* ಇಂಡಸ್ಇಂಡ್ ಬ್ಯಾಂಕ್ನ ಸಿಇಒ ಮತ್ತು ಎಂಡಿ ಸುಮಂತ್ ಕಥಪಾಲಿಯಾ ಅವರು ಡಿರೈವೇಟಿವ್ಸ್ ಸಂಬಂಧಿತ ವಿವಾದದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.* 2024–25ನೇ ಆರ್ಥಿಕ ವರ್ಷದ ಬ್ಯಾಂಕ್ನ ಲೆಕ್ಕಪತ್ರದಲ್ಲಿ ₹1,960 ಕೋಟಿ ವ್ಯತ್ಯಾಸ ಕಂಡು ಬಂದಿದೆ.* ರಾಜೀನಾಮೆ ಬಳಿಕ ಆರ್ಬಿಐ ಅನುಮೋದನೆಯೊಂದಿಗೆ ಮಧ್ಯಂತರ ಎಕ್ಸಿಕ್ಯೂಟಿವ್ ಕಮಿಟಿ ರಚನೆ ಮಾಡಲಾಗಿದೆ.* ಈ ಕಮಿಟಿಯಲ್ಲಿ ಸೌಮಿತ್ರ ಸೇನ್ (ಕನ್ಸ್ಯೂಮರ್ ಬ್ಯಾಂಕಿಂಗ್ ಮುಖ್ಯಸ್ಥ) ಮತ್ತು ಅನಿಲ್ ರಾವ್ (ಮುಖ್ಯ ಆಡಳಿತಾಧಿಕಾರಿ) ಇದ್ದಾರೆ. ಇಬ್ಬರೂ ತಾತ್ಕಾಲಿಕವಾಗಿ ಸಿಇಒ ಹೊಣೆಗಳನ್ನು ನಿಭಾಯಿಸಲಿದ್ದಾರೆ.* ಡಿರೈವೇಟಿವ್ ಪೋರ್ಟ್ಫೋಲಿಯೊ ಲೆಕ್ಕದ ತಪ್ಪಿನಿಂದ ಬ್ಯಾಂಕ್ ಮೌಲ್ಯ ಶೇ. 2.35ರಷ್ಟು ಕುಸಿತ – ಶೇರು ಬೆಲೆ ಶೇ. 26ರಷ್ಟು ಇಳಿಕೆ ಕಂಡಿದೆ.* ಆರ್ಬಿಐ, ಕಥಪಾಲಿಯಾ ಮುಂದುವರಿಕೆಗೆ ಒಂದು ವರ್ಷ ಮಾತ್ರ ಅವಕಾಶ ನೀಡಿತ್ತು – ಮೂರು ವರ್ಷಕ್ಕಾಗಿದ್ದ ಮನವಿಯನ್ನು ತಿರಸ್ಕರಿಸಿತ್ತು.* ಹೊಸ ಸಿಇಒ ನೇಮಕವಾಗುವವರೆಗೆ ತಾತ್ಕಾಲಿಕ ತಂಡ ಮೂರು ತಿಂಗಳು ಆಡಳಿತ ನಡೆಸಲಿದೆ.