Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಆಪರೇಷನ್ ಸಾಗರ್ ಬಂಧು: ಶ್ರೀಲಂಕಾದಲ್ಲಿ ಭಾರತೀಯ ಸೇನೆಯಿಂದ ಬೃಹತ್ ಸೇತುವೆ ನಿರ್ಮಾಣ
Authored by:
Akshata Halli
Date:
16 ಮಾರ್ಚ್ 2026
➤
ಭಾರತದ 'ನೆರೆಹೊರೆ ಮೊದಲು' (Neighbourhood First) ನೀತಿಯ ಭಾಗವಾಗಿ, ಭಾರತೀಯ ಸೇನೆಯು ಶ್ರೀಲಂಕಾದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೈಜೋಡಿಸಿದೆ.
'ಆಪರೇಷನ್ ಸಾಗರ್ ಬಂಧು' (Operation Sagar Bandhu)
ಅಡಿಯಲ್ಲಿ ಶ್ರೀಲಂಕಾದ ಆರ್ಥಿಕತೆಗೆ ಪೂರಕವಾಗುವ ಬೃಹತ್ ಸೇತುವೆ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ.
➤
ಶ್ರೀಲಂಕಾದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪ ಮತ್ತು ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಮರುಸ್ಥಾಪಿಸಲು ಭಾರತವು 'ಆಪರೇಷನ್ ಸಾಗರ್ ಬಂಧು' ಅಡಿಯಲ್ಲಿ ಈ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಅದರಂತೆ ಚಿಲಾವ್ ಜಿಲ್ಲೆಯ ಕರಾವಳಿ ಕಾರಿಡಾರ್ ಮೂಲಕ ರಾಜಧಾನಿ ಕೊಲಂಬೊ ಹಾಗೂ ಪ್ರಮುಖ ಆರ್ಥಿಕ ಕೇಂದ್ರವಾದ ಪುಟ್ಟಲಂ ನಡುವೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆಯನ್ನು ನಿರ್ಮಿಸುವ ಮೂಲಕ ಅಗತ್ಯ ಸೇವೆಗಳ ಪೂರೈಕೆ, ಸರಕು ಸಾಗಣೆ ಮತ್ತು ಸ್ಥಳೀಯರ ಜೀವನೋಪಾಯವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.
➤
ಆಪರೇಷನ್ ಸಾಗರ್ ಬಂಧು:
ಭಾರತ ಸರ್ಕಾರವು ಶ್ರೀಲಂಕಾಕ್ಕೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಒದಗಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಭಾರತೀಯ ಭೂಸೇನೆ, ನೌಕಾದಳ ಮತ್ತು ವಾಯುಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ತೊಡಗಿವೆ.
➤
ಭಾರತದ ನೆರವಿನ ಹಸ್ತ:
- ಮಾನವೀಯ ನೆರವು:
ಈಗಾಗಲೇ 1,100 ಟನ್ಗಳಿಗೂ ಅಧಿಕ ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾಕ್ಕೆ ತಲುಪಿಸಲಾಗಿದೆ.
- ತಾಂತ್ರಿಕ ಪರಿಣತಿ:
ಭಾರತೀಯ ಸೇನೆಯ ಎಂಜಿನಿಯರಿಂಗ್ ವಿಭಾಗವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ಸೇತುವೆಯನ್ನು ನಿರ್ಮಿಸುತ್ತಿದೆ.
- ಪ್ರಾದೇಶಿಕ ಭದ್ರತೆ:
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು ಒಬ್ಬ 'ವಿಶ್ವಾಸಾರ್ಹ ಮಿತ್ರ' ಮತ್ತು 'ಮೊದಲ ಸ್ಪಂದನಕಾರ' (First Responder) ಎಂಬ ಹೆಗ್ಗಳಿಕೆಗೆ ಈ ಯೋಜನೆ ಸಾಕ್ಷಿಯಾಗಿದೆ.
➤
ಆರ್ಥಿಕ ಬಿಕ್ಕಟ್ಟು ಮತ್ತು ನೈಸರ್ಗಿಕ ವಿಕೋಪದ ಸಮಯದಲ್ಲಿ ಭಾರತವು ಶ್ರೀಲಂಕಾಕ್ಕೆ ಅತಿ ಹೆಚ್ಚು ಸಾಲ ಮತ್ತು ಮಾನವೀಯ ನೆರವು ನೀಡಿದ ದೇಶವಾಗಿದೆ.
Take Quiz
Loading...