* ಕೇಂದ್ರ ವಿದ್ಯುತ್ ಸಚಿವಾಲಯವು 2023-24ರ ಆರ್ಥಿಕ ವರ್ಷದ ರಾಜ್ಯಗಳ ಇಂಧನ ದಕ್ಷತಾ ಸೂಚ್ಯಂಕ (SEEI) ಪ್ರಕಟಿಸಿದೆ. * ಮಹಾರಾಷ್ಟ್ರವು ರಾಷ್ಟ್ರವ್ಯಾಪಿ ಮೊದಲ ಸ್ಥಾನ ಗಳಿಸಿದ್ದು, 2070ರ ವೇಳೆಗೆ ಶೂನ್ಯ ಇಂಧನ ಹೊರಸೂಸುವಿಕೆ ಹಾಗೂ 2030ರೊಳಗೆ ಶೇ.45ರಷ್ಟು ಕಡಿತ ಗುರಿ ಹೊಂದಲಾಗಿದೆ.* ಈ ಸೂಚ್ಯಂಕವನ್ನು ಇಂಧನ ದಕ್ಷತಾ ಬ್ಯೂರೋ (BEE) ಮತ್ತು ಇಂಧನ ದಕ್ಷತೆಯ ಆರ್ಥಿಕ ಒಕ್ಕೂಟ (AEEE) ಅಭಿವೃದ್ಧಿಪಡಿಸಿದೆ.* ಕಟ್ಟಡ, ಸಾರಿಗೆ, ಕೃಷಿ, ಕೈಗಾರಿಕೆ, ವಿದ್ಯುತ್ ವಿತರಣಾ ಕಂಪನಿ, ಪುರಸಭೆ ಸೇವೆಗಳು ಸೇರಿದಂತೆ 7 ಬೇಡಿಕೆ ವಲಯಗಳ ಮೇಲೆ ಆಧಾರಿತವಾಗಿ 66 ಮಾನದಂಡಗಳನ್ನು ಬಳಸಿ ರಾಜ್ಯಗಳ ಕಾರ್ಯಕ್ಷಮತೆಯನ್ನು ಅಳೆಯಲಾಗಿದೆ.* 24 ರಾಜ್ಯಗಳು ಇಂಧನ ಸಂರಕ್ಷಣಾ ಕಟ್ಟಡ ಸಂಹಿತ (2017) ಅಧಿಸೂಚನೆ ಹೊರಡಿಸಿವೆ. 31 ರಾಜ್ಯಗಳಲ್ಲಿ ವಿದ್ಯುತ್ ಚಲನಶೀಲತಾ ನೀತಿ ಜಾರಿಗೆ ಬಂದಿದೆ.* 14 ರಾಜ್ಯಗಳು ಕಟ್ಟಡಗಳಲ್ಲಿ ಇವಿ ಚಾರ್ಜಿಂಗ್ ಕಡ್ಡಾಯಗೊಳಿಸಿವೆ. 13 ರಾಜ್ಯಗಳು ಸೌರ ಪಂಪ್ಗಳನ್ನು ಕೃಷಿಯಲ್ಲಿ ಬಳಸುತ್ತಿವೆ. ಎಲ್ಲ ರಾಜ್ಯಗಳು ಇಂಧನ ದಕ್ಷತಾ ಕ್ರಿಯಾ ಯೋಜನೆ ಜಾರಿಗೊಳಿಸಿವೆ.ರಾಜ್ಯಗಳ ಶ್ರೇಯಾಂಕಗುಂಪು 1: ಮಹಾರಾಷ್ಟ್ರ – ಮೊದಲ ಸ್ಥಾನ.ಗುಂಪು 2: ಆಂಧ್ರಪ್ರದೇಶ – ಮೊದಲ ಸ್ಥಾನ.ಗುಂಪು 3: ಅಸ್ಸಾಂ – ಮೊದಲ ಸ್ಥಾನ.ಗುಂಪು 4: ತ್ರಿಪುರ – ಮೊದಲ ಸ್ಥಾನ.* ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಅಸ್ಸಾಂ, ಕೇರಳವನ್ನು 'ಸಾಧಕರು' ಎಂದು ವರ್ಗೀಕರಿಸಲಾಗಿದ್ದು, ಹರಿಯಾಣ, ಪಂಜಾಬ್, ರಾಜಸ್ಥಾನ, ಒಡಿಶಾ, ಉತ್ತರಪ್ರದೇಶ ಸ್ಪರ್ಧಿಗಳ ಗುಂಪಿಗೆ ಸೇರಿವೆ.