* ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಡಬಲ್ಸ್ ಪ್ರಶಸ್ತಿ ಪಡೆದು, ಚಾರಿತ್ರಿಕ ದಾಖಲೆ ಮಾಡಿದರು.* ಅಕ್ಟೋಬರ್ 1 ಭಾನುವಾರ ದಿನದಂದು ನಡೆದ ಫೈನಲ್‌ನಲ್ಲಿ ಭಾರತದ ಜೋಡಿಯು 21-17, 21-18ರ ನೇರ ಗೇಮ್‌ಗಳಲ್ಲಿ ಮಲೇಷ್ಯಾದ ಅರನ್ ಚಿಯಾ ಮತ್ತು ಸೊಹ ವೂಯಿ ಯೀಕಾ ವಿರುದ್ಧ ಜಯಗಳಿಸಿದರು.* ಸೂಪರ್ 1000 ಟೂರ್ನಿಯಲ್ಲಿ ಡಬಲ್ಸ್‌ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.