* ಕಾಜಿರಂಗ ಹುಲಿ ಮೀಸಲು ಪ್ರದೇಶ (ಅಸ್ಸಾಂ) ಇದೀಗ ವಿಶ್ವದ ಮೂರನೇ ಅತಿ ಹೆಚ್ಚು ಹುಲಿ ಸಾಂದ್ರತೆ ಹೊಂದಿರುವ ಪ್ರದೇಶವಾಗಿದೆ. ಪ್ರತಿ 100 ಚ.ಕಿ.ಮೀಗೆ 18.65 ಹುಲಿಗಳು, ಬಂಡೀಪುರ (19.83) ಮತ್ತು ಕಾರ್ಬೆಟ್ (19.56) ನಂತರದ ಸ್ಥಾನ.* ವಯಸ್ಕ ಹುಲಿಗಳ ಸಂಖ್ಯೆ 2022ರ 104 ರಿಂದ 2024ರಲ್ಲಿ 148ಕ್ಕೆ ಏರಿಕೆ – ಇದು 42% ಬೆಳವಣಿಗೆಯಾಗಿದೆ.* ಹೊಸ ಸೇರ್ಪಡೆ: ಬಿಸ್ವನಾಥ್ ವಿಭಾಗವನ್ನು ಮೊದಲ ಬಾರಿ ಸೇರ್ಪಡೆಗೊಳಿಸಿದ್ದು, ಇದೊಂದು ಪ್ರಮುಖ ಕಾರಣ. ಇನ್ನು ಪೂರ್ವ ಅಸ್ಸಾಂ ವಿಭಾಗದಲ್ಲಿ ಸಹ ಏರಿಕೆ ಕಂಡುಬಂದಿದೆ.* ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ: ಕ್ಯಾಮೆರಾ ಟ್ರಾಪ್ಗಳು, ಡ್ರೋನ್ಗಳು, ಇನ್ಫ್ರಾರೆಡ್ ಮೇಲ್ವಿಚಾರಣೆ ಮತ್ತು M-STrIPES ತಂತ್ರಜ್ಞಾನಗಳ ಮೂಲಕ ವೈಜ್ಞಾನಿಕ ಅಂಕಿಅಂಶ ಸಂಗ್ರಹ.* 200 ಚದರ ಕಿ.ಮೀ ಹೊಸ ಆವಾಸಸ್ಥಾನ ಸೇರ್ಪಡೆ – ಬುರ್ಹಾಚಪೋರಿ-ಲಾವೋಖೋವಾ ಅಭಯಾರಣ್ಯಗಳ ಭಾಗವಾಗಿ, ಹುಲಿಗಳ ಚಲನೆಗೆ ಹೆಚ್ಚು ಅವಕಾಶವಾಗಿದೆ.* 83 ಹೆಣ್ಣು, 55 ಗಂಡು, 10 ಅನಿರ್ಧಿಷ್ಟ ಹುಲಿಗಳನ್ನು ಗುರುತಿಸಿ ಲಿಂಗ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.* ಹುಲಿಗಳ ಬೆಳವಣಿಗೆ ಒಂದು ಸಮಗ್ರ ಪರಿಸರ ವ್ಯವಸ್ಥೆಯ ಯಶಸ್ಸಿಗೆ ಸಂಕೇತವಾಗಿ ಪರಿಸರದ ಆರೋಗ್ಯದ ಸೂಚನೆಯಾಗಿದೆ.* ಬಫರ್ ವಲಯಗಳ ನಿರ್ವಹಣೆ, ಮಾನವ-ವನ್ಯಜೀವಿ ಸಂಘರ್ಷ ನಿವಾರಣೆ, ಶಾಶ್ವತ ಹಣಕಾಸು ಹಾಗೂ ಸಮುದಾಯದ ತೊಡಗಿಸಿಕೊಳ್ಳುವಿಕೆ ಅಗತ್ಯ ಸವಾಲುಗಳಾಗಿವೆ.* ಕಾಜಿರಂಗದ ಯಶಸ್ಸು ಕೇವಲ ಹುಲಿಗಳ ಸಂಖ್ಯೆಯಲ್ಲಿ ಮಾತ್ರವಲ್ಲ; ಅದು ವಿಜ್ಞಾನ, ಸಮರ್ಪಣೆ ಮತ್ತು ನವೀನ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿದ ಪರಿಣಾಮವಾಗಿದೆ. ಇದು ಇತರೆ ಪ್ರದೇಶಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ.