* ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ನೀಡುವ ಹಳದಿ ಮಾರ್ಗದ ನಾಲ್ಕನೇ ಚಾಲಕರಹಿತ ಮೆಟ್ರೋ ರೈಲನ್ನು ತೀತಾಘರ್ ರೈಲ್ ಸಿಸ್ಟಂ ಲಿಮಿಟೆಡ್ ಕೊಲ್ಕತ್ತಾದಿಂದ ರವಾನಿಸಿದ್ದು, ಎರಡು ವಾರದಲ್ಲಿ ಬೆಂಗಳೂರು ತಲುಪಲಿದೆ.* ಬಿಎಂಆರ್ಸಿಎಲ್ ಆಗಸ್ಟ್ 15ರೊಳಗೆ ಈ ಮಾರ್ಗ ಆರಂಭಿಸಲು ತೀರ್ಮಾನಿಸಿದ್ದು, ಈಗಾಗಲೇ ಮೂರು ರೈಲುಗಳು ಬೆಂಗಳೂರಿಗೆ ಆಗಮಿಸಿವೆ. ನಾಲ್ಕನೇ ರೈಲು ಆಗಮಿಸಿದರೂ ಕೂಡ ತಪಾಸಣೆಗಾಗಿ 15 ದಿನ ಬೇಕಾಗುತ್ತದೆ.* ಆಗಸ್ಟ್ ಅಂತ್ಯಕ್ಕೆ ಐದನೇ ಮತ್ತು ಸೆಪ್ಟೆಂಬರ್ನಲ್ಲಿ ಆರನೇ ರೈಲು ಬರುತ್ತವೆ. ಇವುಗಳ ತಾಂತ್ರಿಕ ಕೆಲಸಗಳು ಅಂತಿಮ ಹಂತದಲ್ಲಿವೆ. ಜೊತೆಗೆ ಚೀನಾದಿಂದ ಐದು ಕಾರ್ ಬಾಡಿ ಶೆಲ್ಗಳು ಬರಲಿದ್ದು, ಅವುಗಳನ್ನು ಜೋಡಣೆ ಮಾಡಲಾಗುತ್ತದೆ.* ಆರ್.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದ 18.82 ಕಿಮೀ ಮೆಟ್ರೋ ಹಂತದ ತಪಾಸಣೆ ಪೂರ್ತಿಯಾಗಿದ್ದು, ಐದು ದಿನಗಳಲ್ಲಿ ವರದಿ ಸಿಗಲಿದೆ.* ಈ ಆಧಾರದಲ್ಲಿ ಕೆಲ ಬದಲಾವಣೆಗಳೊಂದಿಗೆ ಸಂಚಾರ ಆರಂಭ ಮಾಡಲಾಗುವುದು. ಪ್ರಾಥಮಿಕವಾಗಿ 20 ನಿಮಿಷಗಳ ಅವಧಿಯಲ್ಲಿ ಒಂದು ರೈಲು ಓಡಿಸಲು ಯೋಜನೆ ರೂಪಿಸಲಾಗಿದೆ.