Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಫ್ರಾನ್ಸ್ ತಂತ್ರಜ್ಞಾನದ ಹ್ಯಾಮರ್ ಕ್ಷಿಪಣಿ ಇನ್ನು ಭಾರತದಲ್ಲೇ ನಿರ್ಮಾಣ: ರಕ್ಷಣಾ ವಲಯದಲ್ಲಿ ಐತಿಹಾಸಿಕ ಒಪ್ಪಂದ
Authored by:
Akshata Halli
Date:
18 ಫೆಬ್ರುವರಿ 2026
➤
ಬೆಂಗಳೂರು:
ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಸಂಬಂಧಕ್ಕೆ ಈಗ ಹೊಸ ಶಕ್ತಿ ಬಂದಿದೆ. ಫೆಬ್ರವರಿ 17, 2026ರಂದು ನಡೆದ
6ನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಸಂವಾದದಲ್ಲಿ
ಅತ್ಯಾಧುನಿಕ 'ಹ್ಯಾಮರ್' (HAMMER) ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ಉತ್ಪಾದಿಸಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರಕ್ಷಣಾ ಸಚಿವ
ರಾಜನಾನತ್ ಸಿಂಗ್
ಮತ್ತು ಫ್ರಾನ್ಸ್ ಸಚಿವೆ
ಕ್ಯಾಥರಿನ್ ವಾಟ್ರಿನ್
ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದ ನಡೆದಿದ್ದು, ಇದು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ದೊಡ್ಡ ಬಲ ನೀಡಲಿದೆ.
➤
ಹ್ಯಾಮರ್ ಎಂದರೆ
Highly Agile Modular Munition Extended Range
. ಇದು ಕೇವಲ ಬಾಂಬ್ ಅಲ್ಲ, ಬದಲಾಗಿ ಸಾಮಾನ್ಯ ಗ್ರಾವಿಟಿ ಬಾಂಬ್ಗಳನ್ನು ಅತ್ಯಂತ ನಿಖರವಾಗಿ ಗುರಿ ತಲುಪುವ 'ಸ್ಮಾರ್ಟ್ ಬಾಂಬ್'ಗಳಾಗಿ ಪರಿವರ್ತಿಸುವ ಒಂದು ತಾಂತ್ರಿಕ ಸಾಧನವಾಗಿದೆ.
ಅಭಿವೃದ್ಧಿ:
ಫ್ರಾನ್ಸ್ನ ಸಫ್ರಾನ್ (Safran) ಎಲೆಕ್ಟ್ರಾನಿಕ್ಸ್ ಅಂಡ್ ಡಿಫೆನ್ಸ್ ಸಂಸ್ಥೆ.
ವಿಶೇಷತೆ:
ಇದು ಮಾಡ್ಯುಲರ್ ವಿನ್ಯಾಸ ಹೊಂದಿದ್ದು, ವಿವಿಧ ತೂಕದ ಬಾಂಬ್ಗಳಿಗೆ (125 ಕೆಜಿಯಿಂದ 1,000 ಕೆಜಿ) ಅಳವಡಿಸಬಹುದಾಗಿದೆ.
➤
ಹ್ಯಾಮರ್ ಶಸ್ತ್ರಾಸ್ತ್ರವು ಎರಡು ಪ್ರಮುಖ ಭಾಗಗಳನ್ನು ಒಳಗೊಂಡಿದೆ:
1.
ಮಾರ್ಗದರ್ಶನ ಕಿಟ್ (Guidance Kit):
ಬಾಂಬ್ನ ಮುಂಭಾಗದಲ್ಲಿ ಇರುತ್ತದೆ. ಇದರಲ್ಲಿ ಜಿಪಿಎಸ್ (GPS), ಇನರ್ಷಿಯಲ್ ನೇವಿಗೇಶನ್ (INS) ಮತ್ತು ಅಗತ್ಯವಿದ್ದರೆ ಲೇಸರ್ ಮಾರ್ಗದರ್ಶನ ಇರುತ್ತದೆ. ಇದು 1 ರಿಂದ 10 ಮೀಟರ್ನಷ್ಟು ನಿಖರವಾಗಿ ಗುರಿಯನ್ನು ಹೊಡೆಯಲು ಸಹಾಯ ಮಾಡುತ್ತದೆ.
2.
ಪ್ರೊಪಲ್ಸನ್ ಕಿಟ್ (Range Extension Kit):
ಬಾಂಬ್ನ ಹಿಂಭಾಗದಲ್ಲಿ ರಾಕೆಟ್ ಬೂಸ್ಟರ್ ಅಳವಡಿಸಲಾಗಿರುತ್ತದೆ. ಇದು ಬಾಂಬ್ ಬಿಡುಗಡೆಯಾದ ನಂತರ ಸುಮಾರು
60 ರಿಂದ 70 ಕಿಲೋಮೀಟರ್
ದೂರದವರೆಗೆ ಚಲಿಸುವಂತೆ ಮಾಡುತ್ತದೆ.
ಕಾರ್ಯವೈಖರಿ:
ಯುದ್ಧವಿಮಾನವು ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯ ವ್ಯಾಪ್ತಿಯೊಳಗೆ ಹೋಗದೆಯೇ, ದೂರದಿಂದಲೇ ಈ ಬಾಂಬ್ ಅನ್ನು ಉಡಾಯಿಸಬಹುದು. ಇದು ಬೆಟ್ಟ-ಗುಡ್ಡಗಳು ಅಥವಾ ಬಂಕರ್ಗಳಲ್ಲಿ ಅಡಗಿರುವ ಶತ್ರುಗಳನ್ನು ನಿಖರವಾಗಿ ಧ್ವಂಸ ಮಾಡುತ್ತದೆ.
➤
ಭಾರತಕ್ಕೆ ಈ ಒಪ್ಪಂದದ ಮಹತ್ವ:
-
ಈವರೆಗೆ ನಾವು ಹ್ಯಾಮರ್ ಕ್ಷಿಪಣಿಗಳನ್ನು ಫ್ರಾನ್ಸ್ನಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ಭಾರತದ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಮತ್ತು ಫ್ರಾನ್ಸ್ನ
ಸಫ್ರಾನ್
ಜಂಟಿಯಾಗಿ ಭಾರತದಲ್ಲೇ ಇದನ್ನು ಉತ್ಪಾದಿಸಲಿವೆ.
-
ಪ್ರಸ್ತುತ ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನಗಳಲ್ಲಿ ಈ ಹ್ಯಾಮರ್ ಬಳಸಲಾಗುತ್ತಿದೆ. ಮುಂದೆ ಇದನ್ನು ತೇಜಸ್ (LCA Tejas) ವಿಮಾನಗಳಿಗೂ ಅಳವಡಿಸುವ ಸಾಧ್ಯತೆಯಿದೆ.
-
ಶೇ. 60ರಷ್ಟು ಸ್ಥಳೀಯ ಉತ್ಪಾದನೆಯ ಗುರಿ ಹೊಂದಿರುವುದರಿಂದ ತಾಂತ್ರಿಕ ಜ್ಞಾನದ ವರ್ಗಾವಣೆ (Transfer of Technology) ಆಗಲಿದೆ.
ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Take Quiz
Loading...