Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತ-ಸೇಶೆಲ್ಸ್ ಮೈತ್ರಿ: $175 ಮಿಲಿಯನ್ ಪ್ಯಾಕೇಜ್ ಮತ್ತು 'SESEL' ವಿಷನ್ ಅನಾವರಣ
Authored by:
Akshata Halli
Date:
10 ಫೆಬ್ರುವರಿ 2026
➤
ಹೊಸ ದೆಹಲಿ:
ಸೇಶೆಲ್ಸ್ ಗಣರಾಜ್ಯದ ಅಧ್ಯಕ್ಷರಾದ
ಡಾ. ಪ್ಯಾಟ್ರಿಕ್ ಹರ್ಮಿನಿಯ (Dr. Patrick Herminie)
ಅವರು ಫೆಬ್ರವರಿ 5 ರಿಂದ 10, 2026 ರವರೆಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅಕ್ಟೋಬರ್ 2025 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶಿ ಪ್ರವಾಸವಾಗಿದ್ದು, ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಆಯಕಟ್ಟಿನ ಪಾತ್ರವನ್ನು ಇದು ಪುಷ್ಠೀಕರಿಸುತ್ತದೆ.
➤
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಹರ್ಮಿನಿಯ ನಡುವಿನ ಮಾತುಕತೆಯ ನಂತರ, ಸೇಶೆಲ್ಸ್ನ ಅಭಿವೃದ್ಧಿಗಾಗಿ ಭಾರತವು
$175 ಮಿಲಿಯನ್ (ಸುಮಾರು ₹1,450 ಕೋಟಿಗೂ ಹೆಚ್ಚು)
ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಸೇಶೆಲ್ಸ್ನ ಸಾಮಾಜಿಕ ವಸತಿ, ಇ-ಮೊಬಿಲಿಟಿ, ಆರೋಗ್ಯ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತವು ಒಟ್ಟು $175 ಮಿಲಿಯನ್ ಮೊತ್ತದ ಆರ್ಥಿಕ ಪ್ಯಾಕೇಜ್ ಅನ್ನು (ಸಾಲ ಮತ್ತು ಅನುದಾನದ ರೂಪದಲ್ಲಿ) ಘೋಷಿಸಿದೆ.
- ರೂಪಾಯಿ ಆಧಾರಿತ ಸಾಲ (Line of Credit) - $125
- ಅನುದಾನ (Grant) - $50
- ಒಟ್ಟು ನೆರವು - $175
➤
ಇಬ್ಬರೂ ನಾಯಕರು ಸುಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಭದ್ರತೆಗಾಗಿ
'SESEL' (Joint Vision for Sustainability, Economic Growth and Security through Enhanced Linkages)
ಎಂಬ ಜಂಟಿ ದೃಷ್ಟಿಕೋನವನ್ನು ಅನಾವರಣಗೊಳಿಸಿದ್ದಾರೆ.
➤
ಭಾರತ ಮತ್ತು ಸೇಶೆಲ್ಸ್ ನಡುವಿನ ಪ್ರಮುಖ ಸಹಕಾರ ಕ್ಷೇತ್ರಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ (DPI) ಜಾರಿ, ಭಾರತೀಯ ಫಾರ್ಮಾಕೋಪಿಯಾ ಮಾನ್ಯತೆ ಮತ್ತು ಆಂಬ್ಯುಲೆನ್ಸ್ಗಳ ಕೊಡುಗೆಯ ಮೂಲಕ ಆರೋಗ್ಯ ಕ್ಷೇತ್ರವನ್ನು ಸುಧಾರಿಸುವುದು, ಹಾಗೂ 'ವಿಷನ್ ಮಹಾಸಾಗರ್' ಅಡಿಯಲ್ಲಿ ಕಡಲ ಭದ್ರತೆ ಮತ್ತು ಜಂಟಿ ಹೈಡ್ರೋಗ್ರಾಫಿಕ್ ಘಟಕದ (SHU) ಸ್ಥಾಪನೆಯ ಮೂಲಕ ಕಡಲ ರಕ್ಷಣೆಯನ್ನು ಬಲಪಡಿಸುವುದು ಪ್ರಮುಖ ಉದ್ದೇಶಗಳಾಗಿವೆ.
➤
ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಈ ಕೆಳಗಿನ ಅಂಶಗಳು ಬಹಳ ಮುಖ್ಯ:
-
ವಿಷನ್ ಮಹಾಸಾಗರ್ (Vision MAHASAGAR):
2015 ರಲ್ಲಿ ಪ್ರಕಟಿಸಲಾಗಿದ್ದ 'SAGAR' (Security and Growth for All in the Region) ದೃಷ್ಠಿಕೋನದ ಸುಧಾರಿತ ರೂಪವೇ 'MAHASAGAR'. ಇದು ಜಾಗತಿಕ ದಕ್ಷಿಣದ (Global South) ದೇಶಗಳ ಅಭಿವೃದ್ಧಿ ಮತ್ತು ಭದ್ರತೆಯನ್ನು ಕೇಂದ್ರೀಕರಿಸುತ್ತದೆ.
-
ಕೊಲಂಬೊ ಭದ್ರತಾ ಸಮಾವೇಶ (Colombo Security Conclave - CSC):
ಸೇಶೆಲ್ಸ್ ಈ ಸಮಾವೇಶದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಲು ನಿರ್ಧರಿಸಿದೆ.
-
ರಾಜತಾಂತ್ರಿಕ ಸಂಬಂಧದ ಸುವರ್ಣ ಮಹೋತ್ಸವ:
2026 ನೇ ವರ್ಷವು ಭಾರತ ಮತ್ತು ಸೇಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧದ
50 ನೇ ವರ್ಷವಾಗಿದೆ
.
-
ಸೇಶೆಲ್ಸ್ ಹಿಂದೂ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಒಂದು ಆಯಕಟ್ಟಿನ ದ್ವೀಪ ರಾಷ್ಟ್ರವಾಗಿದೆ.
Take Quiz
Loading...