Job Description: ➤ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿನ ಎಲ್ಲಾ 28 ರಾಜ್ಯಗಳು ಪ್ರಸ್ತುತ ತೀವ್ರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದು, ಭಾರೀ ವಿತ್ತೀಯ ಕೊರತೆಯ (Fiscal Deficit) ಸುಳಿಗೆ ಸಿಲುಕಿವೆ. ಭಾರತದ ಮಹಾಲೇಖಪಾಲರ (CAG) 'ರಾಜ್ಯಗಳ ಹಣಕಾಸು ಸ್ಥಿತಿಗತಿ 2024-25' ವರದಿಯು ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.ಭಾರತದ ಸಿಎಜಿ (CAG) ಕೆ. ಸಂಜಯ್ ಮೂರ್ತಿ ಅವರು ಬಿಡುಗಡೆ ಮಾಡಿರುವ ಈ ವರದಿಯು, ರಾಜ್ಯ ಸರ್ಕಾರಗಳ ಆರ್ಥಿಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ನೀತಿ ನಿರೂಪಕರು ಹಾಗೂ ಸಂಶೋಧಕರಿಗೆ ದಿಕ್ಸೂಚಿಯಾಗಲಿದೆ.➤ ಸಾಲದ ಸುಳಿಯಲ್ಲಿ ರಾಜ್ಯಗಳು: ವರದಿಯ ಪ್ರಕಾರ, ರಾಜ್ಯಗಳ ತೆರಿಗೆ ಮತ್ತು ತೆರಿಗೆಯೇತರ ಆದಾಯ ಸಂಗ್ರಹಣೆ ಉತ್ತಮಗೊಂಡಿದ್ದರೂ ಸಹ, ದಿನೆದಿನೇ ಹೆಚ್ಚುತ್ತಿರುವ ಖರ್ಚುಗಳು ರಾಜ್ಯಗಳ ಬಜೆಟ್ ಸಮತೋಲನವನ್ನು ಕಸಿದುಕೊಳ್ಳುತ್ತಿವೆ. ಒಟ್ಟು ಸಾಲದ ಹೊರೆ: 2025ರ ಮಾರ್ಚ್ 31ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲದ ಹೊರೆ ಬರೋಬ್ಬರಿ 90.51 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಒಟ್ಟು ಬಜೆಟ್ ವೆಚ್ಚ: 2024-25ರ ಆರ್ಥಿಕ ವರ್ಷದಲ್ಲಿ ಎಲ್ಲಾ ರಾಜ್ಯಗಳ ಒಟ್ಟು ಬಜೆಟ್ ವೆಚ್ಚ 51.20 ಲಕ್ಷ ಕೋಟಿ ರೂ. ಗಳಾಗಿದೆ. ದೈನಂದಿನ ಆಡಳಿತಾತ್ಮಕ ವೆಚ್ಚ: ಒಟ್ಟು ಬಜೆಟ್ ವೆಚ್ಚದಲ್ಲಿ ಸುಮಾರು ಶೇಕಡಾ 80ರಷ್ಟು ಪಾಲು ಕೇವಲ ದೈನಂದಿನ ಆಡಳಿತಾತ್ಮಕ ವೆಚ್ಚಗಳಿಗೆ (Revenue Expenditure) ಬಳಕೆಯಾಗುತ್ತಿದೆ. ಅನಿವಾರ್ಯ ವೆಚ್ಚಗಳು: ರಾಜ್ಯಗಳ ಕೈಯಲ್ಲಿರುವ ಬಹುಪಾಲು ಹಣವು ನೌಕರರ ಸಂಬಳ, ನಿವೃತ್ತಿ ವೇತನ (Pension) ಮತ್ತು ಹಳೆ ಸಾಲಗಳ ಬಡ್ಡಿ ಪಾವತಿಯಂತಹ (Interest Payments) ಅನಿವಾರ್ಯ ವೆಚ್ಚಗಳಿಗೇ ಸೀಮಿತವಾಗಿದೆ. ಸಬ್ಸಿಡಿ ಮತ್ತು ಉಚಿತ ಯೋಜನೆಗಳು: ಇವುಗಳ ಜೊತೆಗೆ ಸಬ್ಸಿಡಿಗಳು ಮತ್ತು ವಿವಿಧ ಜನಪ್ರಿಯ ಯೋಜನೆಗಳ ಅನುದಾನಗಳಿಗೆ ಶೇ. 61ಕ್ಕಿಂತ ಅಧಿಕ ಖರ್ಚಾಗುತ್ತಿದೆ. ➤ ಆರ್‌ಬಿಐ ತುರ್ತು ಸಾಲದ ಮೊರೆ ಹೋದ ರಾಜ್ಯಗಳು: ರಾಜ್ಯಗಳ ಆಂತರಿಕ ನಗದು ಹರಿವಿನ ಬಿಕ್ಕಟ್ಟು (Cash Flow Crisis) ಎಷ್ಟರಮಟ್ಟಿಗೆ ತಲುಪಿದೆ ಎಂದರೆ, ಹಲವು ರಾಜ್ಯಗಳು ದಿನನಿತ್ಯದ ನಗದು ನಿರ್ವಹಣೆ ಮತ್ತು ಸಂಬಳ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ತುರ್ತು ಸಾಲದ ವ್ಯವಸ್ಥೆಯಾದ ವೇಸ್ ಅಂಡ್ ಮೀನ್ಸ್ ಅಡ್ವಾನ್ಸಸ್ (WMA - Ways and Means Advances) ಮತ್ತು ಓವರ್‌ಡ್ರಾಫ್ಟ್ (Overdraft) ಸೌಲಭ್ಯದ ಮೊರೆ ಹೋಗುತ್ತಿರುವುದನ್ನು ಸಿಎಜಿ ವರದಿ ಎತ್ತಿ ತೋರಿಸಿದೆ.➤ ರಾಜ್ಯಗಳ ವಿತ್ತೀಯ ಸ್ಥಿತಿಗತಿಯ ಒಂದು ನೋಟ (2024-25): ಎಲ್ಲಾ 28 ರಾಜ್ಯಗಳ ಒಟ್ಟು ಸಾಲ (ಮಾರ್ಚ್ 2025 ರಂತೆ): ₹90.51 ಲಕ್ಷ ಕೋಟಿ ಒಟ್ಟು ವಾರ್ಷಿಕ ಬಜೆಟ್ ವೆಚ್ಚ (FY25): ₹51.20 ಲಕ್ಷ ಕೋಟಿ ದೈನಂದಿನ/ಆಡಳಿತಾತ್ಮಕ ವೆಚ್ಚದ ಪಾಲು: ಶೇಕಡಾ 80% ಸಬ್ಸಿಡಿ ಹಾಗೂ ಯೋಜನೆಗಳ ವೆಚ್ಚ: ಶೇಕಡಾ 61% ಕ್ಕಿಂತ ಹೆಚ್ಚು ವಿತ್ತೀಯ ಕೊರತೆಯ ಸ್ಥಿತಿ: ಎಲ್ಲಾ 28 ರಾಜ್ಯಗಳೂ ಕೊರತೆ ದಾಖಲಿಸಿವೆ ➤ ಅಭಿವೃದ್ಧಿ ಕೆಲಸಗಳಿಗೆ ಹಣ ಎಲ್ಲಿದೆ? ಬಜೆಟ್‌ನ ಶೇ. 80ರಷ್ಟು ಭಾಗ ಅನುತ್ಪಾದಕ ಅಥವಾ ದೈನಂದಿನ ವೆಚ್ಚಗಳಿಗೆ ಬಳಕೆಯಾಗುತ್ತಿರುವುದರಿಂದ, ಮೂಲಸೌಕರ್ಯ ಅಭಿವೃದ್ಧಿ, ರಸ್ತೆ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯದಂತಹ ಆಸ್ತಿ ಸೃಜನೆಗೆ (Capital Expenditure) ರಾಜ್ಯಗಳ ಬಳಿ ಹಣದ ಕೊರತೆ ಎದುರಾಗಿದೆ. ಇದು ದೀರ್ಘಾವಧಿಯಲ್ಲಿ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯ (GDP Growth) ವೇಗವನ್ನು ಕುಂಠಿತಗೊಳಿಸುವ ಸಾಧ್ಯತೆ ಇದೆ. ಮೇ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ