* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 13, 2025 ರಂದು ಮೂರು ಪ್ರಮುಖ ಪ್ರದೇಶಗಳಿಗೆ ಹೊಸ ರಾಜ್ಯಪಾಲರ ನೇಮಕಾತಿ ಪ್ರಕಟಿಸಿದ್ದಾರೆ. ಈ ಹೊಸ ನೇಮಕಾತಿಗಳು ಆಡಳಿತಾತ್ಮಕ ಸುಧಾರಣೆ ಹಾಗೂ ರಾಜ್ಯದ ಅಭಿವೃದ್ಧಿಯ ಗುರಿಯನ್ನು ಮುಂದಿಟ್ಟುಕೊಂಡೇ ಕೈಗೊಳ್ಳಲಾಗಿದೆ.* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಡಾಖ್, ಹರಿಯಾಣ ಮತ್ತು ಗೋವಾ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕಗೊಳಿಸಿದ್ದಾರೆ.* ಲಡಾಖ್: ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ನಿವೃತ್ತ ಬ್ರಿಗೇಡಿಯರ್ ಬಿ.ಡಿ. ಮಿಶ್ರಾ ಅವರು ರಾಜೀನಾಮೆ ನೀಡಿದ್ದು, ಅದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಅವರ ಸ್ಥಾನಕ್ಕೆ ಕವಿಂದರ್ ಗುಪ್ತಾ ಅವರನ್ನು ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.* ಹರಿಯಾಣ: ಹರಿಯಾಣದ ರಾಜ್ಯಪಾಲರಾಗಿ ಪ್ರೊ. ಅಶೀಮ್ ಕುಮಾರ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ.* ಗೋವಾ: ಗೋವಾ ರಾಜ್ಯಪಾಲರಾಗಿ ಪುಸಪತಿ ಅಶೋಕ್ ಗಜಪತಿ ರಾಜು ಅವರು ನೇಮಕಗೊಂಡಿದ್ದಾರೆ.* ಈ ಎಲ್ಲಾ ಅಧಿಕಾರಿಗಳು ತಮ್ಮ ಕಾರ್ಯಭಾರ ವಹಿಸಿಕೊಳ್ಳುವ ದಿನಾಂಕದಿಂದ ಅಧಿಕಾರ ಅವಧಿ ಆರಂಭವಾಗುತ್ತದೆ.