* ಕೇಂದ್ರ ಸರ್ಕಾರವು ಇಂಡಿಯಾ AI ಕಂಪ್ಯೂಟ್ ಪೋರ್ಟಲ್ ಪರಿಚಯಿಸಲಿದೆ. ಈ ಕುರಿತು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ.* ಬಿಡ್ ಮೂಲಕ ಹತ್ತು ಕಂಪನಿಗಳನ್ನು ಆಯ್ಕೆ ಮಾಡಲಿದ್ದು, ನಂತರ ಈ ಕಂಪನಿಗಳು ಇಂಡಿಯಾ ಎಐ ಮಿಷನ್ ನ ಸುಮಾರು 14,000 ಗ್ರಾಫಿಕ್ಸ್ ಸಂಸ್ಕರಣಾ ಘಟಕಗಳನ್ನು(GPU) ಒದಗಿಸಲಿವೆ.* 14,000 GPUಗಳು Yotta Data Services, E2E Networks, Tata Communications ಮತ್ತು AWS ನಲ್ಲಿ ಲಭ್ಯವಿದ್ದು, ಉಳಿದ 4,000 GPUಗಳನ್ನು Jio Platforms ಮತ್ತು CtrlS Datacenters ಖರೀದಿಸಲಿವೆ.* ಈ ಪೈಕಿ ಶೇ.70ರಷ್ಟು ಜಿಪಿಯುಗಳು ಎನ್ ವಿಡಿಯಾಎಚ್ 100ನಂತಹ ಉನ್ನತ ಮಾದರಿಗಳಾಗಿರಲಿವೆ. ಉಳಿದ ಶೇ.30ರಷ್ಟು ಜಿಪಿಯುಗಳು ಹಳೆಯ ಮಾದರಿಗಳಾಗಿರಲಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.* ಏಪ್ರಿಲ್ 30ರ ಒಳಗೆ ಕಂಪನಿಗಳು ಬಿಡ್ ಗೆ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ'' ಎಂದಿದ್ದಾರೆ.* “ಚೀನಾದ ಡೀಪ್ ಸೀಕ್ಗೆ ಪ್ರತಿಯಾಗಿ ಕೇಂದ್ರ ಸರಕಾರವು ದೇಶೀಯ ಎಐ ಅನ್ನು ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ. ಹೊಸ ಚಿಪ್ಗಳನ್ನು ತಯಾರಿಸುವ ಮೂಲಕ ಚಾಟ್ ಜಿಪಿಟಿ, ಜೆಮಿನಿ ಮಾದರಿಯ ಎಐ ಅಭಿವೃದ್ಧಿಪಡಿಸಲಿದೆ. ಈ ಮೂಲಕ ಸ್ಟಾರ್ಟಪ್ ಗಳಿಗೆ ಉತ್ತೇಜನ ನೀಡುವುದು" ಕೇಂದ್ರದ ಗುರಿಯಾಗಿದೆ ಎಂದು ಹೇಳಿದ್ದಾರೆ* ಇಂಡಿಯಾ AI ಕಂಪ್ಯೂಟ್ ಪಿಲ್ಲರ್ ಎಲ್ಲ ಕೇಂದ್ರ ಸಚಿವಾಲಯಗಳು, ಇಲಾಖೆಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಕಂಪ್ಯೂಟ್, ನೆಟ್ವರ್ಕ್ ಹಾಗೂ ಶೇಖರಣಾ ಸೇವೆಗಳಿಗೆ ಸಬ್ಸಿಡಿ ದರಗಳ ವಿವರಗಳ ಜ್ಞಾಪಕ ಪತ್ರ ನೀಡಿದೆ.* ಇದು ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಿಗೂ ಕಂಪ್ಯೂಟ್ ಸಾಮರ್ಥ್ಯ ವಿನಂತಿಸಲು ವೇದಿಕೆ ಒದಗಿಸುತ್ತದೆ.