಯ್ಯುತ್ತಿರುವ 'ಶಿವಾಲಿಕ್' ಮತ್ತು 'ನಂದಾ ದೇವಿ' ಎಂಬ ಬೃಹತ್ ಅನಿಲ ಸಾಗಣೆ ಹಡಗುಗಳಿಗೆ ಐಎನ್ಎಸ್ ವಿಶಾಖಪಟ್ಟಣಂ, ಐಎನ್ಎಸ್ ತಲ್ವಾರ್ ಮತ್ತು ಐಎನ್ಎಸ್ ಸೂರತ್ ನಂತಹ ಅತ್ಯಾಧುನಿಕ ಡಿಸ್ಟ್ರಾಯರ್ ಹಾಗೂ ಫ್ರಿಗೇಟ್ ಯುದ್ಧನೌಕೆಗಳು ಪೂರ್ಣ ಪ್ರಮಾಣದ ರಕ್ಷಣೆ ನೀಡುತ್ತಿವೆ.
- ವೈಮಾನಿಕ ಕಣ್ಗಾವಲು:
ಸಮುದ್ರದ ಮೇಲಿನಿಂದ ನಿರಂತರ ನಿಗಾ ಇಡಲು ನೌಕಾಪಡೆಯು MH-60R ರೋಮಿಯೋ ಹೆಲಿಕಾಪ್ಟರ್ಗಳು ಮತ್ತು P-8I ಕಡಲ ಗಸ್ತು ವಿಮಾನಗಳನ್ನು (Maritime Patrol Aircraft) ಬಳಸುತ್ತಿದೆ. ಇವು ಶತ್ರು ಸಬ್ಮರಿನ್ ಹಾಗೂ ಕ್ಷಿಪಣಿಗಳ ಮೇಲೆ ಕಣ್ಣಿಡಲು ಸಹಕಾರಿಯಾಗಿವೆ.
➤
ಇರಾನ್ನ ವ್ಯಂಗ್ಯ ಮತ್ತು ಅಮೆರಿಕದ ನಿಲುವು:
ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕವು ಈ ಹಿಂದೆ ಭಾರತದ ಮೇಲೆ ಒತ್ತಡ ಹೇರಿತ್ತು. ಆದರೆ ಈಗಿನ ಜಾಗತಿಕ ಪರಿಸ್ಥಿತಿಯಲ್ಲಿ ಅಮೆರಿಕವೇ ಭಾರತವನ್ನು ರಷ್ಯಾದಿಂದ ತೈಲ ಖರೀದಿಸುವಂತೆ ಕೇಳಿಕೊಳ್ಳುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ
ಸಯ್ಯದ್ ಅಬ್ಬಾಸ್ ಅಯಾ
ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
Take Quiz
Loading...