Job Description: ➤ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ತಮಿಳುನಾಡಿನ ಕಲ್ಪಾಕಂನಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರದಲ್ಲಿ (IGCAR) ವಿಶ್ವದ ಮೊದಲ ಅಣುಶಕ್ತಿ ಪ್ರಕ್ರಿಯೆಯ ಶಾಖ ಆಧಾರಿತ ಹೈಡ್ರೋಜನ್ ಉತ್ಪಾದನಾ ಘಟಕವನ್ನು (World's First Nuclear Process Heat-based Hydrogen Production Facility) ಯಶಸ್ವಿಯಾಗಿ ಉದ್ಘಾಟಿಸಲಾಗಿದೆ.➤ ತಮಿಳುನಾಡಿನ ಕಲ್ಪಾಕಂನಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರದ (IGCAR) ಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್‌ನ (FBTR) ಅಣುಶಕ್ತಿ ಶಾಖ ಹಾಗೂ ಕಾಪರ್-ಕ್ಲೋರಿನ್ (Cu-Cl) ಥರ್ಮೋಕೆಮಿಕಲ್ ತಂತ್ರಜ್ಞಾನವನ್ನು ಬಳಸಿ ಕಾರ್ಯನಿರ್ವಹಿಸುವ ಈ ಜಗತ್ತಿನ ಮೊದಲ ಘಟಕವನ್ನು ಪರಮಾಣು ಇಂಧನ ಇಲಾಖೆಯ (DAE) ಕಾರ್ಯದರ್ಶಿಗಳಾದ ಡಾ. ಅಜಿತ್ ಕುಮಾರ್ ಮೊಹಂತಿ ಅವರು ಉದ್ಘಾಟಿಸಿದರು.➤ ಸಾಮಾನ್ಯವಾಗಿ ಹೈಡ್ರೋಜನ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಅಥವಾ ಪಳೆಯುಳಿಕೆ ಇಂಧನಗಳ (Fossil Fuels) ಅಗತ್ಯವಿರುತ್ತದೆ. ಆದರೆ ಈ ಹೊಸ ಯೋಜನೆಯಲ್ಲಿ, ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರ (BARC) ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಕಾಪರ್-ಕ್ಲೋರಿನ್ (Cu-Cl) ಥರ್ಮೋಕೆಮಿಕಲ್ ಪ್ರಕ್ರಿಯೆಯನ್ನು ಬಳಸಲಾಗಿದೆ.➤ ಈ ಪ್ರಕ್ರಿಯೆಯಲ್ಲಿ ನೇರವಾಗಿ ವಿದ್ಯುತ್ ಬಳಸುವ ಬದಲಾಗಿ, ಪರಮಾಣು ರಿಯಾಕ್ಟರ್‌ನಿಂದ ಹೊರಹೊಮ್ಮುವ ತೀವ್ರವಾದ ಶಾಖವನ್ನು (Nuclear Process Heat) ಬಳಸಿಕೊಂಡು ನೀರನ್ನು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲಾಗುತ್ತದೆ.➤ ಭಾರತಕ್ಕೆ ಇದರ ಮಹತ್ವ: ಕಾರ್ಬನ್ ಮುಕ್ತ ಇಂಧನ (Decarbonisation): ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ. ಅಣುಶಕ್ತಿಯನ್ನು ಬಳಸಿ ಇದನ್ನು ತಯಾರಿಸುವುದರಿಂದ ಯಾವುದೇ ಹಸಿರುಮನೆ ಅನಿಲ (Greenhouse Gases) ಬಿಡುಗಡೆಯಾಗುವುದಿಲ್ಲ. ಇದು ಭಾರತದ 'ನೆಟ್-ಝೀರೋ ಕಾರ್ಬನ್' ಗುರಿಗೆ ಪೂರಕವಾಗಿದೆ. ಇಂಧನ ಭದ್ರತೆ (Energy Security): ಭಾರತವು ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಸ್ವದೇಶಿ ತಂತ್ರಜ್ಞಾನ (Make in India): BARC ಮತ್ತು IGCAR ಸಂಸ್ಥೆಗಳು ಜಂಟಿಯಾಗಿ ಈ ತಂತ್ರಜ್ಞಾನದ ವಿನ್ಯಾಸ, ಪರೀಕ್ಷೆ ಮತ್ತು ಸ್ಥಾಪನೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ಮಾಡಿವೆ.ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.