Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಹೂಡಿಕೆ ತಾಣವಾಗಿ ಆಂಧ್ರಪ್ರದೇಶ ನಂ.1: ಮಹಾರಾಷ್ಟ್ರ, ಗುಜರಾತ್ ಹಿಂದಿಕ್ಕಿ ಇತಿಹಾಸ ಬರೆದ ಚಂದ್ರಬಾಬು ನಾಯ್ಡು ಸರ್ಕಾರ!
6 ಜನವರಿ 2026
* ಭಾರತದ ಕೈಗಾರಿಕಾ ಭೂಪಟದಲ್ಲಿ ದಕ್ಷಿಣದ ರಾಜ್ಯವೊಂದು ದೈತ್ಯ ಹೆಜ್ಜೆ ಇಟ್ಟಿದೆ.
2025-26ನೇ
ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ
ಆಂಧ್ರಪ್ರದೇಶವು
ದೇಶದ ಅತ್ಯಂತ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ.
ಬ್ಯಾಂಕ್ ಆಫ್ ಬರೋಡಾ (BoB)
ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಸಾಂಪ್ರದಾಯಿಕ ಕೈಗಾರಿಕಾ ದೈತ್ಯರನ್ನು ಹಿಂದಿಕ್ಕಿ ಆಂಧ್ರಪ್ರದೇಶವು ಪ್ರಥಮ ಸ್ಥಾನ ಅಲಂಕರಿಸಿದೆ.
*
ಹೂಡಿಕೆ ಹಂಚಿಕೆ: ರಾಜ್ಯವಾರು ಅಂಕಿ-ಅಂಶಗಳು
ದೇಶದಾದ್ಯಂತ ಒಟ್ಟು
₹26.6 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳು
ಸಲ್ಲಿಕೆಯಾಗಿದ್ದು, ಅವುಗಳಲ್ಲಿ
ಆಂಧ್ರಪ್ರದೇಶವು 25.3% ಹೂಡಿಕೆ ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದೆ
. ಅದರ ಬಳಿಕ
ಒಡಿಶಾ 13.1% ಪಾಲು ಪಡೆದು ಎರಡನೇ ಸ್ಥಾನ
ದಲ್ಲಿದ್ದು,
ಮಹಾರಾಷ್ಟ್ರ 12.8% ಹೂಡಿಕೆ ಪಾಲಿನೊಂದಿಗೆ ಮೂರನೇ ಸ್ಥಾನ
ದಲ್ಲಿದೆ.
ಗಮನಾರ್ಹವೆಂದರೆ, ಈ ಮೂರು ರಾಜ್ಯಗಳೇ ದೇಶದ ಅರ್ಧದಷ್ಟು (
51.2%
) ಹೂಡಿಕೆಯನ್ನು ಸೆಳೆದಿವೆ. ಇತ್ತ ಕರ್ನಾಟಕ (2.1%) ಮತ್ತು ಉತ್ತರ ಪ್ರದೇಶ (2.7%) ಹೂಡಿಕೆ ಆಕರ್ಷಿಸುವಲ್ಲಿ ಈ ಬಾರಿ ಹಿಂದೆ ಬಿದ್ದಿರುವುದು ಗೋಚರಿಸುತ್ತದೆ.
*
ಆಂಧ್ರಪ್ರದೇಶದ ಯಶಸ್ಸಿನ ಗುಟ್ಟು — ‘ಸ್ಪೀಡ್ ಆಫ್ ಡೂಯಿಂಗ್ ಬಿಸಿನೆಸ್’
ಆಗಿದ್ದು,
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆಡಳಿತ
ಕೇವಲ
Ease of Doing Business
ಗೆ ಸೀಮಿತವಾಗದೆ,
ವೇಗವಾಗಿ ನಿರ್ಧಾರಗಳು ಮತ್ತು ಅನುಷ್ಠಾನ
ಎಂಬ ತತ್ವವನ್ನು ಅಳವಡಿಸಿಕೊಂಡಿದೆ. ಹೂಡಿಕೆದಾರರಿಗೆ ನೀಡುವ
ಸಬ್ಸಿಡಿ ಹಾಗೂ ಪ್ರೋತ್ಸಾಹಧನದಲ್ಲಿ ವಿಳಂಬ ತಪ್ಪಿಸಲು ‘ಎಸ್ಕ್ರೋ (Escrow) ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ’
ಜಾರಿಗೆ ತರಲಾಗಿದೆ. ಜೊತೆಗೆ,
‘ಸಿಂಗಲ್ ವಿಂಡೋ 2.0’ ವ್ಯವಸ್ಥೆಯ ಮೂಲಕ ಅಗತ್ಯ ಪರವಾನಗಿಗಳನ್ನು ಅತಿ ಕಡಿಮೆ ಸಮಯದಲ್ಲಿ ನೀಡಲಾಗುತ್ತಿದ್ದು
, ಆಡಳಿತಾತ್ಮಕ ವಿಳಂಬ (
Red Tapism
)ವನ್ನು ಬಹುತೇಕ ನಿವಾರಿಸಲಾಗಿದೆ. ಇದಕ್ಕು ಸೇರಿ,
ವಿಶಾಖಪಟ್ಟಣಂ–ಚೆನ್ನೈ ಕೈಗಾರಿಕಾ ಕಾರಿಡಾರ್ (VCIC)
ಹಾಗೂ
ಸುದೀರ್ಘ ಸಮುದ್ರ ತೀರ
ವು
ಹಸಿರು ಇಂಧನ ಮತ್ತು ಡೇಟಾ ಸೆಂಟರ್ ಹೂಡಿಕೆದಾರರಿಗೆ ದೊಡ್ಡ ಆಕರ್ಷಣೆಯಾಗಿ
ಪರಿಣಮಿಸಿದೆ.
*
ಬದಲಾಗುತ್ತಿರುವ ಕೈಗಾರಿಕಾ ಭೌಗೋಳಿಕತೆ: ಈ ವರದಿಯು ಭಾರತದ ಕೈಗಾರಿಕಾ ಕೇಂದ್ರವು ಪಶ್ಚಿಮದಿಂದ ಈಗ
ದಕ್ಷಿಣ ಮತ್ತು ಪೂರ್ವ ಭಾರತದ ಕಡೆಗೆ
ಸರಿಯುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಆಂಧ್ರದ ಬಂದರು ಆಧಾರಿತ ಅಭಿವೃದ್ಧಿ ಮಾದರಿಯು ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತಿದೆ.
* ಆಂಧ್ರಪ್ರದೇಶವು ಕೈಗಾರಿಕಾ ಸ್ನೇಹಿ ನೀತಿಗಳ ಮೂಲಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಇದು ನೆರೆಯ ರಾಜ್ಯಗಳಿಗೂ ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸಿದ್ದು, ಒಟ್ಟಾರೆಯಾಗಿ ಭಾರತದ ಜಿಡಿಪಿ (GDP) ಬೆಳವಣಿಗೆಗೆ ಪೂರಕವಾಗಿದೆ.
Take Quiz
Loading...