Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಂಡರ್-19 ವಿಶ್ವಕಪ್ 2026: ಇಂಗ್ಲೆಂಡ್ ಮಣಿಸಿ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತ
Authored by:
Akshata Halli
Date:
7 ಫೆಬ್ರುವರಿ 2026
➤ ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ಶುಕ್ರವಾರ ( 06-02-2026) ನಡೆದ ರೋಚಕ ಫೈನಲ್ ಪಂದ್ಯದಲ್ಲಿ
ಆಯುಷ್ ಮಾತ್ರೆ
ನೇತೃತ್ವದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ
100 ರನ್ಗಳ
ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತ ಅಂಡರ್-19 ಕ್ರಿಕೆಟ್ ಇತಿಹಾಸದಲ್ಲಿ 6ನೇ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
➤ ಈ ಪಂದ್ಯದ ಅಸಲಿ ಹೀರೋ ಎಂದರೆ ಬಿಹಾರದ 14 ವರ್ಷದ ಬಾಲಕ
ವೈಭವ್ ಸೂರ್ಯವಂಶಿ
. ಇಂಗ್ಲೆಂಡ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ವೈಭವ್, ಕೇವಲ 80 ಎಸೆತಗಳಲ್ಲಿ
175 ರನ್
(15 ಬೌಂಡರಿ, 15 ಸಿಕ್ಸರ್) ಸಿಡಿಸಿ ಇತಿಹಾಸ ನಿರ್ಮಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ
411 ರನ್
ಗಳ ಬೃಹತ್ ಮೊತ್ತ ಪೇರಿಸಿತು. ಇದು ಯುವ ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತವಾಗಿದೆ.
➤ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಹಲವು ದಶಕಗಳ ದಾಖಲೆಗಳನ್ನು ನಿರ್ಮಿಸಿದ್ದಾರೆ:
=> ಅತಿ ಕಿರಿಯ ಆಟಗಾರ:
ವಿಶ್ವಕಪ್ ಫೈನಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ).
=>
ಫೈನಲ್ನಲ್ಲಿ ಗರಿಷ್ಠ ಮೊತ್ತ:
ಅಂಡರ್-19 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ (175 ರನ್). ಈ ಮೊದಲು ಉನ್ಮುಕ್ತ್ ಚಂದ್ (111*) ಹೆಸರಿನಲ್ಲಿದ್ದ ದಾಖಲೆ ಅಳಿಸಿಹೋಯಿತು.
=>
ಸಿಕ್ಸರ್ಗಳ ದಾಖಲೆ:
ಒಂದೇ ಇನಿಂಗ್ಸ್ನಲ್ಲಿ 15 ಸಿಕ್ಸರ್ ಸಿಡಿಸಿದ ಮೊದಲ ಯುವ ಆಟಗಾರ.
=>
ವೇಗದ 150:
ಕೇವಲ 71 ಎಸೆತಗಳಲ್ಲಿ 150 ರನ್ ಪೂರೈಸುವ ಮೂಲಕ ಯುವ ಏಕದಿನ ಕ್ರಿಕೆಟ್ನಲ್ಲಿ ವೇಗದ ಸಾಧನೆ ಮಾಡಿದರು.
=>
ಟೂರ್ನಿಯ ಗರಿಷ್ಠ ಸಿಕ್ಸರ್:
ಈ ವಿಶ್ವಕಪ್ ಸರಣಿಯಲ್ಲಿ ಒಟ್ಟು 30 ಸಿಕ್ಸರ್ ಬಾರಿಸಿ ಡೆವಾಲ್ಡ್ ಬ್ರೆವಿಸ್ (18 ಸಿಕ್ಸರ್) ದಾಖಲೆ ಮುರಿದರು.
➤
ಭಾರತ ತಂಡ ಇದುವರೆಗೆ ಗೆದ್ದಿರುವ ವರ್ಷಗಳು ಮತ್ತು ನಾಯಕರು:
1. 2000:
ಮೊಹಮ್ಮದ್ ಕೈಫ್ (ನಾಯಕ)
2. 2008:
ವಿರಾಟ್ ಕೊಹ್ಲಿ (ನಾಯಕ)
3. 2012:
ಉನ್ಮುಕ್ತ್ ಚಂದ್ (ನಾಯಕ)
4. 2018:
ಪೃಥ್ವಿ ಶಾ (ನಾಯಕ)
5. 2022:
ಯಶ್ ಧುಲ್ (ನಾಯಕ)
6. 2026:
ಆಯುಷ್ ಮಾತ್ರೆ (ನಾಯಕ)
Take Quiz
Loading...