* ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆ ದಾಖಲೆ ಬರೆದಿದ್ದು, ಆ.18ರಂದು 143 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಇದರಿಂದ ಗ್ರಿಡ್ಗೆ ಶೇ.80ರಷ್ಟು ಹಸಿರು ಇಂಧನ ಪೂರೈಕೆ ನಡೆದಿದೆ.* ಪವನ ವಿದ್ಯುತ್ ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿ, ಪ್ರತಿದಿನ ಸರಾಸರಿ 54 ಮಿಲಿಯನ್ ಯೂನಿಟ್ ಉತ್ಪಾದನೆಯಾಗುತ್ತಿದೆ. ಇತ್ತೀಚೆಗೆ 65.80 ಮಿಲಿಯನ್ ಯೂನಿಟ್ಗಳಷ್ಟು ಉತ್ಪಾದನೆ ದಾಖಲೆಯಾಗಿದೆ.* ಇದರಿಂದ ಉಷ್ಣ ಮತ್ತು ಜಲ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಿದ್ದು, ರಾಜ್ಯದ ಒಟ್ಟಾರೆ ಉತ್ಪಾದನೆಯಲ್ಲಿ ಉಷ್ಣ ವಿದ್ಯುತ್ ಪಾಲು ಕೇವಲ ಶೇ.15-25ರಷ್ಟಿದೆ.* ಭಾರೀ ಮಳೆಯಿಂದಾಗಿ ವಿದ್ಯುತ್ ಬಳಕೆ ಇಳಿಮುಖವಾಗಿ, ಪ್ರಸ್ತುತ ಬಳಕೆ 179.03 ಮಿಲಿಯನ್ ಯೂನಿಟ್ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗಿಂತ 21 ಮಿಲಿಯನ್ ಯೂನಿಟ್ ಕಡಿಮೆ.* ಪವನ-ಸೌರ ಉತ್ಪಾದನೆ ಹೆಚ್ಚಾಗಿ, ಬೇಡಿಕೆ ಇಳಿದಿರುವುದರಿಂದ ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ ವಿದ್ಯುತ್ ಖರೀದಿ ಪ್ರಮಾಣ ಕುಸಿದಿದೆ. ಇದರಿಂದ ರಾಜ್ಯ ಸರ್ಕಾರದವೆಚ್ಚವೂ ಕಡಿಮೆಯಾಗಿದೆ.