Job Description: ➤ ಭಾರತದ ಇಂಧನ ವಲಯ ಮತ್ತು ಪರಿಸರ ನೀತಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ದೇಶದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಭಾರತ ಸರ್ಕಾರವು ಪೆಟ್ರೋಲ್‌ನಲ್ಲಿ ಶೇಕಡಾ 30 ರವರೆಗೆ ಎಥನಾಲ್ ಮಿಶ್ರಣ ಮಾಡುವ 'E30 ಪೆಟ್ರೋಲ್ ಮಾನದಂಡಗಳನ್ನು' (E30 Petrol Norms) ಅಧಿಕೃತವಾಗಿ ಪ್ರಕಟಿಸಿದೆ. ಭಾರತೀಯ ಮಾನದಂಡಗಳ ಬ್ಯೂರೋ (Bureau of Indian Standards - BIS) ಈ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದ್ದು, ಇದು ದೇಶದ ಹಸಿರು ಇಂಧನ (Green Fuel) ಕ್ರಾಂತಿಗೆ ಹೊಸ ವೇಗ ನೀಡಲಿದೆ.➤ BIS ಸಂಸ್ಥೆಯು IS 19850:2026 ಮಾನದಂಡದ ಅಡಿಯಲ್ಲಿ E22, E25, E27 ಮತ್ತು E30 ಇಂಧನ ಮಿಶ್ರಣಗಳಿಗೆ ತಾಂತ್ರಿಕ ನಿಯಮಾವಳಿಗಳನ್ನು ಪ್ರಕಟಿಸಿದೆ. ಇಲ್ಲಿ E30 ಎಂದರೆ ಪೆಟ್ರೋಲ್‌ನಲ್ಲಿ 30% ಎಥನಾಲ್ ಮತ್ತು 70% ಸಾಂಪ್ರದಾಯಿಕ ಪೆಟ್ರೋಲ್ ಮಿಶ್ರಣವಾಗಿರುತ್ತದೆ. ಈ ಹೊಸ ತಾಂತ್ರಿಕ ಮಾನದಂಡಗಳ ಅಧಿಸೂಚನೆಯು ಮೇ 15, 2026 ರಿಂದಲೇ ಜಾರಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ದೇಶಾದ್ಯಂತ ಜಾರಿಯಲ್ಲಿರುವ E20 (20% ಎಥನಾಲ್ ಮಿಶ್ರಣ) ಗುರಿಯನ್ನು ದಾಟಿ ಮುಂದಿನ ಹಂತಕ್ಕೆ ತಲುಪುವುದು ಮತ್ತು ಜಾಗತಿಕವಾಗಿ (ವಿಶೇಷವಾಗಿ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ) ಉಂಟಾಗುತ್ತಿರುವ ಕಚ್ಚಾ ತೈಲದ ಬೆಲೆ ಏರಿಳಿತ ಹಾಗೂ ಪೂರೈಕೆ ವ್ಯತ್ಯಯದಿಂದ ದೇಶವನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ನಿಯಮಾವಳಿಗಳು ವಾಹನಗಳಲ್ಲಿ ಹೆಚ್ಚಿನ ಎಥನಾಲ್ ಮಿಶ್ರಿತ ಇಂಧನವನ್ನು ಸುರಕ್ಷಿತವಾಗಿ ಬಳಸಲು ಅಗತ್ಯವಿರುವ ಆಕ್ಟೇನ್ ಮಟ್ಟಗಳು (Octane levels), ಸಲ್ಫರ್ ಮಿತಿಗಳು (Sulphur limits), ನೀರಿನ ಅಂಶ, ಆವಿ ಒತ್ತಡ (Vapour pressure) ಮತ್ತು ತುಕ್ಕು ನಿರೋಧಕತೆಯಂತಹ ತಾಂತ್ರಿಕ ಗುಣಲಕ್ಷಣಗಳನ್ನು ವ್ಯಾಖ್ಯಾನಿಸುತ್ತವೆ. ➤ ಎಥನಾಲ್ ಮಿಶ್ರಣ ಕಾರ್ಯಕ್ರಮ: ಭಾರತ ಸರ್ಕಾರವು ರಾಷ್ಟ್ರೀಯ ಜೈವಿಕ ಇಂಧನ ನೀತಿ (National Policy on Biofuels) - 2018 ರ ಅಡಿಯಲ್ಲಿ ಎಥನಾಲ್ ಮಿಶ್ರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತವು ತನಗಿದ್ದ 20% ಎಥನಾಲ್ ಮಿಶ್ರಣದ (E20) ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ 2025-26 ರ ವೇಳಗಾಗಲೇ ಯಶಸ್ವಿಯಾಗಿ ಸಾಧಿಸಿದೆ. ಪ್ರಸ್ತುತ ದೇಶದಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ 20% ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ. ಈಗ E22 ರಿಂದ E30 ವರೆಗಿನ ಮಾನದಂಡಗಳನ್ನು ಪ್ರಕಟಿಸುವ ಮೂಲಕ ಫ್ಲೆಕ್ಸ್-ಫ್ಯುಯೆಲ್ (Flex-Fuel) ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ತಾಂತ್ರಿಕ ಹಾದಿಯನ್ನು ಸುಗಮಗೊಳಿಸಲಾಗಿದೆ. ➤ E30 ಪೆಟ್ರೋಲ್ ಮಾನದಂಡಗಳು ಭಾರತದ ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಲು (Foreign Exchange Savings), ಹೆಚ್ಚುವರಿ ಕೃಷಿ ಉತ್ಪನ್ನಗಳ ಬಳಕೆಯಿಂದ ರೈತರ ಆದಾಯವನ್ನು ಹೆಚ್ಚಿಸಲು, ವಾಹನಗಳ ಮಾಲಿನ್ಯ ಕಡಿಮೆ ಮಾಡಿ ಪರಿಸರ ಸಂರಕ್ಷಿಸಲು ಮತ್ತು ದೇಶದ ಎಥನಾಲ್ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸಹಕಾರಿಯಾಗಲಿವೆ. ದೈನಂದಿನ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್‌ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ