Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನವದೆಹಲಿಯಲ್ಲಿ 2ನೇ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆ
Authored by:
Basavaraj Halli
Date:
31 ಜನವರಿ 2026
➤ ಭಾರತ ಮತ್ತು ಅರಬ್ ಜಗತ್ತಿನ ನಡುವಿನ ಐತಿಹಾಸಿಕ ಬಾಂಧವ್ಯವು ಇಂದು ಹೊಸ ಎತ್ತರಕ್ಕೆ ಏರಿದೆ. ನವದೆಹಲಿಯಲ್ಲಿ ನಡೆಯುತ್ತಿರುವ
2ನೇ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆ (IAFMM)
ಕೇವಲ ರಾಜತಾಂತ್ರಿಕ ಸಭೆಯಲ್ಲ, ಇದು ಏಷ್ಯಾದ ಎರಡು ಪ್ರಬಲ ವಲಯಗಳ ನಡುವಿನ ಆರ್ಥಿಕ ಮತ್ತು ಭದ್ರತಾ ಮೈತ್ರಿಯ ಸಂಕೇತವಾಗಿದೆ. ಭಾರತ ಮತ್ತು ಅರಬ್ ಎಮಿರೇಟ್ಸ್ (UAE) ಜಂಟಿಯಾಗಿ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿವೆ.ಅರಬ್ ಲೀಗ್ನ ಎಲ್ಲಾ
22 ಸದಸ್ಯ ರಾಷ್ಟ್ರಗಳ
ವಿದೇಶಾಂಗ ಸಚಿವರು ಮತ್ತು ಅರಬ್ ಲೀಗ್ನ ಪ್ರಧಾನ ಕಾರ್ಯದರ್ಶಿಗಳು ಈ ಐತಿಹಾಸಿಕ ಸಭೆಯಲ್ಲಿ ಭಾಗವಹಿಸಿದ್ದಾರೆ.
- ಮೊದಲ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯು 2016ರಲ್ಲಿ
ಬಹ್ರೇನ್ನ ಮನಾಮದಲ್ಲಿ
ನಡೆದಿತ್ತು. ಬರೋಬ್ಬರಿ 10 ವರ್ಷಗಳ ಸುದೀರ್ಘ ಅಂತರದ ನಂತರ ಎರಡನೇ ಸಭೆ ನಡೆಯುತ್ತಿರುವುದು ವಿಶೇಷ.
- 2022ರ ಮಾರ್ಚ್ನಲ್ಲಿ ಭಾರತ ಮತ್ತು ಅರಬ್ ಲೀಗ್ ಸಂವಾದ ಪ್ರಕ್ರಿಯೆಯನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸಲು (Institutionalization) ಸಹಿ ಹಾಕಿದವು. ಇದು ನಿರಂತರ ಸಂವಹನಕ್ಕೆ ಅಡಿಪಾಯ ಹಾಕಿಕೊಟ್ಟಿದೆ.
➤ ಪ್ರಧಾನಿ ನರೇಂದ್ರ ಮೋದಿಯವರು ಅರಬ್ ನಿಯೋಗವನ್ನು ಬರಮಾಡಿಕೊಂಡು, ಅರಬ್ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ಗಾಢವಾದ ಜನ-ಜನರ ನಡುವಿನ ಸಂಬಂಧವನ್ನು (People-to-People ties) ಶ್ಲಾಘಿಸಿದರು. ಸಭೆಯಲ್ಲಿ ಮುಖ್ಯವಾಗಿ ಐದು ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ:
=>
ಇಂಧನ ಭದ್ರತೆ (Energy Security):
ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಸುವ ರಾಷ್ಟ್ರಗಳೆಂದರೆ ಅರಬ್ ರಾಷ್ಟ್ರಗಳು. ಈ ಸಂಬಂಧವನ್ನು ಕೇವಲ 'ಖರೀದಿದಾರ-ಮಾರಾಟಗಾರ' ಸಂಬಂಧದಿಂದ ದಾಟಿ 'ತಂತ್ರಜ್ಞಾನ ಪಾಲುದಾರಿಕೆ'ಗೆ ಕೊಂಡೊಯ್ಯುವುದು ಈ ಸಭೆಯ ಗುರಿ.
=>
ಆಹಾರ ಭದ್ರತೆ (Food Security):
ಭಾರತವು ಅರಬ್ ರಾಷ್ಟ್ರಗಳಿಗೆ ಪ್ರಮುಖ ಕೃಷಿ ಉತ್ಪನ್ನಗಳ ರಫ್ತುದಾರನಾಗಿದ್ದು, 'ಇಂಡೋ-ಅರಬ್ ಫುಡ್ ಕಾರಿಡಾರ್' ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದೆ.
=>
ತಂತ್ರಜ್ಞಾನ ಮತ್ತು ಹೂಡಿಕೆ:
ಸೌದಿ ಅರೇಬಿಯಾ ಮತ್ತು ಯುಎಇಯಂತಹ ರಾಷ್ಟ್ರಗಳು ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಆಸಕ್ತಿ ತೋರಿವೆ.
➤
ಪ್ರಾದೇಶಿಕ ಶಾಂತಿ ಮತ್ತು ಪ್ಯಾಲೆಸ್ಟೈನ್ ವಿಚಾರ:
ಪ್ರಧಾನಿ ಮೋದಿಯವರು ಈ ಸಭೆಯಲ್ಲಿ
ಪ್ಯಾಲೆಸ್ಟೈನ್
ವಿಚಾರವಾಗಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ: ಭಾರತವು ಮೊದಲಿನಿಂದಲೂ 'ಟೂ-ಸ್ಟೇಟ್ ಸೊಲ್ಯೂಷನ್' (ಎರಡು ರಾಷ್ಟ್ರಗಳ ಪರಿಹಾರ) ಅನ್ನು ಬೆಂಬಲಿಸುತ್ತಾ ಬಂದಿದೆ ಮತ್ತು ಗಾಜಾ ಶಾಂತಿ ಯೋಜನೆಯನ್ನು ಬೆಂಬಲಿಸುವ ಮೂಲಕ, ಮಧ್ಯಪ್ರಾಚ್ಯದಲ್ಲಿ ಸ್ಥಿರತೆಯನ್ನು ಕಾಪಾಡುವಲ್ಲಿ ಅರಬ್ ಲೀಗ್ನ ಪಾತ್ರವನ್ನು ಭಾರತ ಶ್ಲಾಘಿಸಿದೆ.
Take Quiz
Loading...