* ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಎಯರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ಏಷ್ಯಾ-ಪೆಸಿಫಿಕ್ ಮತ್ತು ಮಧ್ಯ ಪೂರ್ವದ "ಗ್ರೀನ್ ಏರ್ಪೋರ್ಟ್ಸ್ ರೆಕಗ್ನಿಷನ್ 2025"(Green Airports Recognition) ಪ್ರಶಸ್ತಿಯಲ್ಲಿ ಅತಿಹೆಚ್ಚು ಗೌರವವಾದ ಪ್ಲಾಟಿನಂ ಮಾನ್ಯತೆ ಲಭಿಸಿದೆ.* ಪ್ರತಿವರ್ಷ ಆರು ಮಿಲಿಯನ್ ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ವಿಮಾನ ನಿಲ್ದಾಣಗಳ ನಡುವೆ "ಸುಸ್ಥಿರ ಇಂಧನ ಉಪಯೋಗ" ಶ್ರೇಣಿಯಲ್ಲಿ ಈ ಗೌರವ ಲಭಿಸಿದೆ.* ಏಪ್ರಿಲ್ 16 ರಂದು ನವದೆಹಲಿಯಲ್ಲಿ ನಡೆದ ACI ಪ್ರಾದೇಶಿಕ ಸಭೆಯಲ್ಲಿ AAI ತಾಂತ್ರಿಕ ನಿರ್ದೇಶಕ ರಾಜೇಶ್ ನಿಲಕಂಠ ಶಿಂಧೆ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.* ಈ ಗೌರವವು ಡಿಸೆಂಬರ್ 2022ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ 8 ಮೆಗಾವಾಟ್ ಸೌರ ವಿದ್ಯುತ್ ಘಟಕದ ಸಾಧನೆಗೆ ನೀಡಲಾಗಿದೆ. * ಇದು ಭಾರತದಲ್ಲಿ ಮೊದಲ ಘಟಕವಾಗಿದ್ದು, ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಿಗೆ ಶುದ್ಧ ವಿದ್ಯುತ್ ಪೂರೈಕೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇತರ ಟರ್ಮಿನಲ್ಗಳಿಗೂ ವಿಸ್ತರಣೆ ಯೋಜನೆ ಇದೆ.* ಈ ಘಟಕವು ವರ್ಷಕ್ಕೆ 11 ಮಿಲಿಯನ್ ಯೂನಿಟ್ಗಳಷ್ಟು ಶುದ್ಧ ವಿದ್ಯುತ್ ಉತ್ಪಾದಿಸಬಹುದಾಗಿದ್ದು, ಸಂಪೂರ್ಣ ಅವಧಿಯಲ್ಲಿ 2.15 ಲಕ್ಷ ಟನ್ ಕಾರ್ಬನ್ ಉತ್ಸರ್ಜನೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.* ಈ ಯೋಜನೆ AAIಯ ಹಸಿರು ಮತ್ತು ಇಂಧನದಕ್ಷ ವಿಮಾನ ನಿಲ್ದಾಣಗಳ ಕನಸಿಗೆ ಮಹತ್ವದ ಹೆಜ್ಜೆಯಾಗಿದ್ದು, ಶೂನ್ಯ ಕಾರ್ಬನ್ ಉತ್ಸರ್ಜನೆ ಸಾಧಿಸುವ ಭಾರತದ ದೃಢ ನಿಟ್ಟಿಗೆ ಸ್ಪಷ್ಟ ಚಿಹ್ನೆಯಾಗಿದೆ.