Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
HSBC ಪ್ರೈವೇಟ್ ಬ್ಯಾಂಕ್ನ ನೂತನ ಸಿಇಒ ಆಗಿ 'ಐಡಾ ಲಿಯು' ಅಧಿಕಾರ ಸ್ವೀಕಾರ!
8 ಜನವರಿ 2026
*ವಿಶ್ವದ ಬೃಹತ್ ಬ್ಯಾಂಕಿಂಗ್ ಸಮೂಹಗಳಲ್ಲಿ ಒಂದಾದ
HSBC Private Bank
, ತನ್ನ ಜಾಗತಿಕ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಬಲಪಡಿಸಲು ಪ್ರಮುಖ ನಾಯಕತ್ವ ಬದಲಾವಣೆಯನ್ನು ಘೋಷಿಸಿದೆ. ಜನವರಿ 05, 2026 ರಿಂದ ಜಾರಿಗೆ ಬರುವಂತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬ್ಯಾಂಕಿಂಗ್ ನಾಯಕಿ
ಐಡಾ ಲಿಯು (Ida Liu)
ಅವರನ್ನು ಬ್ಯಾಂಕ್ನ ಹೊಸ
ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO)
ಆಗಿ ನೇಮಿಸಲಾಗಿದೆ.
ಇವರು ಡಿಸೆಂಬರ್ 2024 ರಿಂದ ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಗೇಬ್ರಿಯಲ್ ಕ್ಯಾಸ್ಟೆಲ್ಲೋ (Gabriel Castello) ಅವರ ಉತ್ತರಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
*
ಐಡಾ ಲಿಯು
ಅವರು
ಜಾಗತಿಕ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣಾ (Wealth Management) ಕ್ಷೇತ್ರದಲ್ಲಿ 25 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ದಕ್ಷ ನಾಯಕಿ
ಆಗಿದ್ದಾರೆ. ಇವರು ಈ ಹಿಂದೆ
ಸಿಟಿ ಪ್ರೈವೇಟ್ ಬ್ಯಾಂಕ್ (Citi Private Bank) ನ ಜಾಗತಿಕ ಮುಖ್ಯಸ್ಥರಾಗಿ (Global Head)
ಕಾರ್ಯನಿರ್ವಹಿಸಿದ್ದು,
ಉತ್ತರ ಅಮೆರಿಕಾ ಮತ್ತು ನ್ಯೂಯಾರ್ಕ್ ಪ್ರದೇಶಗಳ ಮುಖ್ಯಸ್ಥೆ
ಆಗಿಯೂ ಹಾಗೂ
‘ಏಷ್ಯನ್ ಕ್ಲೈಂಟ್ಸ್ ಗ್ರೂಪ್’ ನಾಯಕಿಯಾಗಿ
ಅಂತಾರಾಷ್ಟ್ರೀಯ ಮಟ್ಟದ
ವಿಶಾಲ ಗ್ರಾಹಕ ಪೋರ್ಟ್ಫೋಲಿಯೊಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ
. ವಿಶೇಷವಾಗಿ,
ಅಲ್ಟ್ರಾ-ಹೈ-ನೆಟ್-ವರ್ಥ (UHNW) ಗ್ರಾಹಕರಿಗೆ ಸಲಹಾ ಸೇವೆಗಳು, ಹೂಡಿಕೆ ಯೋಜನೆ ಮತ್ತು ಲಿಕ್ವಿಡಿಟಿ ನಿರ್ವಹಣೆ
ಕ್ಷೇತ್ರದಲ್ಲಿ ಇವರು ಪಡೆದಿರುವ ಪರಿಣತಿ ಅವರಿಗೆ ಜಾಗತಿಕ ಹಣಕಾಸು ವಲಯದಲ್ಲಿ ವಿಶಿಷ್ಟ ಸ್ಥಾನವನ್ನು ತಂದಿದೆ.
*
HSBC ಪ್ರೈವೇಟ್ ಬ್ಯಾಂಕ್
ಅನ್ನು 1999ರಲ್ಲಿ
ರಿಪಬ್ಲಿಕ್ ನ್ಯೂಯಾರ್ಕ್ ಕಾರ್ಪೊರೇಷನ್ ಮತ್ತು ಸಫ್ರಾ ರಿಪಬ್ಲಿಕ್ ಹೋಲ್ಡಿಂಗ್ಸ್
ಸ್ವಾಧೀನಪಡಿಸಿ ಸ್ಥಾಪಿಸಲಾಯಿತು. ಇದರ
ಪ್ರಧಾನ ಕಚೇರಿ ಜೆನೀವಾ, ಸ್ವಿಟ್ಜರ್ಲ್ಯಾಂಡ್
ನಲ್ಲಿ ಇದೆ. ಬ್ಯಾಂಕ್ ಮುಖ್ಯವಾಗಿ
ಹೈ-ನೆಟ್-ವೆರ್ಥ (HNW) ಮತ್ತು ಅಲ್ಟ್ರಾ-ಹೈ-ನೆಟ್-ವೆರ್ಥ (UHNW) ಗ್ರಾಹಕರಿಗೆ ಹೂಡಿಕೆ ಸಲಹೆ, ಸಂಪತ್ತು ನಿರ್ವಹಣೆ ಮತ್ತು ಯೋಜನಾ ಸೇವೆಗಳನ್ನು
ಒದಗಿಸುತ್ತದೆ. ಇದು
HSBC Holdings plc
ಸಂಸ್ಥೆಯ ಅಂಗವಾಗಿದ್ದು, ಇದರ ಪ್ರಧಾನ ಕಚೇರಿ
ಲಂಡನ್
ನಲ್ಲಿ ಇದೆ ಮತ್ತು ಪ್ರಸ್ತುತ
57ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕ ಕಾರ್ಯಾಚರಣೆ
ನಡೆಸುತ್ತಿದೆ.
Take Quiz
Loading...