* ಕರ್ನಾಟಕ 27.14 ಲಕ್ಷ ಹೆಕ್ಟೇರ್ ತೋಟಗಾರಿಕೆ ವಿಸ್ತೀರ್ಣ ಹೊಂದಿದ್ದು, ದೇಶದ ತೋಟಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ಲಾಂಟೇಷನ್ ಬೆಳೆಗಳಲ್ಲಿ ಮತ್ತು ಉತ್ಪಾದನೆಯಲ್ಲಿ ಸಹ ಮುಂದಿದೆ.* 28 ಲಕ್ಷ ರೈತರು ತೋಟಗಾರಿಕೆಯಲ್ಲಿ ನಿರತರಾಗಿದ್ದು, ರಾಜ್ಯದ ತೋಟಗಾರಿಕಾ ಉತ್ಪಾದನೆ 223.18 ಲಕ್ಷ ಮೆಟ್ರಿಕ್ ಟನ್, ಮೌಲ್ಯ ರೂ. 75,142 ಕೋಟಿ ಆಗಿದೆ.* ವಾಣಿಜ್ಯ ಪುಷ್ಪಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ತೋಟಗಾರಿಕೆ ಜಿಡಿಪಿಗೆ ಶೇ. 3.35 ಕೊಡುಗೆ ನೀಡುತ್ತಿದ್ದು, ತಲಾ ಆದಾಯ ರೂ. 2 ಲಕ್ಷ ಆಗಿರುತ್ತದೆ.* ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ವಿಸ್ತರಣೆ, ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆ, ಮತ್ತು ಸಂಶೋಧನೆ ಆಧಾರಿತ ಪರಿಹಾರಗಳಿಗೆ 3,041 ಕೋಟಿ ರೂ. ವಿನಿಯೋಗಿಸಲಾಗಿದೆ.* ಒಣಭೂಮಿ ಪ್ರದೇಶಗಳಿಗನುಗುಣವಾಗಿ ನೀರಿನ ಮಿತ ಬಳಕೆಗಾಗಿ ಶೇ. 90 ರಷ್ಟು ಸಹಾಯಧನದೊಂದಿಗೆ 81,462 ರೈತರಿಗೆ ಹನಿ ನೀರಾವರಿ ಅಳವಡಿಸಲಾಗಿದೆ. ಇದರಿಂದ 78,938 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ.* 1976 ಕೃಷಿಹೊಂಡಗಳಿಗೆ 32 ಕೋಟಿ ರೂ. ನೆರವು ನೀಡಲಾಗಿದೆ. ಈ ಮೂಲಕ ಮಳೆ ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟದ ಹೆಚ್ಚಳ ಮತ್ತು ನಿರಂತರ ಕೃಷಿ ಚಟುವಟಿಕೆ ಸಾಧ್ಯವಾಗಿದೆ.* ಪಾಲಿಹೌಸ್, ನೆರಳು ಪರದೆ, ಭೂ ಹೊದಿಕೆ ಮುಂತಾದ ಸಂರಕ್ಷಿತ ಕೃಷಿಗೆ 3151 ರೈತರಿಗೆ ನೆರವು ನೀಡಲಾಗಿದೆ. ತೋಟಗಾರಿಕೆಗೆ 19,863 ಯಂತ್ರೋಪಕರಣಗಳನ್ನು ಸಹಾಯಧನದ ಮೂಲಕ ಒದಗಿಸಲಾಗಿದೆ.* ಮಾವು, ದ್ರಾಕ್ಷಿ, ಸಾಂಬಾರು ಬೆಳೆಗಳಿಗೆ ನಿಗಮಗಳು ಸ್ಥಾಪನೆಯಾಗಿದ್ದು, ಶೇಖರಣಾ ಘಟಕಗಳು ಮತ್ತು ರಫ್ತು ಕಾರ್ಯಕ್ರಮಗಳು ನಡೆಸಲಾಗಿದೆ. ಹಾಪ್ ಕಾಮ್ಸ್ಗೆ 15 ಕೋಟಿ ರೂ. ಬಂಡವಾಳ ನೀಡಲಾಗಿದೆ.* ಮೈಸೂರಿನಲ್ಲಿ ಲಿಂಗಾಂಬುಧಿ ತೋಟ ಸ್ಥಾಪನೆಯಾಗಿದೆ. ಮೈಸೂರು ಮಲ್ಲಿಗೆ, ನಂಜನಗೂಡು ಬಾಳೆ ಮತ್ತು ವೀಳ್ಯದೆಲೆಗಳ ಸಂರಕ್ಷಣೆಗೆ 14 ಹೆಕ್ಟೇರ್ ಪ್ರಾತ್ಯಕ್ಷಿಕೆ ಸ್ಥಳ, 175 ರೈತರಿಗೆ ತರಬೇತಿ ನೀಡಲಾಗಿದೆ.* ಸಂಪೂರ್ಣ ತೋಟಗಾರಿಕಾ ವಲಯದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ತಂತ್ರಜ್ಞಾನ ಮತ್ತು ಸಂಶೋಧನೆಯ ನೆರವಿನಿಂದ ರೈತರ ಜೀವನ ಮಟ್ಟವನ್ನು ಸುಧಾರಿಸಲು ಮುಂದಾಗಿದೆ.