* ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 'ಇಂಧನ ಸಂರಕ್ಷಣಾ ಕಾಯಿದೆ - 2001' ಅಡಿಯಲ್ಲಿ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಿದೆ.* ಈ ಅಧಿಸೂಚನೆ 'ಕಾರ್ಬನ್ ಕ್ರೆಡಿಟ್ ವ್ಯಾಪಾರ ಯೋಜನೆ - 2023'ರ ಭಾಗವಾಗಿದ್ದು, ದೇಶದಲ್ಲಿ ಹಸಿರುಮನೆ ಅನಿಲಗಳ ಮಟ್ಟವನ್ನು ಕಡಿಮೆ ಮಾಡಲು ರಾಷ್ಟ್ರೀಯ ಚೌಕಟ್ಟನ್ನು ರೂಪಿಸುವ ಗುರಿಯನ್ನು ಹೊಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* ಹೊಸ ನಿಯಮಗಳಂತೆ ಕೈಗಾರಿಕೆಗಳಿಗೆ ನಿರ್ದಿಷ್ಟ ಕಾರ್ಬನ್ ಹೊರಸೂಸುವಿಕೆ ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅವು 2025-26ರ ವರೆಗೆ ಅನ್ವಯವಾಗಲಿವೆ.* ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ, ಮತ್ತು ಆ ದಂಡದಿಂದ ಪಡೆದ ಹಣವನ್ನು ಕಾರ್ಬನ್ ಕ್ರೆಡಿಟ್ ಯೋಜನೆಯ ನಿರ್ವಹಣೆಗೆ ಉಪಯೋಗಿಸಲಾಗುತ್ತದೆ.