Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಗರ್ಭಕಂಠ ಕ್ಯಾನ್ಸರ್ ತಡೆಗೆ ಕೇಂದ್ರದ ಬಿಗ್ ಸ್ಟೆಪ್: 1.2 ಕೋಟಿ ಹೆಣ್ಣುಮಕ್ಕಳಿಗೆ ಸಿಗಲಿದೆ ಉಚಿತ ಲಸಿಕೆ
Authored by:
Akshata Halli
Date:
27 ಫೆಬ್ರುವರಿ 2026
➤
ಭಾರತೀಯ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಆರೋಗ್ಯ ಸಮಸ್ಯೆಯಾದ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗಟ್ಟಲು ಕೇಂದ್ರ ಸರ್ಕಾರವು ನಾಳೆಯಿಂದ (ಫೆಬ್ರವರಿ-28-2026) ದೇಶಾದ್ಯಂತ ಬೃಹತ್
ಎಚ್ಪಿವಿ (HPV) ಲಸಿಕೆ
ಅಭಿಯಾನವನ್ನು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೀರ್ನಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.
➤
ದೇಶಾದ್ಯಂತ ಮುಂದಿನ ಮೂರು ತಿಂಗಳ ಕಾಲ ನಡೆಯಲಿರುವ ಈ ಬೃಹತ್ ಅಭಿಯಾನದಡಿ, 14 ವರ್ಷದೊಳಗಿನ ಹಾಗೂ ಅಭಿಯಾನ ಆರಂಭಕ್ಕೆ 90 ದಿನಗಳ ಮೊದಲು 15ನೇ ವರ್ಷಕ್ಕೆ ಕಾಲಿಡುವ ಎಲ್ಲಾ ಅರ್ಹ ಹೆಣ್ಣುಮಕ್ಕಳನ್ನು ಗರ್ಭಕಂಠ ಕ್ಯಾನ್ಸರ್ನಿಂದ ರಕ್ಷಿಸುವ ಗುರಿಯೊಂದಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಚ್ಪಿವಿ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.
➤
ಲಸಿಕೆ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು:
ಕೇಂದ್ರ ಆರೋಗ್ಯ ಸಚಿವಾಲಯವು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ:
-
ಪೋಷಕರ ಒಪ್ಪಿಗೆ ಕಡ್ಡಾಯ:
ಇದು ಸ್ವಯಂಪ್ರೇರಿತ ಅಭಿಯಾನವಾಗಿದ್ದು, ಪೋಷಕರ ಅನುಮತಿ ಇಲ್ಲದೆ ಲಸಿಕೆ ನೀಡುವಂತಿಲ್ಲ.
- ಖಾಲಿ ಹೊಟ್ಟೆಯಲ್ಲಿ ಪಡೆಯುವಂತಿಲ್ಲ:
ಲಸಿಕೆ ಪಡೆಯುವ ಮಕ್ಕಳು ಕಡ್ಡಾಯವಾಗಿ ಆಹಾರ ಸೇವಿಸಿರಬೇಕು.
- ವಿಶ್ರಾಂತಿ:
ಲಸಿಕೆ ಪಡೆದ ನಂತರ ಕನಿಷ್ಠ 30 ನಿಮಿಷಗಳ ಕಾಲ ಆರೋಗ್ಯ ಕೇಂದ್ರದಲ್ಲೇ ವಿಶ್ರಾಂತಿ ಪಡೆಯುವುದು ಅವಶ್ಯಕ.
➤
ಭಾರತದ
ಲ್ಲಿ
ಗರ್ಭಕಂಠದ ಕ್ಯಾನ್ಸರ್:
ಭಾರತದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಅಂಕಿ-ಅಂಶಗಳ ಪ್ರಕಾರ: ಪ್ರತಿ ವರ್ಷ ಭಾರತದಲ್ಲಿ ಸುಮಾರು 80,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ವಾರ್ಷಿಕವಾಗಿ ಸುಮಾರು 42,000 ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಶೇ. 80 ಕ್ಕಿಂತ ಹೆಚ್ಚು ಪ್ರಕರಣಗಳಿಗೆ ಹೂಮನ್ ಪ್ಯಾಪಿಲ್ಲೊಮ ವೈರಸ್ (HPV-16 ಮತ್ತು 18) ಕಾರಣವಾಗಿದೆ.
-
HPV:
ಇದು ಲೈಂಗಿಕವಾಗಿ ಹರಡುವ ಸೋಂಕು ಆಗಿದ್ದು, ದೀರ್ಘಕಾಲದವರೆಗೆ ದೇಹದಲ್ಲಿದ್ದರೆ ಕ್ಯಾನ್ಸರ್ ಆಗಿ ಪರಿಣಮಿಸಬಹುದು.
-
ಕ್ವಾಡ್ ಕ್ಯಾನ್ಸರ್ ಮೂನ್ಶಾಟ್ (Quad Cancer Moonshot):
ಸೆಪ್ಟೆಂಬರ್ 2024 ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕ್ಯಾನ್ಸರ್ ತಡೆಗೆ ಕೈಗೆಟುಕುವ ದರದ ಚಿಕಿತ್ಸೆ ಮತ್ತು ಲಸಿಕೆಯ ಬಗ್ಗೆ ಒತ್ತು ನೀಡಿದ್ದರು.
-
ಲಸಿಕೆಯ ಹೆಸರು:
ಪ್ರಸ್ತುತ ಭಾರತದಲ್ಲಿ 'ಸೆರ್ವಾವಾಕ್' (Cervavac) ಎಂಬ ಸ್ವದೇಶಿ ನಿರ್ಮಿತ ಲಸಿಕೆ ಕೂಡ ಲಭ್ಯವಿದೆ.
Take Quiz
Loading...