* ನೀತಿ ಆಯೋಗದ ಸೂಚ್ಯಂಕದಲ್ಲಿ ರಾಜ್ಯಗಳ ಹಣಕಾಸಿನ ಸದೃಢತೆಯಲ್ಲಿ ಒಡಿಶಾ, ಛತ್ತೀಸಗಢ, ಗೋವಾ ಮತ್ತು ಜಾರ್ಖಂಡ್ ಅತ್ಯುತ್ತಮ ಸಾಧಕ ರಾಜ್ಯಗಳಾಗಿ ಗುರುತಿಸಲಾಗಿದೆ.* ರಾಜ್ಯಗಳ ಜಿಡಿಪಿ, ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ, ಮತ್ತು ಹಣಕಾಸಿನ ಸ್ಥಿರತೆಯನ್ನು ಆಧರಿಸಿ ಆಯೋಗವು ಮೊದಲ ಬಾರಿಗೆ "ಹಣಕಾಸಿನ ಆರೋಗ್ಯ ಸೂಚ್ಯಂಕ – 2025" ಅನ್ನು ಸಿದ್ಧಪಡಿಸಿದೆ.* ಈ ಸೂಚ್ಯಂಕದಲ್ಲಿರುವ 18 ರಾಜ್ಯಗಳು ದೇಶದ ಜಿಡಿಪಿಗೆ ಶೇ. 85ರಷ್ಟು ಕೊಡುಗೆ ನೀಡುತ್ತವೆ. ಮಹಾಲೆಕ್ಕ ಪರಿಶೋಧಕರ ದತ್ತಾಂಶ ಆಧರಿಸಿ ಈ ರಾಜ್ಯಗಳ ಹಣಕಾಸಿನ ಸ್ಥಿತಿಯ ಬಗ್ಗೆ ವರದಿ ಸಿದ್ಧವಾಗಿದೆ. ವಿಶೇಷ ವರ್ಗದ ರಾಜ್ಯಗಳನ್ನು ಇದರಲ್ಲಿ ಸೇರಿಸಿಲ್ಲ.* 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಅವರು, ರಾಜ್ಯಗಳ ಹಣಕಾಸಿನ ಸಾಮರ್ಥ್ಯಗಳನ್ನು ಅರಿಯುವಿಕೆಯೇ ವರದಿಯ ಉದ್ದೇಶ ಎಂದು ಹೇಳಿದ್ದಾರೆ.* ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಕರ್ನಾಟಕ ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳದ ಹಣಕಾಸು ಕೆಟ್ಟ ಸ್ಥಿತಿಯಲ್ಲಿದೆ ವರದಿ ಸೂಚಿಸುತ್ತದೆ.* ಒಡಿಶಾದ ಗಣಿ ಸಂಪನ್ಮೂಲಗಳು 67.8% ಅತಿಹೆಚ್ಚು ದಾಖಲಿಸಲಾಗಿದೆ. ಸಾಲದ ಸೂಚ್ಯಂಕ 99.0 ಮತ್ತು ಸಾಲ ಸುಸ್ಥಿರತೆ 64.0 ಉತ್ತಮವಾಗಿದೆ. ಸಾರ್ವಜನಿಕ ವೆಚ್ಚದ ಗುಣಮಟ್ಟ ಮತ್ತು ಆದಾಯ ಕ್ರೋಡೀಕರಣವು ಸದೃಢವಾಗಿದೆ.* ಒಡಿಶಾದಲ್ಲಿ ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದೆ, ಹಾಗೂ ಜಿಎಸ್ಡಿಪಿ ವೃದ್ಧಿಯಾಗಿದೆ. ಕೇರಳ ಮತ್ತು ಪಂಜಾಬ್ ರಾಜ್ಯಗಳು ಸಾರ್ವಜನಿಕ ವೆಚ್ಚ ಮತ್ತು ಸಾಲದ ಸುಸ್ಥಿರತೆ ಹೆಚ್ಚಿಸಲು ಕಠಿಣ ಹೋರಾಟ ಮಾಡುತ್ತಿವೆ.* ಪಶ್ಚಿಮ ಬಂಗಾಳವು ವರಮಾನ ಕ್ರೋಡೀಕರಣ ಮತ್ತು ಸಾಲದ ಸುಸ್ಥಿರತೆ ಬಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಂಧ್ರಪ್ರದೇಶವು ವಿತ್ತೀಯ ಶಿಸ್ತಿನ ಕೊರತೆ ಮತ್ತು ಅಧಿಕ ವಿತ್ತೀಯ ಕೊರತೆ ಅನುಭವಿಸುತ್ತಿದೆ. ಹರಿಯಾಣವು ಸಾಲದ ಶಿಸ್ತು ಕಾಪಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದೆ.