* ದೇಶದಲ್ಲಿ ಕೊರೊನಾ ಸೋಂಕು ಹತಾತ್ವಾಗಿ ಹೆಚ್ಚಾಗುತ್ತಿದೆ. ಇದೀಗ ಎರಡು ಹೊಸ ಕೊರೊನಾ ರೂಪಾಂತರಗಳ ಸೋಂಕಿತರು ಪತ್ತೆಯಾಗಿದ್ದಾರೆ.* NB-1.8.1 ಮತ್ತು LF-7 ಎಂಬ ಈ ಹೊಸ ರೂಪಾಂತರಗಳು ಓಮಿಕ್ರಾನ್ನ ಉಪ-ರೂಪಾಂತರಗಳಾಗಿದ್ದು, ತಮಿಳುನಾಡು ಹಾಗೂ ಗುಜರಾತ್ನಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.* ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಾಲ್ಕೈದು ವರ್ಷಗಳ ಹಿಂದಿನ ಕೊರೊನಾ ಭೀಷಣ ಸಮಯ ನೆನಪಾದರೂ ಕಂಗಳಿಗೆ ಭಯ ಕಾಡುತ್ತದೆ.* ಇಂತಹ ಸಂದರ್ಭದಲ್ಲೇ ಮತ್ತೆ ಕೊರೊನಾ ವೈರಸ್ ವ್ಯಾಪಿಸುತ್ತಿರುವುದು ಚಿಂತೆ ಹುಟ್ಟುಹಾಕುತ್ತಿದೆ. ವಿಶ್ವದ ಜೊತೆಗೆ ಭಾರತದಲ್ಲಿಯೂ ಸೋಂಕು ಹರಡುವ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.* ತಜ್ಞರ ಪ್ರಕಾರ, NB-1.8.1 ಮತ್ತು LF-7 ಎಂಬ ಎರಡು ಹೊಸ ರೂಪಾಂತರಗಳ ಸೋಂಕಿತರು ತಮಿಳುನಾಡು ಮತ್ತು ಗುಜರಾತ್ನಲ್ಲಿ ಪತ್ತೆಯಾಗಿದ್ದು, ದೇಶದ ಆರೋಗ್ಯ ವ್ಯವಸ್ಥೆಗೆ ಹೊಸ ಸವಾಲಾಗಿ ಪರಿಣಮಿಸುತ್ತಿದೆ.