Job Description: ➤ ಭಾರತದ ಆತಿಥ್ಯದಲ್ಲಿ ಜೂನ್ 25, 2026 ರಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದ 11ನೇ ಬ್ರಿಕ್ಸ್ ಇಂಧನ ಸಚಿವರ ಸಭೆಯ ನೇತೃತ್ವವನ್ನು ಭಾರತದ ಪರವಾಗಿ ಕೇಂದ್ರ ವಿದ್ಯುತ್ ಮತ್ತು ನಗರಾಭಿವೃದ್ಧಿ ಸಚಿವ ಶ್ರೀ ಮನೋಹರ್ ಲಾಲ್ ಅವರು ವಹಿಸಿದ್ದರು, ಹಾಗೂ ಈ ಸಮಾವೇಶದಲ್ಲಿ ಬ್ರಿಕ್ಸ್ ದೇಶಗಳ ಇಂಧನ ಸಚಿವರಲ್ಲದೆ ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA), ಜಾಗತಿಕ ಜೈವಿಕ ಇಂಧನ ಒಕ್ಕೂಟ (GBA) ಮತ್ತು ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (NDB) ಸಂಸ್ಥೆಗಳ ಪ್ರಮುಖ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಮುಖ್ಯ ವಿಷಯ (Theme): “Building for Resilience, Innovation, Cooperation and Sustainability” (ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ).ಧ್ಯೇಯವಾಕ್ಯ (Energy Track Theme): "ಸರ್ವೇಷಾಂ ಊರ್ಜಮ್" (Energy for All - ಎಲ್ಲರಿಗೂ ಇಂಧನ).➤ ಚರ್ಚಿಸಲಾದ 3 ಪ್ರಮುಖ ಆದ್ಯತಾ ಕ್ಷೇತ್ರಗಳು: ಇಂಧನ ಭದ್ರತೆ ಮತ್ತು ಸುಸ್ಥಿರತೆ: ಗಟ್ಟಿಯಾದ ಇಂಧನ ವ್ಯವಸ್ಥೆಗಳು, ಗ್ರಿಡ್ ಆಧುನೀಕರಣ, ಇಂಧನ ಸಂಗ್ರಹಣೆ ಮತ್ತು ಸುರಕ್ಷಿತ ಪೂರೈಕೆ. ಇಂಧನ ಲಭ್ಯತೆ ಮತ್ತು ಸಮಾನತೆ: ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಶುದ್ಧ ಇಂಧನ ಒದಗಿಸುವುದು ಹಾಗೂ ಕ್ಲೀನ್ ಕುಕಿಂಗ್ (ಸ್ವಚ್ಛ ಅಡುಗೆ ಅನಿಲ/ಇಂಧನ) ಪರಿಹಾರಗಳು. ತಂತ್ರಜ್ಞಾನ ಮತ್ತು ನಾವೀನ್ಯತೆ: ಸ್ಮಾರ್ಟ್ ಗ್ರಿಡ್‌ಗಳು, ಹೈಡ್ರೋಜನ್ ಮೌಲ್ಯ ಸರಪಳಿಗಳು, ಇಂಧನ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ಮತ್ತು ಜೈವಿಕ ಇಂಧನಗಳು. ➤ ಭಾರತದ ಇಂಧನ ಕ್ಷೇತ್ರದ ಸಾಧನೆಗಳು: 3ನೇ ಅತಿ ದೊಡ್ಡ ಉತ್ಪಾದಕ: ಭಾರತವು ಪ್ರಸ್ತುತ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ವಿದ್ಯುತ್ ಉತ್ಪಾದಕ ಮತ್ತು ಬಳಕೆದಾರ ದೇಶವಾಗಿದೆ. ಇನ್‌ಸ್ಟಾಲ್ಡ್ ಸಾಮರ್ಥ್ಯ: ಭಾರತದ ಒಟ್ಟು ವಿದ್ಯುತ್ ಇನ್‌ಸ್ಟಾಲ್ಡ್ ಸಾಮರ್ಥ್ಯವು ಸುಮಾರು 540 GW ತಲುಪಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಪಳೆಯುಳಿಕೆ ರಹಿತ (Non-fossil) ಮೂಲಗಳಿಂದ ಬರುತ್ತಿದೆ. ಸೌರಶಕ್ತಿ ಕ್ರಾಂತಿ: 2014 ರಲ್ಲಿ ಕೇವಲ 3 GW ಇದ್ದ ಸೌರಶಕ್ತಿ ಸಾಮರ್ಥ್ಯವು ಇಂದು 154 GW ಗಿಂತಲೂ ಹೆಚ್ಚು ಹೆಚ್ಚಾಗಿದೆ. ಪ್ರಮುಖ ಯೋಜನೆಗಳು: 'ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ' ಮೂಲಕ ಮನೆಗಳ ಮೇಲ್ಛಾವಣಿ ಸೌರಶಕ್ತಿ (Rooftop Solar) ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಭವಿಷ್ಯದ ಗುರಿಗಳು: 2032 ರ ವೇಳೆಗೆ 400 GWh ಇಂಧನ ಸಂಗ್ರಹಣಾ ಸಾಮರ್ಥ್ಯ ಮತ್ತು 2047 ರ ವೇಳೆಗೆ 100 GW ಪರಮಾಣು ವಿದ್ಯುತ್ ಸಾಮರ್ಥ್ಯ ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ. ಜೊತೆಗೆ ಭಾರತವು ನಿಗದಿತ ಸಮಯಕ್ಕಿಂತ ಮೊದಲೇ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣದ (Ethanol Blending) ಗುರಿಯನ್ನು ಸಾಧಿಸಿದೆ. ➤ ಭಾರತದ ಅಧ್ಯಕ್ಷತೆಯಲ್ಲಿ ಹೊರಬಂದ ಪ್ರಮುಖ ನಿರ್ಧಾರಗಳು: BRICS ಡಿಜಿಟಲ್ ಸೆಂಟರ್ ಆಫ್ ಎಕ್ಸಲೆನ್ಸ್: ಸ್ಮಾರ್ಟ್ ಗ್ರಿಡ್‌ಗಳು ಮತ್ತು ಇಂಧನ ಸಂಗ್ರಹಣೆಗಾಗಿ ಪ್ರತ್ಯೇಕ ಡಿಜಿಟಲ್ ಕೇಂದ್ರವನ್ನು (BRICS Digital Centre of Excellence for Smart Grids and Energy Storage) ಪ್ರಾರಂಭಿಸಲಾಯಿತು. ಇದು ಜ್ಞಾನ ಹಂಚಿಕೆಗೆ ವೇದಿಕೆಯಾಗಲಿದೆ. ಸ್ಮಾರ್ಟ್ ಗ್ರಿಡ್ ಮಾರ್ಗದರ್ಶಿ ಸೂತ್ರಗಳು: ನವೀಕರಿಸಬಹುದಾದ ಇಂಧನವನ್ನು ಸುಲಭವಾಗಿ ಸಂಯೋಜಿಸಲು ಬ್ರಿಕ್ಸ್ ದೇಶಗಳು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡಿವೆ. ಹೈಡ್ರೋಜನ್ ಮೌಲ್ಯ ಸರಪಳಿ ವರದಿ: ಭವಿಷ್ಯದ ಹಸಿರು ಹೈಡ್ರೋಜನ್ ತಂತ್ರಜ್ಞಾನಗಳ ಸಹಕಾರಕ್ಕಾಗಿ ಜಂಟಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ಅಧ್ಯಕ್ಷತೆ: 2027 ರ ಸಾಲಿನ ಬ್ರಿಕ್ಸ್ ಇಂಧನ ಸಚಿವರ ಸಭೆಯ ಅಧ್ಯಕ್ಷತೆಯನ್ನು ಚೀನಾ ದೇಶ ವಹಿಸಿಕೊಳ್ಳಲಿದೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ