Job Description: * ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಟಿ.ಪಿ.ವಿಜಯ್ ರವರು ನೇಮಕಗೊಂಡಿದ್ದಾರೆ. ಪ್ರೊ.ಸ.ಚಿ, ರಮೇಶ ಅವರ ಅಧಿಕಾರದ ಅವಧಿ ಫೆ. 21ರಂದು ಕೊನೆಗೊಳ್ಳಲಿದ್ದು, ಇವರ ಅಧಿಕಾರದ ಅವಧಿಯ ಕೊನೆಯ ದಿನದಂದೇ ಜಾರಿ ಬರುವಂತೆ ವಿಜಯ್ ಅವರನ್ನು ಕುಲಪತಿಯಾಗಿ ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಆದೇಶ ಹೊರಡಿಸಿದ್ದಾರೆ.* ಪೂರ್ಣಾವಧಿಗೆ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಂಪಿ ಕನ್ನಡ ವಿ.ವಿ. 1991ರ ಅಧಿನಿಯಮ್ ಸೆಕ್ಷನ್ 13(4)ರ ಪ್ರಕಾರ, ಮುಂದಿನ ಆದೇಶದ ವರೆಗೆ ಟಿ.ಪಿ. ವಿಜಯ್ ಅವರನ್ನು ಕುಲಪತಿ ಹುದ್ದೆಗೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.