* ಭಾರತದಲ್ಲಿ ರೈಲು ಕ್ಷೇತ್ರದಲ್ಲಿ ವಂದೇ ಭಾರತ್, ಬುಲೆಟ್ ಟ್ರೇನ್, ಮೆಟ್ರೋ ರೈಲುಗಳ ನಂತರ ಈಗ ಹೈಡ್ರೋಜನ್ ರೈಲುಗಳ ಕಾಲ ಆರಂಭವಾಗಿದೆ. ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ಸೇವೆ ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಆರಂಭವಾಗಲಿದೆ. ಚೆನ್ನೈನ ಐಸಿಎಫ್ನಲ್ಲಿ ಮೊದಲ ಕೋಚ್ ಯಶಸ್ವಿ ಪರೀಕ್ಷೆ ಪೂರೈಸಿದೆ.* ಹೈಡ್ರೋಜನ್ ರೈಲು ಜಲಜನಕವನ್ನು ಇಂಧನ ಕೋಶದ ಮೂಲಕ ವಿದ್ಯುತ್ ಆಗಿ ಪರಿವರ್ತಿಸಿ ಚಲಿಸುತ್ತದೆ. ಉಪ ಉತ್ಪನ್ನವಾಗಿ ಕೇವಲ ನೀರಿನ ಆವಿ ಮತ್ತು ಶಾಖ ಹೊರ ಬೀಳುತ್ತದೆ. ಇದು ಪರಿಸರ ಸ್ನೇಹಿ ರೈಲು ಸಾರಿಗೆ ತಂತ್ರಜ್ಞಾನ.* ಜರ್ಮನಿಯ ಸಹಕಾರದಿಂದ "ಹೈಡ್ರೋಜನ್ ಹೆರಿಟೇಜ್ ಇನಿಷಿಯೇಟಿವ್" ಅಡಿಯಲ್ಲಿ ಭಾರತದಲ್ಲಿ 15 ರೈಲುಗಳನ್ನು ನಿರ್ಮಿಸಲಾಗುತ್ತಿದೆ. ಒಂದು ಬೋಗಿ ತಯಾರಿಸಲು ಸುಮಾರು ₹10 ಕೋಟಿ, ಹಳಿಗಳ ಬದಲಾವಣೆಗೆ ₹75 ಕೋಟಿ ವೆಚ್ಚವಾಗಲಿದೆ.* ಇಂಧನ ಕೋಶ ಜಲಜನಕ–ಆಮ್ಲಜನಕ ಕ್ರಿಯೆಯಿಂದ ವಿದ್ಯುತ್ ಉತ್ಪಾದಿಸಿ ಮೋಟಾರ್ಗಳನ್ನು ಚಲಿಸುತ್ತದೆ. ಹೆಚ್ಚುವರಿ ಶಕ್ತಿಯನ್ನು ಬ್ಯಾಟರಿ ಅಥವಾ ಸೂಪರ್ಕೆಪಾಸಿಟರ್ಗಳಲ್ಲಿ ಸಂಗ್ರಹಿಸಿ ವೇಗ ಹೆಚ್ಚಿಸುವಾಗ ಅಥವಾ ಏರಿದ ಹಾದಿಗಳಲ್ಲಿ ಬಳಸಲಾಗುತ್ತದೆ.* ಮೊದಲ ಹೈಡ್ರೋಜನ್ ರೈಲು 2018ರಲ್ಲಿ ಜರ್ಮನಿಯಲ್ಲಿ ಓಡಿಸಲಾಯಿತು. ನಂತರ ಸ್ವೀಡನ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಭಾರತವು ಹೈಡ್ರೋಜನ್ ರೈಲು ಅಭಿವೃದ್ಧಿಪಡಿಸಿದ ವಿಶ್ವದ ಐದನೇ ರಾಷ್ಟ್ರವಾಗಿದೆ.* ಹೈಡ್ರೋಜನ್ ಉತ್ಪಾದನೆ ಮತ್ತು ಸಂಗ್ರಹಣೆ ದೊಡ್ಡ ಸವಾಲು. ಪ್ರಸ್ತುತ ಹೆಚ್ಚಿನ ಹೈಡ್ರೋಜನ್ ನೈಸರ್ಗಿಕ ಅನಿಲದಿಂದ ತಯಾರಿಸಲಾಗುತ್ತಿದೆ, ಇದು ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತದೆ.* ಎಲೆಕ್ಟ್ರೋಲಿಸಿಸ್ ಮೂಲಕ ನವೀಕರಿಸಬಹುದಾದ ಹಸಿರು ಹೈಡ್ರೋಜನ್ ಉತ್ಪಾದನೆ ಹೆಚ್ಚು ಪರಿಸರ ಸ್ನೇಹಿಯಾಗಿರುತ್ತದೆ. ಸಂಗ್ರಹಣೆಗೆ ಹೆಚ್ಚಿನ ಒತ್ತಡ ಮತ್ತು ತಾಪಮಾನ ನಿಯಂತ್ರಣ ಅಗತ್ಯವಿದ್ದು, ವೆಚ್ಚ ಹೆಚ್ಚಿಸುತ್ತದೆ.* ಹೈಡ್ರೋಜನ್ ರೈಲುಗಳು ಪ್ರಯಾಣಿಕರು ಹಾಗೂ ಸರಕು ಸಾಗಣೆಗೆ ಪರ್ಯಾಯವಾಗಿ ಬೆಳೆಯುತ್ತಿವೆ. ಇವು ಪರಿಸರ ಸ್ನೇಹಿ, ಇಂಧನ ದಕ್ಷ ಹಾಗೂ ಡೀಸೆಲ್ ರೈಲುಗಳಿಗೆ ಉತ್ತಮ ಪರ್ಯಾಯವಾಗಿದೆ. ಮುಂದಿನ ವರ್ಷಗಳಲ್ಲಿ ಇವು ರೈಲು ಸಾರಿಗೆಯ ಮುಖ್ಯ ತಂತ್ರಜ್ಞಾನವಾಗಿ ಪರಿಣಮಿಸಲಿದೆ.