* ಶ್ರೀಲಂಕಾ ಯುವ ಕ್ರಿಕೆಟಿಗ ಕಮಿಂದು ಮೆಂಡಿಸ್ 2024ರಲ್ಲಿ ಸ್ಥಿರ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಮೆಂಡಿಸ್ 2024ರಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ ಎಲ್ಲ 3 ಮಾದರಿ ಕ್ರಿಕೆಟ್ನಲ್ಲಿ 1,451 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಕೇವಲ 13 ಇನಿಂಗ್ಸ್ಗಳಲ್ಲಿ 3ನೇ ಜಂಟಿ ವೇಗದಲ್ಲಿ 1,000 ರನ್ ಪೂರೈಸುವ ಮೂಲಕ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದರು.* ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಿರುವ ಮೆಂಡಿಸ್ 9 ಪಂದ್ಯಗಳಲ್ಲಿ 74.92ರ ಸರಾಸರಿಯಲ್ಲಿ 5 ಶತಕ ಹಾಗೂ 3 ಅರ್ಧಶತಕಗಳ ಸಹಿತ 1,049 ರನ್ ಗಳಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ರನ್ ಗಳಿಸಿದ ಕೇವಲ ಆರನೇ ಆಟಗಾರನಾಗಿದ್ದಾರೆ.* ಗಾಲೆಯಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಮೆಂಡಿಸ್ ಅಮೋಘ ಪ್ರದರ್ಶನ ನೀಡಿದ್ದು, ಮೊದಲ ಇನಿಂಗ್ಸ್ನಲ್ಲಿ ತನ್ನ ಜೀವನ ಶ್ರೇಷ್ಠ ಸಾಧನೆ (182 ರನ್)ಮಾಡಿದ್ದು, ಶ್ರೀಲಂಕಾ ತಂಡವು 5 ವಿಕೆಟ್ಗಳ ನಷ್ಟಕ್ಕೆ 602 ರನ್ ಗಳಿಸಿದೆ.* ಮೆಂಡಿಸ್ ಅವರು ತವರು ಮೈದಾನದಿಂದ ಹೊರಗೂ ಅತ್ಯುತ್ತಮ ಕೊಡುಗೆ ನೀಡಿದ್ದು ಇಂಗ್ಲೆಂಡ್ನಲ್ಲಿ ನಡೆದಿದ್ದ ಸರಣಿಯಲ್ಲಿ ಶ್ರೀಲಂಕಾದ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ದಶಕದ ನಂತರ ಮೊದಲ ಬಾರಿ ಲಂಕಾ ತಂಡ ಟೆಸ್ಟ್ ಪಂದ್ಯ ಗೆಲ್ಲಲು ನೆರವಾಗಿದ್ದರು.* ದಕ್ಷಿಣ ಆಫ್ರಿಕಾದ ಉದಯೋನ್ಮುಖ ತಾರೆ ಅನ್ನೇರಿ ಡೆರ್ಕ್ಸೆನ್ (Annerie Dercksen) ಅವರು 2024 ರ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟಿಗರಾಗಿ ಕಿರೀಟವನ್ನು ಪಡೆದರು.* ICC ಪ್ರಶಸ್ತಿಗಳು 2024 :- ಕಮಿಂದು ಮೆಂಡಿಸ್ (ಶ್ರೀಲಂಕಾ) ಮತ್ತು ಅನ್ನೇರಿ ಡೆರ್ಕ್ಸೆನ್ (ದಕ್ಷಿಣ ಆಫ್ರಿಕಾ) ವರ್ಷದ ಉದಯೋನ್ಮುಖ ಕ್ರಿಕೆಟಿಗ ವಿಭಾಗದಲ್ಲಿ ಪ್ರಶಸ್ತಿ ಜಯಗಳಿಸಿದರು.- ನಮೀಬಿಯಾದ ಗೆರ್ಹಾರ್ಡ್ ಎರಾಸ್ಮಸ್ ಮತ್ತು ಯುಎಇ ನಾಯಕಿ ಇಶಾ ಓಜಾ ವರ್ಷದ ಸಹಾಯಕ ಕ್ರಿಕೆಟಿಗ ಪ್ರಶಸ್ತಿಗಳನ್ನು ಗೆದ್ದಿದ್ದಾರೆ- ರಿಚರ್ಡ್ ಇಲ್ಲಿಂಗ್ವರ್ತ್ ಸತತ ಮೂರನೇ ಬಾರಿಗೆ ICC ವರ್ಷದ ಅಂಪೈರ್ ಕಿರೀಟವನ್ನು ಪಡೆದರು.