* ಭಾರತೀಯ ವಾಯುಪಡೆಗೆ ಶಕ್ತಿಯುತ ನೆರವಾಗಲಿರುವ ಮೂರು ಅತ್ಯಾಧುನಿಕ ISTAR (Intelligence, Surveillance, Target Acquisition and Reconnaissance) ವಿಮಾನಗಳ ಖರೀದಿಗೆ ರೂ.10,000 ಕೋಟಿ ಮೌಲ್ಯದ ಯೋಜನೆಯನ್ನು ರಕ್ಷಣಾ ಸಚಿವಾಲಯ ಜೂನ್ ನಾಲ್ಕನೇ ವಾರದಲ್ಲಿ ಸಭೆಯಲ್ಲಿ ಪರಿಶೀಲಿಸಲು ಉದ್ದೇಶಿಸಿದೆ.* ಈ ವಿಮಾನಗಳು ರಾಡಾರ್ ಕೇಂದ್ರಗಳು, ವಾಯು ರಕ್ಷಣಾ ಘಟಕಗಳು ಮತ್ತು ಇತರ ಶತ್ರು ನೆಲದ ಗುರಿಗಳ ಮೇಲೆ ನಿಖರ ದಾಳಿಗೆ ಸಹಕಾರ ನೀಡುವ ಶಕ್ತಿಯುಳ್ಳವು.* ವಿಮಾನಗಳಲ್ಲಿ ಸ್ಥಾಪಿಸಲಿರುವ ವ್ಯವಸ್ಥೆಗಳನ್ನು DRDOಯ ಸೆಂಟರ್ ಫಾರ್ ಏರ್ಬೋರ್ನ್ ಸಿಸ್ಟಮ್ಸ್ (CABS) ಈಗಾಗಲೇ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.* ಬೋಯಿಂಗ್ ಮತ್ತು ಬೊಂಬಾರ್ಡಿಯರ್ ಮುಂತಾದ ವಿದೇಶಿ ತಯಾರಕರಿಂದ ವಿಮಾನಗಳನ್ನು ತೆರೆದ ಟೆಂಡರ್ ಮೂಲಕ ಖರೀದಿಸಲಾಗುವುದು. ಆದರೆ ಇನ್ಸ್ಟಾಲ್ ಮಾಡಲಾದ ಎಲ್ಲಾ ತಂತ್ರಜ್ಞಾನ ಸ್ಥಳೀಯವಾಗಿರುತ್ತದೆ.* ISTAR ವಿಮಾನಗಳ ಒಳಗೊಂಡಿರುವ ವ್ಯವಸ್ಥೆಗಳು ಭಾರತವನ್ನು ಗುರಿ ನಿಖರತೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಗೆ ಸೇರಿಸುತ್ತವೆ. ಈ ತಂತ್ರಜ್ಞಾನ ಭಾರತಕ್ಕೆ ಹಗಲು-ರಾತ್ರಿ ಗುಪ್ತಚರ, ಗುರಿ ದೃಢೀಕರಣ ಮತ್ತು ಗುರಿ ಹೊಂದಿಸುವ ಸಾಮರ್ಥ್ಯವನ್ನು ನೀಡುತ್ತದೆ.