Job Description: * ಆಹಾರ ಪದಾರ್ಥಗಳ ಟೊಮೆಟೊ,ಹಾಲು, ಸೇರಿದಂತೆ ಬೆಲೆ ಹೆಚ್ಚಳದ ಬೆನ್ನಲ್ಲೇ ರಿಟೇಲ್ ಹಣದುಬ್ಬರವು ಜುಲೈನಲ್ಲಿ ಶೇ.7.44ಕ್ಕೆ ಏರಿಕೆಯಾಗಿದೆ. * ಜೂನ್‌ನಲ್ಲಿ ಈ ದರವು ಶೇ.4.87ಇದ್ದು. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.6.71ರಷ್ಟಿತ್ತು. ಆದರೆ ಈ ಹಿಂದೆ 2022ರ ಏಪ್ರಿಲ್‌ನಲ್ಲಿ ದಾಖಲಾದ ಶೇ. 7.79ರ ಬಳಿಕ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. * ಸಗಟು ಬೆಳೆಗಳ ಆಧಾರದ ಮೇಲೆ ಹಣದುಬ್ಬರವು ಜುಲೈನಲ್ಲಿ ಮೈನಸ್ ಶೇ.1.36ಕ್ಕೆ ಇಳಿದಿದೆ. ಈ ಬೆಳವಣಿಗೆಯಿಂದ ಆ‌ರ್ ಬಿಐ ಮತ್ತೊಮ್ಮೆ ರೆಪೊದರ ಹೆಚ್ಚಳ ಮಾಡುವ ಸಾಧ್ಯತೆ ಇದ್ದು, ಇದರಿಂದ ಸಾಲಗಳ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ. * ಹಣದುಬ್ಬರ ಎಂದರೇನು? : ಆರ್ಥಿಕತೆಯ ಕಾಲಾವಧಿಯಲ್ಲಿ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಬೆಲೆಗಳ ಮಟ್ಟದ ಏರಿಕೆ ವರ್ಷದಿಂದ ವರ್ಷಕ್ಕೆ ಸಗಟು ದರ ಸೂಚ್ಯಂಕದಲ್ಲಿನ (Whole sale Price Index: WPI) ಶೇಕಡಾವಾರು ಬದಲಾವಣೆ ಮೂಲಕ ಹಣದುಬ್ಬರ ಪ್ರಮಾಣವನ್ನು ಗುರುತಿಸಲಾಗುತ್ತದೆ.