* ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಲೆಕ್ಕ ಪರಿಶೋಧಕರಿಗೆ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಕುರಿತು ತರಬೇತಿ ನೀಡಲು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ICAI) ನಿರ್ಧರಿಸಿದೆ.* ಈಗಾಗಲೇ 12 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಿರುವ ಐಸಿಎಐ, ಇನ್ನೂ 15 ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿದೆ.* ದಿಲ್ಲಿಯಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಯೋಜಿಸಿದ್ದ ಹಣಕಾಸು ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಐಸಿಎಐ ಅಧ್ಯಕ್ಷ ಚರಣಜೋತ್ ಸಿಂಗ್ ನಂದಾ ಏರುತ್ತಿರುವ ಕೃತಕ ಬುದ್ಧಿಮತ್ತೆಯ ಉಪಯೋಗದ ಮಹತ್ವವನ್ನು ವಿಶ್ಲೇಷಿಸಿದರು.* ''ಲೆಕ್ಕಪರಿಶೋಧನೆಯಲ್ಲಿ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವುದೇ" ಈ ತರಬೇತಿಯ ಉದ್ದೇಶವಾಗಿದೆ. ಕೃತಕ ಬುದ್ಧಿಮತ್ತೆ ಉಪಯೋಗ ಸಂಬಂಧ ಸಮಿತಿಯನ್ನು ಸ್ಥಾಪಿಸಿರುವ ಐಸಿಎಐ, ಈಗಾಗಲೇ ಪರಿಣಾಮಕಾರಿ AI ತಂತ್ರವನ್ನು ಬಳಸುತ್ತಿದೆ.* ಅಭ್ಯರ್ಥಿಗಳಿಗೆ ಒಂದು ವರ್ಷದ ಎಐ ತರಬೇತಿ ನೀಡುವುದರ ಜೊತೆಗೆ ಈ ಸಂಬಂಧ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.